ರಾಜ್ಯದ 20 ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲವು ನಿಶ್ಚಿತ: ಸಚಿವ ಎಂ.ಬಿ. ಪಾಟೀಲ ವಿಶ್ವಾಸ
ವಿಜಯಪುರ, ಮೇ.5 :ರಾಜ್ಯದ 20 ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲವು ನಿಶ್ಚಿತವಾಗಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,
ಇಂದು ಲೋಕಸಭಾ ಚುನಾವಣೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ.
ರಾಜ್ಯದಲ್ಲಿ ಎರಡನೇ ಹಂತದ ಮತದಾನ ನಾಡಿದ್ದು ನಡೆಯಲಿದೆ.
ರಾಜ್ಯದಲ್ಲಿ 20 ಸ್ಥಾನಗಳಲ್ಲಿ ಗೆಲ್ಲುವ ವಿಶ್ವಾಸ ಇದೆ ಎಂದರು.
ಗ್ಯಾರಂಟಿ ಯೋಜನೆಗಳನ್ನು ನಂಬಿ ಜನರು ಮತ ಹಾಕಲಿದ್ದಾರೆ.
ಮೋದಿ ವೇವ್ ಇಲ್ಲ. ಅಚ್ಚೇ ದಿನ್ ಬರಲಿಲ್ಲ. ಮೋದಿ ಯಾವುದೇ ಕೆಲಸ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.
ಮಾಜಿ ಸಚಿವ ಎಚ್ ಡಿ ರೇವಣ್ಣ ಬಂಧನ ವಿಚಾರ ಪ್ರತಿಕ್ರಿಯೆ ನೀಡಿ,
ಈ ಪ್ರಕರಣದಲ್ಲಿ ಕಾನೂನು ತನ್ನ ಕೆಲಸ ಮಾಡುತ್ತದೆ. ಎಸ್ ಐ ಟಿ ತನಿಖೆ ಮಾಡುತ್ತಿದೆ. ತನಿಖಾ ಹಂತದಲ್ಲಿ ನಾವು ಏನು ಮಾತನಾಡಬಾರದು.
ಸತ್ಯ ಅಸತ್ಯ ಹೊರ ಬರುತ್ತದೆ ಎಂದು ತಿಳಿಸಿದರು.
ಸಿಡಿ ಹಿಂದೆ ಕಾಂಗ್ರೆಸ್ ನಾಯಕರು ಇದ್ದಾರೆಂಬ ಆರೋಪ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು,
ಕಾಂಗ್ರೆಸ್ ನಾಯಕರು ಇಂಥ ಕೆಲಸ ಮಾಡಲು ಹೇಳಿದ್ದರಾ. ಇದು ಅತ್ಯಂತ ಹೀನ ಪ್ರಕರಣವಾಗಿದೆ.
ಪ್ರಜ್ವಲ್ ಕೇಸ್ ಅತಿರೇಕವಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಹೆಚ್ಚಾಗುತ್ತಿರುವ ರಾಜಕಾರಣಿಗಳ ಹನಿಟ್ರ್ಯಾಪ್ ಪ್ರಕರಣಗಳು ಕುರಿತು ಮಾತನಾಡಿದ ಸಚಿವ ಎಂ.ಬಿ. ಪಾಟೀಲ ಅವರು,
ಹನಿ ಟ್ರ್ಯಾಪ್ ಕೀಳುತನ, ಪ್ರಜ್ವಲ್ ಕೇಸ್ ಬೇರೆ.ಹನಿಟ್ರ್ಯಾಪ್ ಸಿಡಿ ಬಿಡುಗಡೆಯಿಂದ ಜನರು ವಿಶ್ವಾಸ ಕಳೆದುಕೊಳ್ಳುತ್ತಾರೆ. ಎಂದು ಎಂ.ಬಿ. ಪಾಟೀಲ ಅಸಮಾಧಾನ ವ್ಯಕ್ತಪಡಿಸಿದರು.
ಪ್ರಜ್ವಲ್ ಪ್ರಕರಣ ಎಲೆಕ್ಷನ್ ಮೇಲೆ ಪ್ರಭಾವ ಬೀರಲ್ಲ ಎಂಬ
ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಹೇಳಿಕೆ ಅಲ್ಲಗಳೆದ ಸಚಿವ ಪಾಟೀಲ, ಚುನಾವಣೆ ಮೇಲೆ ಖಂಡಿತ ಪ್ರಭಾವ ಬೀರುತ್ತದೆ ಎಂದರು.
ಮಹಿಳೆಯರು ಜೆಡಿಎಸ್ ಪಕ್ಷದ ಮೇಲೆ ಅಸಹ್ಯ ಪಡುತ್ತಿದ್ದಾರೆ.
ಇದು ಪರಿಣಾಮ ಬೀರುತ್ತದೆ ಎಂದು ಹೇಳಿದರು.
ಸಿಡಿ ಹಿಂದೆ ಕಾಂಗ್ರೆಸ್ ನಾಯಕರು ಇಲ್ಲ. ಸಿಡಿ ವಿಚಾರ ಕೀಳು ಮಟ್ಟದ್ದು
ವೈಯುಕ್ತಿಕ ಕೇಸ್ ಗಳು ಟ್ರ್ಯಾಪ್ ಮಾಡುವುದು ಕೀಳು ಮಟ್ಟದ್ದು ಆಗಿದೆ. ಇದನ್ನು ಬಿಟ್ಟು ಹೊರ ಬರಬೇಕಿದೆ ಎಂದು ತಿಳಿಸಿದರು.
ರಾಜಕಾರಣ ಟೀಕೆ ಟಿಪ್ಪಣಿ ಅಭಿವೃದ್ಧಿ ಕಳಪೆ ಕುರಿತು ಆರೋಪ ಪ್ರತ್ಯಾರೋಪ ನಡೆಯಲಿ.
ಆದರೆ ಹನಿಟ್ರ್ಯಾಪ್ ನಂತಹ, ಸಿಡಿಗಳಂತಹ ಕೃತ್ಯಗಳು ನಿಲ್ಲಬೇಕು. ಎಂದರು.