ಕೆರೆ ತುಂಬಿಸುವ ಯೋಜನೆ ನಮ್ಮ ಸಾಧನೆ: ಶಾಸಕರಾದ ಎಸ್.ವಿ ರಾಮಚಂದ್ರ- ಎಚ್.ಪಿ.ರಾಜೇಶ್

ಸಂಜೆವಾಣಿ ವಾರ್ತೆ
ಜಗಳೂರು.ಮೇ.5; ‘ದೇಶದ ಸಮಗ್ರ ಅಭಿವೃದ್ಧಿ ಮತ್ತು ಭದ್ರತೆಗಾಗಿ ಮತ್ತೊಮ್ಮೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಚನೆಗಾಗಿ ಪ್ರತಿಯೊಬ್ಬರೂ ಬಿಜೆಪಿಯನ್ನು ಬೆಂಬಲಿಸಬೇಕು’ ಎಂದು ಮಾಜಿ ಶಾಸಕ ಎಸ್.ವಿ. ರಾಮಚಂದ್ರ ಕೋರಿದರು.ತಾಲ್ಲೂಕಿನ ದಿದ್ದಿಗೆ ಗ್ರಾಮದಲ್ಲಿ ಗುರುವಾರ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗಿಯಾಗಿ ಅವರು ಮಾತನಾಡಿದರು.ತಾಲ್ಲೂಕಿನಲ್ಲಿ 57 ಕೆರೆ ತುಂಬಿಸುವ ಯೋಜನೆಗಳು, ನೀರಾವರಿ ಯೋಜನೆಗಳು ಜಾರಿಗೆ ಬರುವಲ್ಲಿ ಶ್ರೀಗಳ ಪಾತ್ರ ಮುಖ್ಯವಾಗಿದೆ. ನಾವೂ ಸಹ ಯೋಜನೆ ಜಾರಿಗೆ ಕಷ್ಟಪಟ್ಟಿದ್ದೇವೆ. ಆದರೆ ಕಾಂಗ್ರೆಸ್ ಪಕ್ಷದವರು ನೀರಾವರಿಯೋಜನೆ ನಮ್ಮದು ಎಂದು ಬಿಂಬಿಸಿ- ಕೊಳ್ಳುತ್ತಿದ್ದಾರೆ. ಸಂಸದರಾದ ಜಿ.ಎಂ. ಸಿದ್ದೇಶ್ವರ್ ನೀರಾವರಿ ಯೋಜನೆಗಳ ಮಂಜೂರಾತಿಗೆ ಶ್ರಮಿಸಿದ್ದಾರೆ. ಹೀಗಾಗಿ ಮತ್ತೊಮ್ಮೆ ಕ್ಷೇತ್ರದಲ್ಲಿ ಬಿಜೆಪಿಗೆ ಎಲ್ಲರೂ ಬೆಂಬಲ ನೀಡಬೇಕು’ ಎಂದು ಮನವಿ ಮಾಡಿದರು.ನಾನು ಮತ್ತು ಎಸ್.ವಿ. ರಾಮಚಂದ್ರ ಅವರು ಶಾಸಕರಾಗಿದ್ದಾಗ 57 ಕೆರೆ ತುಂಬಿಸುವ ಯೋಜನೆಗಾಗಿ ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇವೆ’ ಎಂದು ಮಾಜಿ ಶಾಸಕ ಎಚ್.ಪಿ. ರಾಜೇಶ್ ಹೇಳಿದರು.ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯ ಫಲವಾಗಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೀನಾಯ ಸೋಲಾಗಲಿದೆ. ದೇಶಕ್ಕೋಸ್ಕರ ಬಿಜೆಪಿಯ ಗಾಯತ್ರಿ ಸಿದ್ದೇಶ್ವರ ಅವರು ಗೆಲ್ಲಬೇಕಿದೆ ಎಂದು ಜೆಡಿಎಸ್ ಮುಖಂಡ ಕೆ.ಬಿ. ಕಲ್ಲೇರುದ್ರೇಶ್ ಮನವಿ ಮಾಡಿದರು.ಜಗಳೂರು ತಾಲ್ಲೂಕಿನ ದಿದ್ದಿಗೆ ಗ್ರಾಮದಲ್ಲಿ  ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾಜಿ ಶಾಸಕ ಎಸ್‌ವಿ. ರಾಮಚಂದ್ರ, ಎಚ್‌.ಪಿ. ರಾಜೇಶ್, ಜೆಡಿಎಸ್‌ ಮುಖಂಡ ಕೆ.ಬಿ. ಕಲ್ಲೇರುದ್ರೇಶ್ ಭಾಗವಹಿಸಿದ್ದರು.ತಾಲ್ಲೂಕಿನ ದಿದ್ದಿಗೆ, ಕಾಟೇನಹಳ್ಳಿ, ಸೂರಗೊಂಡನಹಳ್ಳಿ ಗ್ರಾಮಗಳಲ್ಲಿ ಮುಂತಾದ ಪ್ರಚಾರ ಸಭೆ ನಡೆಯಿತು. ಮುಖಂಡರಾದ ತಳವಾರ ಶೇಖರಪ್ಪ, ತಳವಾರ ಚೌಡಪ್ಪ, ಅಭಿ, ಹೇಮಂತ್, ಬಸವರಾಜ್, ಅನಿಲ್, ಮಂಜುನಾಥ್, ಭೀಮಣ್ಣ ಇತರರು ಪಾಲ್ಗೊಂಡಿದ್ದರು.