ನೀವೇ ನಮ್ಮ ಅಭ್ಯರ್ಥಿ ಗೆಲುವಿಗೆ ನಿರ್ಣಾಯಕ : ಪ್ರಶಾಂತ್
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮೇ.05: ಈ ಕ್ಷೇತ್ರದ ಹೆಚ್ಚಿನ ಸಂಖ್ಯೆಯಲ್ಲಿರುವ ಮತದಾರರ  ಸಮುದಾಯಗಳಲ್ಲಿ ವಾಲ್ಮೀಕಿ ಸಮಾಜವೂ ಒಂದಾಗಿದ್ದು. ನಿಮ್ಮ  ಸಮುದಾಯದ ಮತಗಳು ನಮ್ಮ ಅಭ್ಯರ್ಥಿಯ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಲಿವೆಂದು ನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ಲಂ ಪ್ರಶಾಂತ್ ಹೇಳಿದ್ದಾರೆ.
ಅವರು ಇಂದು ನಗರದ ಖಾಸಗಿ ಹೊಟೇಲ್ ನಲ್ಲಿ ಹಮ್ಮಿಕೊಂಡಿದ್ದ ವಾಲ್ಮೀಕಿ ಸಮುದಾಯದ ಮುಖಂಡರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಕ್ಷೇತ್ರದ ಎಲ್ಲಾ ನಾಲ್ಕು ವಿಧಾನ ಸಭಾ ಕ್ಷೇತ್ರದಲ್ಲಿ ವಾಲ್ಮೀಕಿ ಸಮುದಾಯದ ಶಾಸಕರು ಇದ್ದಾರೆ. ಇವರೆಲ್ಲ ಮತದಾರರ ಮನವೊಲಿಸಿ ಸಮುದಾಯದ ಬಹುತೆಕ ಮತಗಳನ್ನು  ಪಕ್ಷದ ಅಭ್ಯರ್ಥಿಗೆ ಕೊಡಿಸುವಲ್ಲಿ ಶ್ರಮಿಸಿದರೆ ಗೆಲುವಿನ ಅಂತರ ಮತ್ತಷ್ಟು ಹೆಚ್ಚಲಿದೆಂದು ಹೇಳಿದರು.
ಸಭೆಯಲ್ಲಿ ವಾಲ್ಮೀಕಿ ಸಮುದಾಯದ ಮುಖಂಡರುಗಳಾದ ಬಿ.ರಾಂಪ್ರಸಾದ್, ಜಯರಾಂ, ಪರುಶುರಾಂ, ಬಿ.ವೆಂಕಟೇಶ್ ಪ್ರಸಾದ್, ಪಾಲಿಕೆ ಸದಸ್ಯ ರಾಜಶೇಖರ್,  ಉಪಮೇಯರ್ ಜಾನಕಿ, ಬಿ.ಮುರುಳಿ ಕೃಷ್ಣ, ಅಸುಂಡಿ ಹೊನ್ನೂರಪ್ಪ, ಪಿ.ಜಗನ್ನಾಥ, ನಾಗಮ್ಮ ಮೊದಲಾದವರು ಇದ್ದರು.