ಗಾಯತ್ರಿ ಸಿದ್ದೇಶ್ವರ್ ಗೆ ರೈತ ಸೇನೆ ಬೆಂಬಲ

ಸಂಜೆವಾಣಿ ವಾರ್ತೆ
ದಾವಣಗೆರೆ.ಮೇ.೫ : ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್ ಅವರಿಗೆ ಕರ್ನಾಟಕ ರೈತರ ಸೇನೆ ಬೆಂಬಲ ಘೋಷಿಸಿದೆ. ರೈತ ಸೇನೆ ರಾಜ್ಯಾಧ್ಯಕ್ಷ ಉಜ್ಜನಗೌಡ ಬಿದರಿಕೆರೆ, ಕಾರ್ಯಾಧ್ಯಕ್ಷ ಎಂ.ರಮೇಶ್ ನೆಲಹೊನ್ನೆ, ಮಹಿಳಾ ರಾಜ್ಯಾಧ್ಯಕ್ಷೆ ಭಾಗ್ಯಲಕ್ಷ್ಮಿ, ಪ್ರಧಾನ ಕಾರ್ಯದರ್ಶಿ ಸಿ.ಎಚ್.ಪದ್ಮ, ಎಚ್.ಎಸ್.ಅನಿತಾ, ಎಸ್.ಡಿ.ಗೀತಾ, ಶಶಿಕಲಾ, ಕೆ.ಬಿ.ಔಡಮ್ಮ, ರಮೇಶ್, ಮಂಜಣ್ಣ ಹೊಸಹಟ್ಟಿ ಸೇರಿದಂತೆ ಪದಾಧಿಕಾರಿಗಳು, ಸದಸ್ಯರು ಗಾಯಿತ್ರಿ ಸಿದ್ದೇಶ್ವರ್ ಅವರಿಗೆ ಸಂಪೂರ್ಣ ಬೆಂಬಲ  ಕೊಡುವುದಾಗಿ ಘೋಷಿಸಿದ್ದಾರೆ.