ದಿನಬಳಕೆಯಲ್ಲಿ ವಿದ್ಯಾರ್ಥಿಗಳು ಕನ್ನಡ ಬಳಸಬೇಕು
ಕಲಬುರಗಿ :ಮೇ.5: ಕಲಬುರಗಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು, ಹಮ್ಮಿಕೊಂಡ ಕಸಾಪದ 110ನೇ ಸಂಸ್ಥಾಪಕ ದಿನಾಚರಣೆ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಶಕುಂತಲಾ ಪಾಟೀಲ ಪದವಿ ಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ಬೇಲೂರು ಕ್ರಾಸ್ ಕಪನೂರ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಯಿತು
ಉದ್ಘಾಟನೆಯನ್ನು ಕಮಲಾಪುರ ಡಯಟ್ ಉಪನ್ಯಾಸಕರಾದ
ಶ್ರೀಮತಿ ರೇಣುಕಾ ವಿ ಹಿರೇಗೌಡ ಅವರು ದೀಪ ಹಚ್ಚುವ ಮೂಲಕ ಚಾಲನೆ ನೀಡಿ ವಿದ್ಯಾರ್ಥಿಗಳಿಗೆ ಕನ್ನಡ ದಿನಬಳಕೆಯಲ್ಲಿ ಬಳಸಬೇಕು ಅಂದಾಗ ಮಾತ್ರ ಕನ್ನಡ ಬೆಳೆಯುತ್ತದೆ ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಸಿಕ್ಕಿರುವುದು ಸಂತೋಷದ ವಿಷಯ ಜ್ಞಾನಪೀಠ ಪ್ರಶಸ್ತಿಗಳ ಪಡೆದ ಮಹಾನ್ ವ್ಯಕ್ತಿಗಳ ಎಲ್ಲಾ ಶಾಲೆ ಕಾಲೇಜುಗಳಲ್ಲಿ ಪರಿಚಯಿಸಬೇಕು ಎಂದು ಹೇಳಿದರು ವಿಶೇಷ ಉಪನ್ಯಾಸ ನೀಡಿದ ಶರಣಬಸವೇಶ್ವರ ವಿಶ್ವವಿದ್ಯಾಲಯದ ಸಾಯಕ ಪ್ರಾಧ್ಯಾಪಕರಾದ ಡಾ.ಚನ್ನಮ್ಮ ಎನ್. ಅಲ್ಬಾ ಅವರು ಮಾತನಾಡಿ
ಕನ್ನಡ ಸಾಹಿತ್ಯ ಪರಿಷತ್ ಪ್ರಾರಂಭವಾದಾಗಿನಿಂದ ಪ್ರಸ್ತುತ ಸಂದರ್ಭದವರೆಗೆ ಕುರಿತು ಸವಿಸ್ತಾರವಾಗಿ ಮಾತನಾಡಿದರು. ಬೆಂಗಳೂರಿನ ಶ್ರೀ ಕೃಷ್ಣರಾಜ್ ಷರನ್ಮಂದಿರದಲ್ಲಿ 1915 ರ ಸುಮಾರಿಗೆ ಕರ್ನಾಟಕ ಸಾಹಿತ್ಯ ಪರಿಷತ್ತು ಸ್ಥಾಪನೆಯಾಯಿತು.ಆಗ ಮೈಸೂರು ಅರಸರಾಗಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಪರಿಷತ್ತಿನ ಸ್ಥಾಪನೆಗೆ ಚಾಲನೆ ನೀಡಿದರು. ಮುಂದೆ ೧೯೩೫ರಲ್ಲಿ ಈ ಹೆಸರನ್ನು ಕನ್ನಡ ಸಾಹಿತ್ಯ ಪರಿಷತ್ತು ಎಂದು ಬದಲಾಯಿಸಿದರು.