ದಾವಣಗೆರೆಯಲ್ಲಿ ಸಂಚಲನ‌ ಮೂಡಿಸಿದ ಪ್ರಿಯಾಂಕ ಗಾಂಧಿ;ಕೈ ಅಭ್ಯರ್ಥಿ ಪರ ಮತಯಾಚನೆ
ಸಂಜೆವಾಣಿ ವಾರ್ತೆ
ದಾವಣಗೆರೆ.ಮೇ.೪: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ದಾವಣಗೆರೆಗೆಯಲ್ಲಿ ನಡೆದ ಪ್ರಜಾಧ್ವನಿ-೨ ಸಮಾವೇಶದಲ್ಲಿ ಕೈ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್‌ ಪರ ಮತಯಾಚನೆ ನಡೆಸಿದರು. ನಗರದ‌ ಹೈಸ್ಕೂಲ್ ಮೈದಾನದಲ್ಲಿ ನಿರ್ಮಾಣವಾಗಿದ್ದ ಬೃಹತ್ ವೇದಿಕೆಯತ್ತ ಕಾಂಗ್ರೆಸ್ ನಾಯಕಿ‌ ಪ್ರಿಯಾಂಕ ಗಾಂಧಿ ಆಗಮಿಸುತ್ತಿದ್ದಂತೆ ಜನರು‌  ಹಾಗೂ‌ ಕಾರ್ಯಕರ್ತರಲ್ಲಿ‌ ಸಂಚಲನ‌ ಮೂಡಿಸಿತ್ತು. ನೆರೆದಿದ್ದ ಜನಸ್ತೊಮ ಉದ್ದೇಶಿಸಿದ ಪ್ರಿಯಾಂಕ ಗಾಂಧಿಯವರು  ಹಾಸನ ಸಂಸದ ಪ್ರಜ್ವಲ್ ರೇವಣ್ಣರ ಪೆನ್ ಡ್ರೈವ್ ವಿಚಾರ ಕುರಿತಂತೆಮಾತನಾಡಿದರು. ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ಟೀಕಾ ಪ್ರಹಾರ ನಡೆಸಿದರು. ಈಗಾಗಲೇ ಸಾವಿರಾರು ಖುರ್ಚಿಗಳನ್ನು ಹೈಸ್ಕೂಲ್ ಮೈದಾನದಲ್ಲಿ ಹಾಕಲಾಗಿದ್ದು ಪ್ರಿಯಾಂಕ ಗಾಂಧಿ ನೋಡಲು ಜನಸಮೂಹವೇ ಆಗಮಿಸಿತ್ತು.ಮಧ್ಯಾಹ್ನ ೩-೪೫ ಗಂಟೆಗೆ ನಗರದ ಹೈಸ್ಕೂಲ್ ಮೈದಾನದಲ್ಲಿ ಆರಂಭವಾದ ಬಹಿರಂಗ ಸಭೆಯಲ್ಲಿ ಕಾಂಗ್ರೆಸ್ ಘಟಾನುಘಟಿ ನಾಯಕರು ಪಾಲ್ಗೊಂಡಿದ್ದರು.  ಅಹ್ಮದಾಬಾದ್ ವಿಮಾನ ನಿಲ್ದಾಣದಿಂದ ಮಧ್ಯಾಹ್ನ  ಹೊರಡಲಿರುವ ಪ್ರಿಯಾಂಕಾ ಗಾಂಧಿ ಅವರು, 2.30ಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂದಿಳಿಯುವರು. 3 ಗಂಟೆಗೆ ದಾವಣಗೆರೆಯ ಎಂಬಿಎ ಮೈದಾನಕ್ಕೆ ಆಗಮಿಸಲಿರುವ ಪ್ರಿಯಾಂಕಾ ಅವರು, 3.10ಕ್ಕೆ ಹೈಸ್ಕೂಲ್ ಮೈದಾನದಲ್ಲಿ ಏರ್ಪಡಿಸಿರುವ ಪ್ರಜಾ ಧ್ವನಿ-2.0 ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಭೆಯಲ್ಲಿಸಿಎಂ‌ ಸಿದ್ದರಾಮಯ್ಯ, ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಶಾಸಕರಾದ ಡಾ. ಶಾಮನೂರು ಶಿವಶಂಕರಪ್ಪ, ಡಾ.ಪ್ರಭಾ ಮಲ್ಲಿಕಾರ್ಜುನ್‌, ಡಿ.ಜಿ.ಶಾಂತನಗೌಡ, ಶಿವಗಂಗಾ ಬಸವರಾಜ್, ಕೆ.ಎಸ್.ಬಸವಂತಪ್ಪ, ದೇವೇಂದ್ರಪ್ಪ,  ಲತಾ ಮಲ್ಲಿಕಾರ್ಜುನ್, ಕೆ.ಸಿ.ಕೊಂಡಯ್ಯ, ನಂದಿಗಾವಿ ಶ್ರೀನಿವಾಸ್,ಅರಸೀಕೆರೆ ಕೊಟ್ರೇಶ್, ಎಸ್.ರಾಮಪ್ಪ, ಪಿ.ಟಿ.ಪರಮೇಶ್ವರ ನಾಯ್ಕ ಸೇರಿದಂತೆ ಎಐಸಿಸಿ ಮತ್ತು ಕೆಪಿಸಿಸಿ ಪದಾಧಿಕಾರಿಗಳು ಉಪಸ್ಥಿತರಿದ್ದರು.