ಬೀದರ ಲೋಕಸಭಾ ಚುನಾವಣೆಗೆ ಎಲ್ಲಾ ಸಿದ್ದತೆ ಪೂರ್ಣ: ಗೋವಿಂದರೆಡ್ಡಿ
ಬೀದರ. ಮೇ. 05: ಬೀದರ ಲೋಕಸಭಾ ಸಾರ್ವತ್ರಿಕ ಚುನಾವಣೆ ಮೇ.7 ರಂದು ನಡೆಯಲಿದ್ದು ಇದಕ್ಕೆ ಎಲ್ಲಾ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಗೋವಿಂದರೆಡ್ಡಿ ಹೇಳಿದರು.
ಅವರು ಶನಿವಾರ ಬೀದರ ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಮೇ. 5 ರ ಸಾಯಂಕಾಲ 6 ಗಂಟೆಯಿಂದ ಸೈಲೆನ್ಸ ಪಿರೆಡ್ ಆರಂಭವಾಗುವುದರಿಂದ ಬಹಿರಂಗ ಪ್ರಚಾರ ಅಂತ್ಯಗೊಳ್ಳುತ್ತದೆ. ವೇದಿಕೆ ಕಾರ್ಯಕ್ರಮ, ಮೆರವಣಿಗೆ, ಲೌಡ ಸ್ಪೀಕರ್ ಇರುವುದಿಲ್ಲ. ಅಭ್ಯರ್ಥಿ ಮನೆ-ಮನೆಗೆ ತೆರಳಿ ಪ್ರಚಾರ ಮಾಡಬಹುದಾಗಿದೆ. ಕಲಂ 144 ಜಾರಿಯಲ್ಲಿ ಇರಲಿದ್ದು ಮೇ. 5 ರ ಸಾಯಂಕಾಲ 6 ಗಂಟೆಯಿಂದ ಬಾರಗಳು ಮುಚ್ಚಲ್ಪಡುತ್ತವೆ. ಬೀದರ ಲೋಕಸಭಾ ಕ್ಷೇತ್ರದ ಮತದಾರರಲ್ಲದವರು ಪ್ರಚಾರಕ್ಕಾಗಿ ಬಂದವರು ಕ್ಷೇತ್ರಬಿಟ್ಟು ತೆರಳಬೇಕು ಎಂದರು.
ಸೈಲೆನ್ಸ್ ಅವಧಿಯಲ್ಲಿ ಓಪಿನಿಯನ್ ಪೆÇೀಲ್ ಮಾಡುವ ಹಾಗಿಲ್ಲ. ಪತ್ರಿಕೆಯಲ್ಲಿ ಜಾಹೀರಾತು ನೀಡಬೇಕಾದಲ್ಲಿ ಜಿಲ್ಲಾ ಎಮ್.ಸಿ.ಎಮ್.ಸಿ ತಂಡದ ಅನುಮತಿ ಪಡೆದು ಜಾಹೀರಾತುಗಳನ್ನು ನೀಡಬೇಕು. ಒಬ್ಬ ಅಭ್ಯರ್ಥಿಗೆ ಒಟ್ಟು ಹತ್ತು ವಾಹನಗಳಿಗೆ ಮಾತ್ರ ಪ್ರಚಾರಕ್ಕೆ ಅನುಮತಿ ನೀಡಲಾಗುತ್ತದೆ. ಬೀದರ ಲೋಕಸಭಾ ಕ್ಷೇತ್ರದಲ್ಲಿ ಚೆಕಪೆÇೀಸ್ಟಗಳು ನಿರಂತರವಾಗಿ ಕೆಲಸ ಮಾಡುತ್ತಿವೆ ಹಾಗೂ ಪ್ಲಾಯಿಂಗ್ ಸ್ಕಾ??ಡಗಳು ಹೆಚ್ಚಿನ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರು.