ಇದು ಕನ್ನಡ ಪುಸ್ತಕ ಪ್ರಕಟಣೆ, ಕನ್ನಡ ನಾಡು-ನುಡಿಯ ಸಂರಕ್ಷಣೆ ಮತ್ತು ಕನ್ನಡ ಭಾಷೆಗಾಗಿ ಶ್ರಮಿಸಲು ಕಟ್ಟಲಾಗಿರುವ ಸಂಸ್ಥೆ. ಈ ಸಂಸ್ಥೆ ಕರ್ನಾಟಕದಾದ್ಯಂತ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಏರ್ಪಡಿಸುತ್ತದೆ. ಕನ್ನಡ ಸಾಹಿತ್ಯವನ್ನು ನಾಡಿನ ಮೂಲೆ ಮೂಲೆಗಳಲ್ಲಿ ಹಬ್ಬಿಸಲು ಈ ಹಿಂದೆ ಸಾಧ್ಯವಾಗಿಸಿದೆ. ಈ ಸಂಸ್ಥೆಯ ಈಗಿನ ಅಧ್ಯಕ್ಷರಾಗಿ ಡಾ. ಮಹೇಶ್ ಜೋಷಿ ಅವರು ಅವಿರತವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಎಂದು ತಿಳಿಸಿದರು.ಅಧ್ಯಕ್ಷತೆಯನ್ನು ಕಾಲೇಜಿನ ಅಕಾಡೆಮಿಕ್ ನಿರ್ದೇಶಕ ಹಾಗೂ ಎಕ್ಸಲೆಂಟ್ ಅಕಾಡೆಮಿ ಅಧ್ಯಕ್ಷರಾದ ಡಾ. ಮನೋಜಕುಮಾರ್ ಎ. ಬುರುಬುರೇ ಅಧ್ಯಕ್ಷತೆ ವಹಿಸಿ ಮಾತನಾಡಿದರು ಮುಖ್ಯ ಅತಿಥಿಗಳಾಗಿ ಶ್ರೀ ಅರ್ಜುನ ಹತ್ತಿ. ಶಿವರಾಜ್ ಸಿ ಪಾಟೀಲ. ಕುಪೇಂದ್ರ ಬರಗಾಲಿ. ಶರಣು ಹಾಗರಗುಂಡಗಿ. ಆಕಾಶ ಮರಪಳ್ಳಿ. ವೇದಿಕೆ ಮೇಲೆ ಇದ್ದರು. ಕನ್ನಡ ಸಾಹಿತ್ಯ ಪರಿಷತ್ತು ತಾಲೂಕ ಅಧ್ಯಕ್ಷರಾದ ಶ್ರೀ ಗುರುಬಸಪ್ಪ ಎಸ್. ಸಜ್ಜನಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಪರಿಷತ್ತಿನಿಂದ ಹತ್ತು ಹಲವು ಕಾರ್ಯಕ್ರಮಗಳು ಮಾಡಲಾಗಿದ್ದು ಕನ್ನಡ ನಾಡು ನುಡಿ ಜಲದ ಬಗ್ಗೆ ಹಾಗೂ ಜ್ಞಾನಪೀಠ ಪ್ರಶಸ್ತಿ ಪ್ರಶಸ್ತಿ ಪಡೆದ ತಾಲೂಕುಯದಂತ ಎಲ್ಲಾ ಶಾಲೆ ಕಾಲೇಜುಗಳಲ್ಲಿ ಅವರ ಕುರಿತು ಉಪನ್ಯಾಸ ಮಾಡಿದ್ದೇವೆ ಮುಂಬರುವ ದಿನಗಳಲ್ಲಿ ಬಾಲಕಿಯರ ಕವಿಗೋಷ್ಠಿ. ಬಾಲಕರ ಕವಿಗೋಷ್ಠಿ. ಕಾವ್ಯ ಕಮಟ. ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ತಿಳಿಸಿದರು. ನಿರೂಪಣೆಯನ್ನು ಗೌರವ ಕಾರ್ಯದರ್ಶಿಗಳಾದ ವಿಶಾಲಕ್ಷಿ ಮಾಯಣ್ಣನವರ ಮಾಡಿದರು.
ಪ್ರಾರ್ಥನಾ ಗೀತೆಯನ್ನು ವಿದ್ಯಾರ್ಥಿನಿ ಸಾಕ್ಷಿ ಅವರು ಮಾಡಿದರು. ಗೌರವಕಾರ್ಯದರ್ಶಿಗಳಾದ ವಿಶ್ವನಾಥ್ ಸಿ ಯನಗುಂಟಿ ಅವರು ವಂದಿಸಿದರು.