ಖಾಸಗಿ ಬಸ್ ನಿಲ್ದಾಣ ಅಭಿವೃದ್ಧಿ ಪಡಿಸಲಾಗುವುದು : ಸಚಿವ ಎಸ್.ಎಸ್ ಮಲ್ಲಿಕಾರ್ಜುನ
ಸಂಜೆವಾಣಿ ವಾರ್ತೆ
ದಾವಣಗೆರೆ.ಮೇ.5;ಅಶೋಕ ರಸ್ತೆ, ಡಿಸಿಎಂ ರಸ್ತೆ, ಹದಡಿ ರಸ್ತೆಯಲ್ಲಿ ಸಂಚರಿಲು ಸವಾರರು ಭಯಪಡುವಂತಾಗಿದೆ ಎಂದು ಸಚಿವ ಎಸ್.ಎಸ್ ಮಲ್ಲಿಕಾರ್ಜುನ ಅವರು ಸಂಸದ ಜಿಎಂ ಸಿದ್ದೇಶ್ವರ ವಿರುದ್ದ ಕಿಟಿಕಾರಿದರು.ನಗರದ ಖಾಸಗಿ ಬಸ್ ಮಾಲೀಕರ ಸಂಘ ಹಾಗೂ ಚಾಲಕರ ಸಂಘದಿಂದ ಹಮ್ಮಿಕೊಂಡಿದ್ದ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಸಭೆಯನ್ನುದ್ದೇಶಿಸಿ ಮಾತನಾಡಿದರು.ಅಶೋಕ ರಸ್ತೆ ಅವೈಜ್ಞಾನಿಕ ಕಾಮಗಾರಿಯಿಂದ ಕೂಡಿದೆ. ಡಿಸಿಎಂ ರಸ್ತೆ ಹಾವು ಸುತ್ತಿದ ಹಾಗೇ ಸುತ್ತಬೇಕು, ಹದಡಿ ರಸ್ತೆ ಆಕ್ಸಿಡೆಂಟ್ ಸ್ಪಾಟ್ ಆಗಿದೆ. ಈ ರೀತಿ ಸಂಸದರು ರಸ್ತೆಗಳ ಅಭಿವೃದ್ಧಿ ಮಾಡಿರುವರು ಎಂದು ದೂರಿದ ಅವರು ದೇಶದಲ್ಲಿ ಶೇಕಡ 80 ರಂದು ನಿರುದ್ಯೋಗ ಸಮಸ್ಯೆ ಇದೆ. ಜಪಾನ್ ಜರ್ಮನಿಯಂತೆ ಉದ್ಯೋಗ ಸೃಷ್ಠಿ ಮಾಡಬೇಕಿದೆ.ನಮ್ಮ ಸರ್ಕಾರ ನೀಡಿದ ಗ್ಯಾರೆಂಟಿ ಯೋಜನೆಗಳಿಂದ ಉಪಯುಕ್ತವಾಗಿದ್ದ ಬಡ ಕುಟುಂಬಗಳು ನೆಮ್ಮದಿಯ ಜೀವನ ಮಾಡುತ್ತಿವೆ. ದಾವಣಗೆರೆಯಲ್ಲಿ ಭವ್ಯವಾದ ಖಾಸಗಿ ಬಸ್ ನಿಲ್ದಾಣ ಆಗಬೇಕಿತ್ತು. ಖಾಗಸಿ ಬಸ್ ನಿಲ್ದಾಣವನ್ನು ನಾವು ಅಭಿವೃದ್ಧಿ ಪಡಿಸಲು ಪಣ ತೊಟ್ಟಿದ್ದೇವೆ ಎಂದರು.