ಮೋದಿಯವರಿಂದ ದೇಶದಲ್ಲಿ ಟೆರರಿಸಂ, ನಕ್ಸಲಿಸಂ  ನಿಯಂತ್ರಣ:ಸದಾನಂದಗೌಡ
ಸಂಜೆವಾಣಿ ವಾರ್ತೆ
ಬಳ್ಳಾರಿ, ಮೇ.05 : ಮೋದಿಯವರು ದೇಶದ ಪ್ರಧಾನಿಯಾದ ನಂತರ ದೇಶದಲ್ಲಿ ಟೆರರಿಸಂ, ನಕ್ಸಲಿಸಂ ಸಂಪೂರ್ಣ ನಿಯಂತ್ರಣಕ್ಕೆ ಬಂದಿದೆ. ಜೊತೆಗೆ ದೇಶದ ಆರ್ಥಿಕವಾಗಿಯೂ ಬಲಾಢ್ಯಗೊಳುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಸದಾನಂದಗೌಡ ಅಭಿಪ್ರಾಯಪಟ್ಟರು.
ಅವರಿಂದು ನಗರದಲ್ಲಿನ ಬಿಜೆಪಿ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ,, ಈ ಬಾರಿ ಚುನಾವಣೆ ದೇಶವನ್ನು ಲಾಜಿಕಲ್ ಎಡ್ ಗೆ ತೆಗೆದುಕೊಂಡು ಹೋಗುವ ಚುನಾವಣೆಯಾಗಿದೆ .
ಕಳೆದ ಚುನಾವಣೆಯ ಪ್ರಣಾಳಿಕೆ ಯಲ್ಲಿ ಹೇಳಿದ ಹಾಗೆ ಶ್ರೀರಾಮ ಮಂದಿರ ಸೇರಿ ಎಲ್ಲವನ್ನು ಬಿಜೆಪಿ ಈಡೇರಿಸಿದೆ ಎಂದರು..
ಮೋದಿ ಅವರ ಕ್ಯಾಬಿನೆಟ್ ನ ಒಬ್ಬ ಸಚಿವನ ಮೇಲೆ ಕಪ್ಪು ಚುಕ್ಕೆ ಇಲ್ಲ. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರು ಮೋದಿ ಅವರನ್ನ ಅವಹೇಳನ ಮಾಡುವುದನ್ನ ಬಿಟ್ಟು ಬೇರೆ ಮಾತಾಡ್ತಾ ಇಲ್ಲ. ಸಿದ್ದರಾಮಯ್ಯ ಕಳೆದ ಚುನಾವಣೆಯ ಗುಂಗಿನಲ್ಲಿ ಇದ್ದಾರೆ. ಅವರ ಹುಚ್ಚು ರಾಜಕಾರಣಕ್ಕೆ ದೊಡ್ಡ ಬೆಲೆ ಕೊಡಬೇಕಾಗತ್ತದೆ ಎಂದರು.
ಕೇಂದ್ರದವರು ಕರ್ನಾಟಕ್ಕೆ ಏನು ಮಾಡಿಲ್ಲ ಅಂತಾರೆ. ಸಾರ್ವಜನಿಕ ವೇದಿಕೆಗೆ ಬನ್ನಿ ಚರ್ಚೆ ಮಾಡಿ, ನಿಮ್ಮ ಸುಳ್ಳಿಗೆ ಫುಲ್ ಸ್ಟಾಪ್ ಹಾಕ್ತೇವೆ ಎಂದರು.. ಕೆಂದ್ರದ ಲಾ ಅಂಡ್ ಆರ್ಡರ್ ಹಾಗೂ ರಾಜ್ಯದ ಲಾ ಅಂಡ್ ಆರ್ಡರ್ ನೋಡಿದರೆ ರಾಜ್ಯ ಸರ್ಕಾರದಲ್ಲಿ ಲಾ ಅಂಡ್ ಆರ್ಡರ್ ಕುಸಿದಿರುವುದು ಕಂಡುಬರುತ್ತದೆ. ಇದಕ್ಕೆ ಸಾಕ್ಷಿ. ರಾಜ್ಯದಲ್ಲಿ ಕುಕ್ಕರ್ ನಿಂದ‌ ಹಿಡಿದು ಹೋಟೆಲ್ ವರೆಗೂ ಬ್ಲಾಸ್ಟ್ ಆಗಿರುವುದೇ ಆಗಿದೆ.
