ಭಾವಸಾರ ಕ್ಷತ್ರಿಯ ಸಮಾಜದ ಭಜನಾ ಮಂಡಳಿಯಿಂದ ಗಾಯತ್ರಿ ಸಿದ್ದೇಶ್ವರ್ ಗೆ ಬೆಂಬಲ
ಸಂಜೆವಾಣಿ ವಾರ್ತೆ
ದಾವಣಗೆರೆ: ಭಾವಸಾರ ಕ್ಷತ್ರಿಯ ಸಮಾಜದ ಭಜನಾ ಮಂಡಳಿ, ತರುಣ್ ಮಂಡಳಿ, ಮಹಿಳಾ ಮಂಡಳಿ, ಕಲಾವತಿ ಮಹಿಳಾ ಮಂಡಳಿ ಇತರೆ ಅಂಗ ಸಂಸ್ಥೆಗಳು ಮತ್ತು ಸಮಾಜ ಬಾಂದವರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಅವರಿಗೆ ಬೆಂಬಲ ಸೂಚಿಸಿ, ಗೆಲುವಿಗೆ ಶ್ರಮಿಸುವುದಾಗಿ ಘೋಷಿಸಿದ್ದಾರೆ. ಈ ವೇಳೆ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ, ಸಂಸದ ಡಾ.ಜಿ.ಎಂ.ಸಿದ್ದೇಶ್ವರ, ದೂಡಾ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಒಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ರಘು ಅಂಬಕ್ಕರ್, ಪಾಲಿಕೆ ಸದಸ್ಯ ಶಿವಕುಮಾರ್, ಶ್ರೀನಿವಾಸ್, ರಂಗನಾಥ್ ನವುಲೆ, ಎಚ್.ಬಿ.ನವೀನ್, ಭಾವಸಾರ ಕ್ಷತ್ರಿಯ ಸಮಾಜದ ಗೌರವಾಧ್ಯಕ್ಷ ಚಂದ್ರಕಾಂತ್ ವಾದನಿ ಜೊತೆಯಲ್ಲಿದರು.