ಹಾರಕೂಡದ ಚನ್ನಬಸವ ಶಿವಯೋಗಿಗಳು ಕಾಯಕ ಜೀವಿಗಳು
ಕಲಬುರಗಿ,ಮೇ.5-ಹಾರಕೂಡದ ಚನ್ನಬಸವ ಶಿವಯೋಗಿಗಳ ಕಾಯಕ ಜೀವಿಗಳಾಗಿದ್ದರು. ಸದಾಕಾಲವೂ ಕಾಯಕದಲ್ಲಿ ತೊಡಗಿರುತಿದ್ದರು ಮತ್ತು ತಮ್ಮ ಭಕ್ತರಿಗೆ ಕಾಯಕದ ಮೂಲಕ ಬದುಕುವ ಮಾರ್ಗವನ್ನು ತಿಳಿಸುತ್ತಿದ್ದರು ಎಂದು ಮೇಹಕರದ ಕಟ್ಟಿಮನಿ ಸಂಸ್ಥಾನ ಹಿರೇಮಠದ ರಾಜೇಶ್ವರ ಶಿವಾಚಾರ್ಯರು ಹೇಳಿದರು.
ಕಾಳಗಿ ತಾಲೂಕಿನ ಸುಕ್ಷೇತ್ರ ಅರಣಕಲ್ ಗ್ರಾಮದಲ್ಲಿ ಜಗದ್ಗುರು ರೇಣುಕಾಚಾರ್ಯ ಜಯಂತ್ಯುತ್ಸವ ಅಂಗವಾಗಿ ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ಆಯೋಜಿಸಿದ್ದ ಹಾರಕೂಡ ಲಿಂ.ಚನ್ನಬಸವ ಶಿವಯೋಗಿಗಳ ಪುರಾಣ ಮಂಗಲ ಹಾಗೂ ಧರ್ಮಸಭೆ ತುಲಾಭಾರದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಹಾರಕೂಡದ ಲಿಂ.ಚನ್ನಬಸವೇಶ್ವರರು ಕಲ್ಯಾಣ ನಾಡಿನ ಶತಾಯುಷಿ ಸಂತರು. ಸದಾ ಕಾಲ ಭಕ್ತರ ಕಲ್ಯಾಣ ಬಯಸಿದವರು ಎಂದರು. ದಿವ್ಯ ಸಾನಿಧ್ಯವನ್ನು ಹಾರಕೂಡ ಸಂಸ್ಥಾನ ಹಿರೇಮಠದ ಚನ್ನವೀರ ಶಿವಾಚಾರ್ಯರು ವಹಿಸಿದ್ದರು , ಇರ್ವರು ಪರಮ ಪೂಜ್ಯರಿಗೂ ಅರಣಕಲ ಗ್ರಾಮದ ಸದ್ಭಕ್ತರಿಂದ ತುಲಾಭಾರ ಕಾರ್ಯಕ್ರಮ ಜರುಗಿತು. ಇದೇ ಸಂದರ್ಭದಲ್ಲಿ ಹಠಯೋಗಿ ಶಂಭುಲಿಂಗ ಸ್ವಾಮೀಜಿ, ಪುರಾಣಿಕರಾದ ಸುಂಟನೂರಿನ ಬಂಡಯ್ಯ ಶಾಸ್ತ್ರಿಗಳು ಉಪಸ್ಥಿತರಿದ್ದರು. ಸಂಗೀತ ಕಲಾವಿದರಾದ ಕಲ್ಯಾಣ ಕುಮಾರ ಕಾರಬೋಸಗಾ, ಪ್ರವೀಣ ಕುಮಾರ ವಿಶ್ವಕರ್ಮ ಹಾರಕೂಡದ ಸಂಗೀತ ಬಳಗ ಸಂಗೀತ ಜರುಗಿತು ಅರಣಕಲ್ ಗ್ರಾಮದಲ್ಲಿ ಸಮಸ್ತ ಸದ್ಭಕ್ತ ತಾಯಿ ಬಳಗಾ ಭಾಗವಹಿಸಿದ್ದರು.