ಥೈಲ್ಯಾಂಡ್, ಬ್ಯಾಂಕಾಕ್‍ನಲ್ಲಿ ವಿಜಯಪುರದ ಹುಡುಗಿಯ ಕಮಾಲ್
ವಿಜಯಪುರ,ಮೇ.5:ಏಶಿಯಾ ದೇಶಗಳ ಸಾಂಸ್ಕøತಿಕ ಸಂಸ್ಥೆ ಮತ್ತು ಭಾರತೀಯ ಕಲೆ ಮತ್ತು ಸೊಲ್ಲಾಪುರ ಸಾಂಸ್ಕøತಿಕ ಸಂಘ ಇದರ ಸಂಯುಕ್ತಾಶ್ರಯದಲ್ಲಿ ನಡೆದ ಥೈಲ್ಯಾಂಡ್ ಸಾಂಸ್ಕøತಿಕ ಸಮ್ಮೇಳನ- 2024 ಪ್ಯಾಶನ್ ಶೋನಲಿ ವಿಜಯಪುರದ ಎಕ್ಸಲಂಟ್ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ ಕುಮಾರಿ ಕರುಣಾ ಅವರು ಭಾಗವಹಿಸಿ ಪ್ರಥಮ ಸ್ಥಾನ ಪಡೆದುಕೊಂಡು ದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಮೇ.3 ರಂದು ಥೈಲ್ಯಾಂಡಿನಲ್ಲಿ ನಡೆದ ಥೈಲ್ಯಾಂಡ್ ಸಾಂಸ್ಕøತಿಕ ಸಮ್ಮೇಳನ – 2024ರÀ ಭಾಗವಾಗಿ ನಡೆದ ಪ್ಯಾಶನ್ ಶೋನಲ್ಲಿ ಪ್ರಥಮ ಸ್ಥಾನದ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಹಾಗೆಯೇ ಬ್ಯಾಂಕಾಕ್‍ನಲ್ಲಿ ಆಯೋಜನೆಗೊಂಡ “ರ್ಯಾಂಪ್‍ವಾಕ್” ನಲ್ಲಿಯೂ ಪ್ರಥಮ ಸ್ಥಾನವನ್ನು ಪಡೆದು ವಿದೇಶದಲ್ಲಿ ವಿಜಯಪುರದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಎಕ್ಸಲಂಟ್ ಸಂಸ್ಥೆಯ ಶಿವಾನಂದ ಕೆಲೂರ ಹಾಗೂ ಶಿಕ್ಷಕ ವೃಂದ ಹರ್ಷ ವ್ಯಕ್ತ ಪಡಿಸಿದ್ದಾರೆ.