ಬೀದರ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 1892962 ಜನ ಮತದಾರರಿದ್ದು, 18 ಅಭ್ಯರ್ಥಿಗಳು ಹಾಗೂ ಒಂದು ನೋಟಾ ಸೇರಿ ಒಟ್ಟು 19 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 5 ಸಖಿ ಪಿಂಕ್ ಮತಗಟ್ಟೆ. ಒಂದು ಯುವ ಮತಗಟ್ಟೆ, ಒಂದು ವಿಶೇಷ ಚೇತನರ ಮತಗಟ್ಟೆ ಹಾಗೂ ಒಂದು ಥೀಮ್ ಬೇಸ ವಿಶೇಷ ಮತಗಟ್ಟೆ ಇರಲಿದೆ. 324 ಕ್ರಿಟಿಕಲ್ ಪೆÇೀಲಿಂಗ್ ಭೂತ ಇರಲಿವೆ. 120 ವಿಡಿಯೋ ಗ್ರಾಫರ ಹಾಗೂ 150 ಮೈಕ್ರೊ ಅಬ್ಸರವರಗಳು ಬೀದರ ಲೋಕಸಭಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಲಿದ್ದಾರೆ ಎಂದರು.
ಒಟ್ಟು 243 ಕೆ.ಎಸ್.ಆರ್.ಟಿ.ಸಿ ಬಸ್ಸುಗಳು ಹಾಗೂ 250 ಕ್ರೂಸರಗಳನ್ನು ಚುನಾವಣಾ ಕರ್ತವ್ಯಕ್ಕಾಗಿ ಬುಕ್ ಮಾಡಲಾಗಿದೆ. ಶೇ. 85 ಪ್ರತಿಶತ ಮತಗಟ್ಟೆಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ. ಇಲ್ಲಿಯವರೆಗೆ ಒಟ್ಟು ಮೂರು ಕೋಟಿ, ಹದಿನೆಂಟು ಲಕ್ಷಗಳ ಸೀಜರಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೇ. 7 ರಂದು ಮತದಾನ ನಡೆಯಲಿದ್ದು ಜೂನ್.4ಕ್ಕೆ ಮತ ಎಣಿಕೆ ನಡೆಯಲಿದೆ ಎಂದು ಹೇಳಿದರು.
ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್ ಅವರು ಮಾತನಾಡಿ, ಬೀದರ ಲೋಕಸಭಾ ಕ್ಷೇತ್ರದಲ್ಲಿ ವ್ಯಾಪಕ ಪೆÇಲೀಸ್ ಬಂದೋಬಸ್ತ ಮಾಡಲಾಗಿದೆ. ಈಗಾಗಲೇ ಜಿಲ್ಲೆಯಾದ್ಯಂತ 31 ಕಡೆ ಏರಿಯಾ ಡಾಮಿನೇಷನ್ ಮಾಡಲಾಗಿದೆ. ಇದರ ಉದ್ದೇಶ ನಿರ್ಭೀತವಾಗಿ ಬಂದು ಮತ ಚಲಾಯಿಸಲು ಭದ್ರತೆಯ ಭಾವನೆ ಜನರಲ್ಲಿ ತರುವುದಾಗಿದೆ. 2024 ರಲ್ಲಿ ಈ ವರ್ಷ 9 ಜನರಿಗೆ ಗಡಿಪಾರು ಮಾಡಲಾಗಿದ್ದು. ಒಂದು ಗುಂಡಾ ???ಕ್ಟ್ ಅಡಿಯಲ್ಲಿ ಜುಡಿಸಿಯರಿ ಕಸ್ಟಡಿಗೆ ನೀಡಲಾಗಿದೆ ಎಂದರು.
