ಬಳ್ಳಾರಿ: ಬಿಎಸ್.ಪಿ ಮೂರು ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮೇ 5: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಮೂರು ಕ್ಷೇತ್ರಗಳಲ್ಲಿ ಬಹುಜನ ಸಮಾಜ ಪಾರ್ಟಿ (ಬಿಎಸ್.ಪಿ) ಅಭ್ಯರ್ಥಿಗಳು ವಿಜಯ ಸಾಧಿಸಲಿದ್ದಾರೆ ಎಂಬ ವಿಶ್ವಾಸವನ್ನು ಬಿಎಸ್.ಪಿ ರಾಜ್ಯ  ಸಂಯೋಜಕ ಕೃಷ್ಣಮೂರ್ತಿ  ವ್ಯಕ್ತಪಡಿಸಿದ್ದಾರೆ.
ಅವರು ನಿನ್ನೆ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ  ಮಾತನಾಡಿದರು.ಕಾಂಗ್ರೆಸ್ ಬಿಜೆಪಿ ಪಕ್ಷಗಳ ನಂತರ ದೇಶದ ಮೂರನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಎಸ್.ಪಿ ಬಗ್ಗೆ ರಾಜ್ಯದ ಮತದಾರರಿಂದ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆಂದ ಅವರು.
ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ   ಅಭಿವೃದ್ಧಿಯಲ್ಲಿ‌ ಹಿಂದುಳಿದಿದೆ. ಗಣಿಗಾರಿಕೆ, ಮರಳುಗಾರಿಕೆಯನ್ನು ಪ್ರಭಾವಿತ ಜನಪ್ರತಿನಿಧಿಗಳೇ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಇಲ್ಲಿ ಆಧುನಿಕ‌ ಆಸ್ಪತ್ರೆಗಳು ನಿರ್ಮಾಣವಾಗಿಲ್ಲ. ಮೂಲಭೂತ ಸೌಲಭ್ಯಗಳು ಮರೀಚಿಕೆಯಾಗಿವೆ. ಬರ, ಕಡು ಬಿಸಿಲಿನಿಂದ‌ ಜನರ ಬಜರ್ಝಿತಗೊಂಡಿದ್ದಾರೆ.
ನೈಸರ್ಗಿಕ ಸಂಪತ್ತನ್ನು ಲೂಟಿ‌ಮಾಡಿರುವ
ಕಾಂಗ್ರೆಸ್ ಮತ್ತು ಬಿಜೆಪಿ ಇಲ್ಲಿನ  ಜನತೆಗೆ  ಚೆಂಬು, ಚಿಪ್ಪು ನೀಡಿವೆ ಎಂದು ಟೀಕಿಸಿದರು.
ಈ ಎರಡು ಪಕ್ಷಗಳ ಜನ ವಿರೋಧಿ, ನೀರಸ ಆಡಳಿತ ನೋಡಿರುವ ಮತದಾರರು ಈ ಬಾರಿ ಬಿಎಸ್.ಪಿ ಬಗ್ಗೆ ಒಲವು ತೋರುತ್ತಿದ್ದಾರೆ  ಎಂದರು.
ಬಿಎಸ್.ಪಿ ರಾಜ್ಯ ಉಪಾಧ್ಯಕ್ಷ ಹಾಸನದ ಗಂಗಾಧರ ಬಹುಜನ್ ಪಕ್ಷದ ಅಭ್ಯರ್ಥಿ ವಾಲ್ಮೀಕಿ ಕೃಷ್ಣಪ್ಪ,  ಜಿಲ್ಲಾಧ್ಯಕ್ಷ ಹೆಚ್. ಮುನಿಸ್ವಾಮಿ, ರಾಜ್ಯ ಕಾರ್ಯದರ್ಶಿ ಮಹಮದ್ ಅಲಿ, ಮುಖಂಡರಾದ ಉಮಾಪತಿ, ಶಕುಂತಲಾ ಮತ್ತಿತರರು ಇದ್ದರು.