ಚಾಮುಂಡಿ ಬೆಟ್ಟ ಪಾದದಲ್ಲಿ ಮುಖ ಪ್ರಾಣಿ ಪಕ್ಷಿಗಳಿಗೆ ನೀರಿನ ತೊಟ್ಟಿ ಅಳವಡಿಕೆ ಮೂಲಕ ಮುಖ ಸ್ಪಂದನೆ
ಸಂಜೆವಾಣಿ ನ್ಯೂಸ್
ಮೈಸೂರು : ಮೇ.05:- ನಗರದ ಚಾಮುಂಡಿ ಬೆಟ್ಟದ ಪಾದದಲ್ಲಿ ಕೆಎಂಪಿ ಕೆ ಚಾರಿಟೇಬಲ್ ಟ್ರಸ್ಟ್ ಹಾಗೂ ಸೈನಿಕ ಅಕಾಡೆಮಿ ವತಿಯಿಂದ ಶನಿವಾರ ಪ್ರಾಣಿ ಪಕ್ಷಿಗಳು, ಜಾನುವಾರುಗಳಿಗೆ ನೀರು ಕುಡಿಯುಲು ತೊಟ್ಟಿಗಳನ್ನು ಇಡಲಾಯಿತು.
ದನ, ಕರುಗಳು, ಕೋತಿ ಪ್ರಾಣಿ?ಪಕ್ಷಿಗಳಿಗೆ ನೀರು ಕುಡಿಯಲು ಅನುಕೂಲವಾಗುವ ದೃಷ್ಟಿಯಿಂದ ತೊಟ್ಟಿಗಳನ್ನು ಅಳವಡಿಸಲಾಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ ನಾರಾಯಣಗೌಡ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಿಸಿಲಿನಿಂದ ಜನರೇ ನರಕಯಾತನೆ ಅನುಭವಿಸುತ್ತಿರುವಾಗ ಮೂಕ ಪ್ರಾಣಿಗಳ ಗತಿಯೇನು ಎಂಬುದನ್ನು ಅರಿತು ಕುಡಿಯುವ ನೀರಿನ ತೊಟ್ಟಿಗಳನ್ನು ಅಳವಡಿಸುತ್ತಿರುವುದು ಶ್ಲಾಘನಯ್ಯ ಪ್ರಸ್ತುತ ದಿನಗಳಲ್ಲಿ ನಾನು, ನನ್ನದು ಎಂದು ಬಡಿದಾಡುವವರ ಮಧ್ಯೆ ಪ್ರಾಣಿ ಪಕ್ಷಿಗಳ ನೆರವಿಗೆ ಧಾವಿಸುತ್ತಿರುವ ಟ್ರಸ್ಟ್‍ನ ಕಾರ್ಯ ಶ್ಲಾಘನೀಯವಾಗಿದೆ’ ಸಂತಸ ವ್ಯಕ್ತಪಡಿಸುತ್ತಾರೆ.
ಸೈನಿಕ ಅಕಾಡೆಮಿ ಮೈಸೂರಿನ ಸಂಸ್ಥಾಪಕರು ಹಾಗೂ ಮಾಜಿ ಕಮಾಂಡೋ ಶ್ರೀಧರ್ ಸಿ ಎಂ, ಮಾತನಾಡಿ ವನ್ಯಜೀವಿಗಳಿಗೂ ಬದುಕುವ ಹಕ್ಕಿದೆ. ಅವುಗಳು ಆಹಾರಕ್ಕಾಗಿ ನಾಡಿಗೆ ಬರುವ ಸ್ಥಿತಿ ನಿರ್ಮಾಣವಾಗಿದೆ. ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಅಭಿವೃದ್ಧಿಯ ನೆಪದಲ್ಲಿ ಪರಿಸರ ಸಂರಕ್ಷಣೆ ಕಡಿಮೆಯಾಗುತ್ತಿದೆ. ಹವಾಮಾನ ವೈಪರಿತ್ಯಕ್ಕೂ ಪರಿಸರ ಸಂರಕ್ಷಣೆಯ ವೈಫಲ್ಯವೂ ಕಾರಣವಾಗಿದೆ.
ಇದೇ ಸಂದರ್ಭದಲ್ಲಿ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ ನಾರಾಯಣಗೌಡ, ಸೈನಿಕ ಅಕಾಡೆಮಿ ಮೈಸೂರಿನ ಸಂಸ್ಥಾಪಕರು ಹಾಗೂ ಮಾಜಿ ಕಮಾಂಡೋ ಶ್ರೀಧರ್ ಸಿ ಎಂ, ಮೈಸೂರು ನಗರ ಜೆಡಿಎಸ್ ಕಾರ್ಯಧ್ಯಕ್ಷರು ಪ್ರಕಾಶ್ ಪ್ರಿಯದರ್ಶನ್, ಜೆಡಿಎಸ್ ನಗರ ಉಪಾಧ್ಯಕ್ಷರಾದ ಯದು ನಂದನ್, ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷರಾದ ವಿಕ್ರಮ ಅಯ್ಯಂಗಾರ್, ಪ್ರಜ್ಞಾವಂತ ನಾಗರಿಕ ವೇದಿಕೆ ಅಧ್ಯಕ್ಷರಾದ ಕಡಕೋಳ ಜಗದೀಶ್, ಬೈರತಿ ಲಿಂಗರಾಜು, ಸಮಾಜ ಸೇವಕರಾದ ಸವಿತಾ ಘಾಟ್ಕೆ, ನಾಗಶ್ರೀ ಸುಚಿಂದ್ರ, ಸೈನಿಕರು ಹಾಗೂ ಸೈನಿಕ ಅಕಾಡೆಮಿಯ ತರಬೇತಿ ಪಡೆಯುತ್ತಿರುವ ಮಕ್ಕಳು ಹಾಜರಿದ್ದರು