ಕ್ರಿಟಿಕಲ್ ಹಾಗೂ ಸೂಕ್ಷ್ಮ ಮತಗಟ್ಟೆಗಳಲ್ಲಿ ಶಾಂತಿಭಂಗ ಮಾಡುವ 861 ವ್ಯಕ್ತಿಗಳ ವಿರುದ್ಧ ಈಗಾಗಲೇ ಪ್ರಕರಣ ದಾಖಲಿಸಲಾಗಿದೆ ಹಾಗೂ 2331 ಜನರಿಗೆ ಮುಚ್ಚಳಿಕೆ ಬರೆದು ಕೊಡಲಾಗುತ್ತಿದೆ. ಪ್ರತಿ ವಿಧಾನ ಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಡಿವೈಎಸ್ಪಿ ಹಂತದ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ. 1141 ಜನ ಸಿವಿಲ್ ಪೆÇಲೀಸರು, ಡಿಎಆರ್ 160 ಜನ, ಕೆ.ಎಸ್.ಆರ್.ಪಿ. 7 ಪ್ಲಾಟೂನ್, 1185 ಜನ ಹೋಮಗಾರ್ಡ, ಫಾರೆಸ್ಟ್ 8 ಜನ, ಕೆ.ಎಸ್.ಐ.ಎಸ್.ಎಫ್ 28 ಜನ ಹಾಗೂ ಸಿ.ಪಿ.ಎಮ್.ಎಫ್.ನ 36 ವರೆ ಸೆಕ್ಷನಗಳು ಇರಲಿವೆ ಎಂದು ಹೇಳಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಸ್ವೀಫ್ ಸಮಿತಿ ನೋಡಲ್ ಅಧಿಕಾರಿಗಳಾದ ಡಾ. ಗಿರೀಶ್ ಬದೋಲೆ ಅವರು ಮಾತನಾಡಿ, ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಫ್ ಸಮಿತಿ ಬೀದರ ವತಿಯಿಂದ ಬೀದರ ಲೋಕಸಭಾ ಕ್ಷೇತ್ರದಲ್ಲಿ ಶೇ. 80 ಪ್ರತಿಶತ ಮತದಾನ ಮಾಡಲು ಹಲವಾರು ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಜಿಲ್ಲಾ. ತಾಲ್ಲೂಕು ಹಾಗೂ ಗ್ರಾಮ ಪಂಚಾಯತಿ ಮಟ್ಟದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ವಾಕಥಾನ್, ಕ್ರಿಕೆಟ್, ಸೈಕಲ್ ಜಾಥಾ ಹಾಗೂ ಜಿಲ್ಲೆಯ ವಿವಿಧ ವಸತಿ ನಿಲಯಗಳಲ್ಲಿ ರಂಗೋಲಿ, ಪ್ರಬಂಧ ಸ್ಪರ್ಧೆ ಸೇರಿದಂತೆ ಇತರೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಒಟ್ಟು 35 ಸಾವಿರ ಯುವ ಮತದಾರರಿದ್ದು ಎಲ್ಲರೂ ಮತ ಚಲಾಯಿಸಬೇಕು. ಬೀದರ ಲೋಕಸಭಾ ಕ್ಷೇತ್ರದ 103 ಮತಗಟ್ಟೆಗಳಲ್ಲಿ ಕಡಿಮೆ ಮತದಾನವಾದಲ್ಲಿ ಹೆಚ್ಚಿನ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಬೀದರ ಲೋಕಸಭಾ ಕ್ಷೇತ್ರದಲ್ಲಿ 48 ವಿಶೇಷ ಮತಗಟ್ಟೆಗಳು ಇರಲಿವೆ. ಒಂದೇ ಕಡೆ ಎರಡು ಮೂರು ಮತಗಟ್ಟೆ ಇರುವ ಕ್ಲಸ್ಟರಗಳಲ್ಲಿ ಪೆÇೀಲಿಂಗ್ ಭೂತ ಅಸಿಸ್ಟೆಂಟಗಳನ್ನು ನಿಯೋಜನೆ ಮಾಡಲಾಗುತ್ತದೆ ಅವರು ಯಾವ ಮತಗಟ್ಟೆಗಳಲ್ಲಿ ಮತದಾರರ ಹೆಸರು ಇದೆ ಎಂಬ ಮಾಹಿತಿಯನ್ನು ಮತದಾರರಿಗೆ ನೀಡುವುದರಿಂದ ಮತದಾರರಿಗೆ ಅನುಕೂಲವಾಗಲಿದೆ. ಈ ಸಲ ಶೇ. 80 ಪ್ರತಿಶತ ಮತದಾನ ಮಾಡುವ ಗುರಿ ನಮ್ಮದಾಗಿದೆ ಎಂದು ಹೇಳಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಚುನಾವಣಾ ತಹಶಿಲ್ದಾರ ಅಣ್ಣಾರಾವ್ ಪಾಟೀಲ, ವಾರ್ತಾಧಿಕಾರಿ ಜಿ. ಸುರೇಶ ಸೇರಿದಂತೆ ಇತರರು ಉಪಸ್ಥಿತರಿದ್ದರು.