ನನ್ನನ್ನು ಗೆಲ್ಲಿಸಿ ಸಂಸತ್ತಿಗೆ ಕಳಿಸುವ ಹೊಣೆ ನಿಮ್ಮದು
ಸಂಜೆವಾಣಿವಾರ್ತೆ
ಹರಪನಹಳ್ಳಿ.ಮೇ.5: ಕಳೆದ 25ವರ್ಷದಿಂದ ಇಲ್ಲಿಯ ಲೋಕಸಭಾ ಸದಸ್ಯರ ಸಾಧನೆ ಶೂನ್ಯವಾಗಿದೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭ ಮಲ್ಲಿಕಾರ್ಜುನ ಆರೋಪಿಸಿದರು.ಪಟ್ಟಣದಲ್ಲಿ ಭರ್ಜರಿ ರೋಡ್‌ಶೋ ಮೂಲಕ ಮತಯಾಚನೆ ಮಾಡಿ ಐ.ಬಿ.ವೃತ್ತದ ಬಹಿರಂಗಸಭೆಯಲ್ಲಿ ಮಾತನಾಡಿದರು.ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಎಂಟು ಜನ ಶಾಸಕರಲ್ಲಿ ಏಳು ಜನ ಶಾಸಕರು ಕಾಂಗ್ರೆಸ್ ಪಕ್ಷದವರಾಗಿದ್ದು, ಆದರೆ ಕಾಂಗ್ರೆಸ್ ಪಕ್ಷದ ಸಂಸದರ ಕೊರತೆ ಎದ್ದು ಕಾಣುತ್ತಿದ್ದು, ಆ ಕೊರತೆಯನ್ನು ಈ ಬಾರಿ ನನಗೆ ಮತ ಹಾಕುವುದರ ಮೂಲಕ ನೀಗಿಸಬೇಕು ಎಂದ ಅವರು ತಾಲೂಕಿನಲ್ಲಿ ಕೈಗಾರಿಕೆಗಳು, ವಸತಿ, ಆಸ್ಪತ್ರೆ ಹಾಗೂ ಇತರೆ ಮೂಲಸೌಕರ್ಯ ಕುರಿತ ಪ್ರಭ ಪ್ರಣಾಳಿಕೆ ಮಾಡಿದ್ದು ನಿಮ್ಮೆಲ್ಲರ ಪ್ರಣಾಳಿಕೆಗೆ ಉತ್ಸಾಹದಿಂದ ಹೆಚ್ಚಿನ ಮತದಾನ ಮಾಡಿ ಅಭೂತಪೂರ್ವವಾಗಿ ಗೆಲುವಿಗೆ ಕಾರಣರಾಗಬೇಕು ಎಂಧರು.ಗ್ಯಾರAಟಿ ಯೋಜನೆಗಳ ಬಗ್ಗೆ ಜನರಿಗೆ ನಂಬಿಕೆ ಇದ್ದು, ಬಡವರ, ಮಹಿಳೆಯರ ಪರವಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ಕೆಲಸ ಮಾಡುತ್ತಿದೆ. ನಾನು ಸಹ ಲೋಕಸಭೆಯಲ್ಲಿ ಜನರ ಧ್ವನಿಯಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಮಾತನಾಡಿ ಕಳೆದ 11 ತಿಂಗಳಲ್ಲಿ ಹರಪನಹಳ್ಳಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೇನೆ, ಹರಪನಹಳ್ಳಿ ಪಟ್ಟಣಕ್ಕೆ 100ಕೋಟಿ ರೂ. ಅನುದಾನ ತಂದಿದ್ದೇನೆ, ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದ ಅವರು ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಿAದ ಬಡವರ ಬದುಕು ಹಸನಾಗಿದ್ದು, ಅದರಲ್ಲೂ ಮಹಿಳೆಯರಿಗೆ ಸಾಕಷ್ಟು ಅನುಕೂಲವಾಗಿದೆ ಆದ್ದರಿಂದ ಎಲ್ಲರೂ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭ ಮಲ್ಲಿಕಾರ್ಜುನ ಅವರಿಗೆ ಹರಪನಹಳ್ಳಿ ಕ್ಷೇತ್ರದಿಂದ ಹೆಚ್ಚಿನ ಮತಗಳನ್ನು ನೀಡಿ ಗೆಲುವಿಗೆ ಸಹಕಾರಿಯಾಗಬೇಕು ಎಂದರು.ಕಾಂಗ್ರೆಸ್ ಮುಖಂಡ ಎನ್.ಕೊಟ್ರೇಶ್ ಮಾತನಾಡಿ ಕೇಂದ್ರದಲ್ಲಿ 10 ವರ್ಷ ಆಡಳಿತ ಮಾಡಿದ ಬಿಜೆಪಿ ಸರ್ಕಾರ ಕೇವಲ ಸುಳ್ಳು ಭರವಸೆಗಳ ಮೂಲಕ ಜನರ ದಿಕ್ಕನ್ನು ತಪ್ಪಿಸುತ್ತಿದ್ದು, ರಾಜ್ಯದಲ್ಲಿ ನುಡಿದಂತೆ ನಡೆದ ಸರ್ಕಾರ ಅಂದರೆ ಕಾಂಗ್ರೆಸ್ ಪಕ್ಷವಾಗಿದ್ದು ತಾವೆಲ್ಲರೂ ಕಾಂಗ್ರೆಸ್ ಪಕ್ಷದ ಹಸ್ತದ ಗುರುತಿಗೆ ಮತ ಹಾಕಿ ಎಂದರು.