ಸಾಮಾಜಿಕ ಸಂಘರ್ಷ ಸಮಿತಿ ವತಿಯಿಂದ ಕಾಂಗ್ರೆಸ್ ‌ಪಕ್ಷಕ್ಕೆ ಬೆಂಬಲ

ಸಂಜೆವಾಣಿ ವಾರ್ತೆ
ದಾವಣಗೆರೆ.ಮೇ.5; ಸಾಮಾಜಿಕ ಸಂಘರ್ಷ ಸಮಿತಿ ವತಿಯಿಂದ ಕಾಂಗ್ರೆಸ್ ‌ಪಕ್ಷದ ಅಭ್ಯರ್ಥಿ ಡಾ.ಪ್ರಭಾ‌  ಮಲ್ಲಿಕಾರ್ಜುನ್‌ ಅವರಿಗೆ ಬೆಂಬಲ ನೀಡಲಾಗುವುದು ಎಂದು ಸಮಿತಿಯ ರಾಜ್ಯ‌ ಗೌರವಾಧ್ಯಕ್ಷ ಡಿ.ದುರುಗೇಶಪ್ಪ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರುರಾಷ್ಟ್ರದಲ್ಲಿ‌ ಮನುವಾದ ಮತ್ತು‌ ಸಂವಿಧಾನ‌  ಇವೆರಡರ ಬಗ್ಗೆ ಒಂದು‌ ದೊಡ್ಡ ಸಮರ ನಡೆಯುತ್ತಿದೆ.ಸಂವಿಧಾನದ ಉಳಿವಿಗಾಗಿ ದೇಶದ ದಲಿತ ವರ್ಗ ಹಾಗೂ ಅಹಿಂದ ವರ್ಗ‌ ಒಂದಾಗಿದ್ದಾರೆ.ಸಂವಿಧಾನ ಉಳಿಸುವ ಹೋರಾಟದಲ್ಲಿ ತೊಡಗಿದ್ದೇವೆ ಎಂದರು.ಒಂದುಕಡೆ ಮನುವಾದಿಗಳು ಯಥಾವತ್ತಾಗಿ ಜಾತಿಯ ವ್ಯವಸ್ಥೆ ಕಾಪಾಡಲು ಮುಂದಾಗಿದ್ದಾರೆ, ಈ ಚುನಾವಣೆ ಸಂವಿಧಾನದ ಉಳಿವು ಎನ್ನುವುದಾಗಿದೆ.ಬಿಜೆಪಿ‌ಯವರು ಅನೇಕ‌  ವಿಚಾರ‌ಗಳನ್ನು ಹೇಳಿದ್ದಾರೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುವುದಾಗಿ ಹೇಳಿದ್ದಾರೆ.ಕೇಂದ್ರ ಸರ್ಕಾರ ಅನೇಕ‌ ಇಲಾಖೆಗಳನ್ನು‌  ಖಾಸಗೀಕರಣ ಮಾಡಲು‌ ಮುಂದಾಗಿದ್ದಾರೆ.ವಿದ್ಯಾರ್ಥಿ ‌ವೇತನ‌ಸ್ಥಗಿತ ಮಾಡಲಾಗಿದೆ.ಎಸ್ ಎಸ್ಟಿ  ವಿದ್ಯಾರ್ಥಿಗಳ ವಿದೇಶಾಂಗ ವಿದ್ಯಾಭ್ಯಾಸದ ಅವಕಾಶ ಸ್ಥಗಿತ ಮಾಡಿದ್ದಾರೆ.ಆದ್ದರಿಂದ ‌ಸಂವಿಧಾನದ ಉಳಿವಿಗಾಗಿ ನಿಂತಿರುವ ಪಕ್ಷಕ್ಕೆ ನಮ್ಮ ಬೆಂಬಲ ಇದೆ.ದಾವಣಗೆರೆ ಲೋಕಸಭಾ ಚುನಾವಣೆಯಲ್ಲಿ‌ ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್‌ ‌ಅವರಿಗೆ ಬೆಂಬಲ ನೀಡಲಾಗುವುದು ಎಂದರು.ಸುದ್ದಿಗೋಷ್ಠಿಯಲ್ಲಿ ತಿಪ್ಪೇರುದ್ರಪ್ಪ,ಮಲ್ಲಿಕಾರ್ಜುನ್‌, ರುದ್ರಪ್ಪ,ಸುಧಾಕರ್,ಪ್ರಕಾಶ್,ಜಯಣ್ಣ,ಸಿ.ಕೆ ಮಹೇಶ್ ಉಪಸ್ಥಿತರಿದ್ದರು.