ಜನ‌ ಇದನ್ನ ತುಲನೆ ಮಾಡಿ ನೋಡ್ತಾರೆ ಎಂದರು.
 ಬಳ್ಳಾರಿಯಲ್ಲಿ ಈ ಹಿಂದೆ ಸೋನಿಯಾ ಗಾಂಧಿ ಸ್ಪರ್ಧಿಸಿ ಗೆದ್ದು ನಂತರ ಓಡಿ ಹೋದರು ಎಂದರು.
 ಪೆನ್ ಡ್ರೈವ್ ಪ್ರಕರಣ
ಪ್ರಜ್ವಲ್ ರೇವಣ್ಣ ಅವರ ಪೆನ್ ಡ್ರೈವ್ ಪ್ರಕರಣ ಬಗ್ಗೆ ಮಾತನಾಡಿದ ಅವರು ಈ ಪ್ರಕರಣ  ಹೆಚ್ಚು ಪ್ರಭಾವ ಬೀರಲ್ಲ. ನನಗೆ ಹಚ್ಚಿನ ಮಾಹಿತಿ ಇಲ್ಲ, ಹೀಗಾಗಿ ಅಷ್ಟೊಂದು ಈ ಬಗ್ಗೆ ಮಾತನಾಡಲ್ಲ. ಎಂದರು.
ಅದ್ರೇ ಕಾಂಗ್ರೆಸ್ ನವರು ಅದನ್ನೇ ದೊಡ್ಡ ಇಷ್ಯೂ ಮಾಡ್ತಿದ್ದಾರೆ. ಉಪ್ಪು ತಿಂದವರು ನೀರು ಕುಡಿಯಲಿ ಎಂದಿದ್ದಾರೆ, ನಾನು ಹಾಗೆ ಹೇಳುವೆ.
ತನಿಖೆ ನಡೆಯುತ್ತಿರುವುದರಿಂದ ನಾನು ಹೆಚ್ಚು ಕಾಮೆಂಟ್ ಮಾಡಲ್ಲ. ಒಲ್ಡ್ ಮೈಸೂರು ಭಾಗದಲ್ಲಿ ನಮಗೆ ಸ್ವಲ್ಪ ಹಿನ್ನೆಡೆ ಇದೆ. ಪ್ರಜ್ವಲ್ ರೇವಣ್ಣ ಪ್ರಕರಣ ಈಗ ಸದ್ದು ಮಾಡಿದಷ್ಟು ಆ ಭಾಗದ ಚುನಾವಣೆ ಮುನ್ನ ಸದ್ದು ಮಾಡಿದ್ರೆ ಹಿನ್ನೆಡೆ ಆಗ್ತಿತ್ತು. ಅವರ ದೋಸ್ತಿ ಮಾಡಿದ ನಮಗೂ ಹಿನ್ನಡೆಯಾಗ್ತಿತ್ತು. ಸದ್ಯಉತ್ತರ ಕರ್ನಾಟಕದ 14 ಕ್ಷೇತ್ರದ ಮೇಲೆ ಅದರ ಪರಿಣಾಮ ಬೀರಲ್ಲ. ಎಂದರು.
ಸುದ್ದಿಗೋಷ್ಡಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ  ಅನಿಲ್ ಕುಮಾರ್ ಮೋಕ. ಮಾಜಿ ಅಧ್ಯಕ್ಷ  ಮುರಹರಗೌಡ. ಬಿಜೆಪಿ ಮುಖಂಡರಾದ ಗುತ್ತಿಗನೂರು  ವಿರುಪಾಕ್ಷಗೌಡ. ಎಚ್ ಹನುಮಂತಪ್ಪ.   ವೀರಶೇಕರರೆಡ್ಡಿ. ದಮ್ಮೂರ್ ಶೇಖರ್. ಮಹೇಶ್ವರ ಸ್ವಾಮಿ, ಡಾಕ್ಟರ್ ಬಿ ಕೆ ಸುಂದರ್. ರಾಘವೇಂದ್ರ. ಜನಾರ್ಧನ್. ಮಲ್ಲೇಶ್.  ಜಿಲ್ಲಾ  ಮಾಧ್ಯಮ ಸಂಚಾಲಕ  ರಾಜೀವ್ ತೊಗರಿ‌ ಇತರರು ಉಪಸ್ಥಿತರಿದ್ದರು.