ಸೈಕಲ್ ಱ್ಯಾಲಿಗೆ ಚಾಲನೆಮತ್ತೆ ಪ್ರತ್ಯೇಕ್ಷರಾದ ದಿವಾಕರಬಾಬು
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ.05: ಕಳೆದ ವಿಧಾನ ಸಭೆ ಚುನಾವಣೆ ನಂತರ ಪಕ್ಷದ ಯಾವುದೇ ಕಾರ್ಯಕ್ರನಗಳಲ್ಲಿ ಕಾಣಿಸಿಕೊಳ್ಳದ ಮಾಜಿ ಸಚಿವ ಎಂ.ದಿವಾಕರ ಬಾಬು ಲೋಕಸಭಾ  ಚುನಾವಣೆಯ ಬಹಿರಂಗ ಪ್ರಚಾರದ ಕೊನೆಯ ದಿನವಾದ ಇಂದು ಮತ್ತೆ ಕಾಂಗ್ರೆಸ್ ಪಕ್ಷದಲ್ಲಿ ಪತ್ತೆಯಾಗಿದ್ದಾರೆ.
ಅಭ್ಯರ್ಥಿ ಈ ತುಕಾರಾಂ ಅವರಿಗೆ ಮತ‌ನೀಡುವಂತೆ ಯುವ ಕಾಂಗ್ರೆಸ್  ಹಮ್ಮಿಕೊಂಡಿದ್ದ ಸೈಕಲ್ ಱ್ಯಾಲಿಗೆ ದುರ್ಗಮ್ಮ ದೇವಸ್ಥಾನದ ಬಳಿ  ಚಾಲನೆ ನೀಡಿದರು.
ಕಳೆದ 10 ವರ್ಷಗಳಲ್ಲಿ ಉಳ್ಳವರ ಪರವಾಗಿ ಅಡಳಿತ ನಡೆಸಿದ ಬಿಜೆಪಿ ಪಕ್ಷ ವನ್ನು ಧಿಕ್ಕರಿಸುವ ಮೂಲಕ  ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕು ಎಂದು ಹೇಳಿದರು.
ಯುವ ಕಾಂಗ್ರೆಸ್ ಉಪಾಧ್ಯಕ್ಷ ವೇಣುಗೋಪಾಲ್.ಬ್ಲಾಕ್ ಅದ್ಯಕ್ಷ ತೇಜಸ್ಸ್ ಕುಮಾರ್.ಶಿವರಾಮ ಕೃಷ್ಣ. ಗೌತಮ್.ಅಬ್ಧುಲ್ ಮಾರ್ಕೆಟ್ ಬುಜ್ಜಿ.ಹಮಾಲಿ ವಿರೇಶ್.ದೇವಿನಗರ ಸತ್ಯ.ಡಿಶ್ ರಾಮಾಂಜೀನಿ ದಾರದ ಮೀಲ್ ಶೇಖರ್.ಜಾಶ್ವ.ಡಿ.ಸುರೇಶ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.