ವಿನಯ್ ಕುಮಾರ್  ಗೆಲ್ಲಿಸಿ, ಇತಿಹಾಸ ನಿರ್ಮಿಸೋಣ

ದಾವಣಗೆರೆ.ಮೇ.೪: ಅಹಿಂದ ವರ್ಗಗಳಿಗೆ ಆಗಿರುವ ಅನ್ಯಾಯವನ್ನು ಖಂಡಿಸಿ, ನಮ್ಮ ಮತಗಳ ಮೂಲಕ ಪಕ್ಷೇತರ ಅಭ್ಯರ್ಥಿ ಜಿ.ಬಿ. ವಿನಯ್ ಕುಮಾರ್ ಅವರನ್ನು ಗೆಲ್ಲಿಸಿ, ಇತಿಹಾಸ ನಿರ್ಮಿಸೋಣ ಎಂದು ಬಾಗಲಕೋಟೆ ರೈತ ಹೋರಾಟಗಾರ ಯಲ್ಲಪ್ಪ ಹೆಗಡೆ ಕರೆ ನೀಡಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿ. ಬಿ. ವಿನಯ್ ಕುಮಾರ್‌ರವರಿಗೆ ಈ ಬಾರಿ ಕಾಂಗ್ರೇಸ್ ಪಕ್ಷದಿಂದ ಅವಕಾಶ ಸಿಗುತ್ತೆ ಎಂಬ ನಂಬಿಕೆ ಹುಸಿಯಾದಾಗಲೂ ಸಹ, ಧೃತಿಗೆಡದೇ, ಕ್ಷೇತ್ರದ ಮತದಾರರ ಅಭಿಪ್ರಾಯ ಸಂಗ್ರಹ ಮಾಡಿ, ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಅಖಾಡದಲ್ಲಿದ್ದಾರೆ. ಅದೃಷ್ಟದ ದಾವಣಗೆರೆಯಲ್ಲಿ 2012ರಲ್ಲಿ ಸಿದ್ದರಾಮಯ್ಯನವರ ಸಮಾವೇಶದ ನಂತರ ಮುಖ್ಯಮಂತ್ರಿಯಾದರು. 2023ರಲ್ಲಿ “ಸಿದ್ದರಾಮೋತ್ಸವ” ನಂತರ ಮತ್ತೊಮ್ಮೆ ಮುಖ್ಯಮಂತ್ರಿಯಾದರು. ಅದೇ ರೀತಿ ಶೋಷಿತರ ಧ್ವನಿಯಾಗಿರುವ ವಿನಯ್‌ ಕುಮಾರ್ ರವರು ಸಹ ಕರ್ಮಭೂಮಿ ದಾವಣಗೆರೆಯಿಂದ ರಾಜಕೀಯ ಕ್ಷೇತ್ರದಲ್ಲಿ ಕ್ರಾಂತಿ ಮಾಡುವ ಲಕ್ಷಣಗಳು ಕಾಣಿಸುತ್ತಿದೆ ಎಂದರು.ಪ್ರಬಲ ರಾಜಕೀಯ ಪಕ್ಷಗಳ ಎದುರು ಸ್ವಾಭಿಮಾನಿ ಮತದಾರರು ವಿನಯ್ ಕುಮಾರ್‌ರನ್ನು ಗೆಲ್ಲಿಸುವ ಪಣತೊಟ್ಟು ಅವರ ಪರವಾಗಿ ಸ್ವಯಂ ಪ್ರೇರಿತರಾಗಿ 8 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಒಬ್ಬ ಪಕ್ಷೇತರ ಅಭ್ಯರ್ಥಿ ಇಷ್ಟು ