ಬಿಜೆಪಿಯಿಂದ ಕೇಂದ್ರ ತನಿಖಾ ಸಂಸ್ಥೆಗಳ ದುರ್ಬಳಕೆ: ಹೆಚ್.ಸಿ ಮಹಾದೇವಪ್ಪ
ಕೊಲ್ಹಾರ:ಮೇ.5: ರಾಜಕೀಯ ವಿರೋಧಿಗಳನ್ನ ಹಣಿಯಲು ಬಿಜೆಪಿ ಕೇಂದ್ರ ತನಿಖಾ ಸಂಸ್ಥೆಗಳನ್ನ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಸಚಿವ ಹೆಚ್.ಸಿ ಮಹಾದೇವಪ್ಪ ಹೇಳಿದರು.
ಪಟ್ಟಣದ ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಕಾಂಗ್ರೆಸ ಪ್ರಚಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು ಸಂವಿಧಾನದ ಹಾಗೂ ಪ್ರಜಾಪ್ರಭುತ್ವದ ಉಳಿವಿಗಾಗಿ ಈ ಚುನಾವಣೆಯಲ್ಲಿ ಕಾಂಗ್ರೆಸ ಪಕ್ಷಕ್ಕೆ ಬೆಂಬಲಿಸಬೇಕು ಎಂದು ಮನವಿ ಮಾಡಿದರು. ದೇಶದ ಪಾರದರ್ಶಕ ಆಡಳಿತ ಹಾಗೂ ಸಂಪನ್ಮೂಲ ರಕ್ಷಣೆಗೆ ಸಂವಿಧಾನಾತ್ಮಕವಾಗಿ ಸ್ವಾಯತ್ತ ಸಂಸ್ಥೆಗಳನ್ನು ರೂಪಿಸಲಾಗಿದೆ, ನಿಷ್ಪಕ್ಷವಾಗಿ ಕಾರ್ಯನಿರ್ವಹಿಸಬೇಕಾದ ಸ್ವಾಯತ್ತ ಸಂಸ್ಥೆಗಳನ್ನ ಕೇಂದ್ರ ಬಿಜೆಪಿ ಸರ್ಕಾರ ದುರುಪಯೋಗ ಪಡಿಸಿಕೊಂಡು ಪ್ರಜಾಪ್ರಭುತ್ವಕ್ಕೆ ಅಪಾಯ ತಂದೊಡ್ಡಿದೆ ಎಂದರು.
ಕಾಂಗ್ರೆಸ ತಾರಾ ಪ್ರಚಾರಕ ಲಕ್ಷ್ಮಣ ಸವದಿ ಮಾತನಾಡುತ್ತಾ ನೈಜ ದೇಶಭಕ್ತರಿರುವುದು ಕಾಂಗ್ರೆಸ ಪಕ್ಷದಲ್ಲಿ ಮಾತ್ರ ಬಿಜೆಪಿ ಡಾಂಬೀಕ ದೇಶಭಕ್ತಿ ತೋರ್ಪಡಿಸುತ್ತದೆ ಎಂದರು.
ಮೋದಿ ನೋಡಿ ಮತ ನೀಡಿ ಎಂದು ಲೋಕಸಭಾ ಬಿಜೆಪಿ ಅಭ್ಯರ್ಥಿಗಳು ಕೇಳುತ್ತಿರುವುದು ಹಾಸ್ಯಾಸ್ಪದವಾಗಿದೆ, ಮತದಾರರಲ್ಲಿ ಮತ ಕೇಳುವ ನೈತಿಕತೆ ಬಿಜೆಪಿ ಅಭ್ಯರ್ಥಿಗಳಲ್ಲಿ ಇಲ್ಲ ಎಂದರು.
ಹತ್ತು ವರ್ಷಗಳ ಆಡಳಿತದಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯಾವ ಸಾಧನೆ ಮಾಡಿದೆ?. ಅದಾನಿ ಅಂಬಾನಿಯವರನ್ನು ಉತ್ತುಂಗಕ್ಕೆ ಕೊಂಡೊಯ್ದಿರುವುದೆ ಅವರ ಮಹತ್ತರ ಸಾಧನೆ ಎಂದು ವ್ಯಂಗ್ಯವಾಡಿದರು.
ಅನೇಕ ಭರವಸೆಗಳನ್ನ ನೀಡಿ ಅಧಿಕಾರಕ್ಕೆ ಬಂದ ಕೇಂದ್ರ ಬಿಜೆಪಿ ಸರ್ಕಾರ ಯಾವ ಭರವಸೆಗಳನ್ನು ಈಡೇರಿಸದೆ ಜನರನ್ನು ಸಂಕಷ್ಟಕ್ಕೆ ದೂಡಿದೆ ದೇಶದ ಹಿತಕ್ಕಾಗಿ ಕಾಂಗ್ರೆಸ ಪಕ್ಷಕ್ಕೆ ಬÉಂಬಲಿಸಿ ಎಂದು ಅವರು ಮನವಿ ಮಾಡಿದರು.
ಕಾಂಗ್ರೆಸ ಲೋಕಸಭಾ ಅಭ್ಯರ್ಥಿ ರಾಜು ಆಲಗೂರ ಮಾತನಾಡಿ ದೇಶದ ಉನ್ನತಿಗಾಗಿ, ದೇಶದ ಪ್ರಗತಿಗಾಗಿ ಕಾಂಗ್ರೆಸ ಪಕ್ಷಕ್ಕೆ ಬೆಂಬಲಿಸಿ ನಿಮ್ಮ ಸೇವೆಯ ಅವಕಾಶ ಕಲ್ಪಿಸಬೇಕು ಎಂದು ನೆರೆದ ಜನರಲ್ಲಿ ಮನವಿ ಮಾಡಿದರು.
ಕೋಟ್: ಜಿಲ್ಲೆಗೆ ಸಂಸದ ರಮೇಶ ಜಿಗಜಿಣಗಿಯವರ ಕೊಡುಗೆ ಶೂನ್ಯ ಎಂದು ಹರಿಹಾಯ್ದರು, ಜಿಗಜಿಣಗಿ ಲೋಕಸಭೆಯಲ್ಲಿ ಒಮ್ಮೆಯೂ ಕೂಡ ಮಾತನಾಡಿರುವುದು ಜಿಲ್ಲೆಯ ದುರಂತವೇ ಸರಿ, ಐತಿಹಾಸಿಕ ಗೋಲಗುಮ್ಮಟ ಒಮ್ಮೆ ಒದರಿದರೆ ಏಳುಬಾರಿ ಪ್ರತಿಧ್ವನಿ ಹೊರಡಿಸುತ್ತದೆ ಆ ಕಟ್ಟಡಕ್ಕಿಂತ ಜಿಗಜಿಣಗಿಯವರು ಕಡೆಯಲ್ಲ ಎಂದು ವ್ಯಂಗ್ಯವಾಡಿದರು.
ಮಾಜಿ ಜಿ ಪಂ ಸದಸ್ಯ ಕಲ್ಲು ದೇಸಾಯಿ
ಈ ಸಂದರ್ಭದಲ್ಲಿ ಕಾಂಗ್ರೆಸ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಸಿ.ಪಿ ಪಾಟೀಲ, ಉಸ್ಮಾನಪಟೇಲ ಖಾನ್, ಬ್ಲಾಕ್ ಕಾಂಗ್ರೆಸ ಅಧ್ಯಕ್ಷ ಆರ್.ಬಿ ಪಕಾಲಿ, ಮಾಜಿ ಜಿ ಪಂ ಸದಸ್ಯ ಕಲ್ಲು ದೇಸಾಯಿ, ಬಿ.ಯು ಗಿಡ್ಡಪ್ಪಗೋಳ, ಮಹಿಳಾ ಬ್ಲಾಕ್ ಕಾಂಗ್ರೆಸ ಅಧ್ಯಕ್ಷೆ ರುಕ್ಮಿಣಿ ರಾಠೋಡ, ಮುಸ್ಕಾನ್ ಶಿರಬೂರ, ಎಸ್.ಬಿ ಪತಂಗಿ, ಸಿ.ಎಸ್ ಗಿಡ್ಡಪ್ಪಗೋಳ ಹಾಗೂ ಇನ್ನಿತರು ಇದ್ದರು.