ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ ಘೋಷಣೆ:ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಮೇ 6 ಕೊನೆ ದಿನ:ಬಿ.ಫೌಜಿಯಾ ತರನ್ನುಮ್
ಕಲಬುರಗಿ:ಮೇ.5: ಭಾರತ ಚುನಾವಣಾ ಆಯೋಗವು ಕರ್ನಾಟಕ ವಿಧಾನ ಪರಿಷತ್ತಿಗೆ ಈಶಾನ್ಯ ಪದವೀಧರ ಕ್ಷೇತ್ರದಿಂದ ನೂತನ ಸದಸ್ಯರ ಆಯ್ಕೆಗೆ ಚುನಾವಣೆ ಘೋಷಿಸಿದ್ದು, ನಮೂನೆ-18ರಲ್ಲಿ ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಇದೇ ಮೇ 6ರ ಸಾಯಂಕಾಲ 5.30 ಗಂಟೆ ವರೆಗೆ ಅವಕಾಶವಿದೆ. ಅರ್ಹ ಪದವೀಧರರು ಹೆಸರು ಸೇರಿಸಬೇಕು ಎಂದು ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.
ದಿ.01-11-2020 ಕ್ಕಿಂತ ಮೊದಲು ಪದವಿ ತೇರ್ಗಡೆಯಾದವರು ಪದವಿ ಅಂಕಪಟ್ಟಿ ಹಾಗೂ ಸ್ಥಳೀಯ ವಾಸಸ್ಥಳದ ಪುರಾವೆ ದಾಖಲೆಗಳನ್ನು ಸಂಬಂಧಿಸಿದ ತಹಶೀಲ್ದಾರ ಕಚೇರಿ ಹಾಗೂ ಕಲಬುರಗಿ ಮಹಾನಗರ ಪಾಲಿಕೆ ಕಚೇರಿಗೆ ಸಲ್ಲಿಸಿ ಹೆಸರು ಸೇರ್ಪಡೆ ಮಾಡಿಕೊಳ್ಳಬಹುದೆಂದು ಅವರು ಮನವಿ ಮಾಡಿದ್ದಾರೆ.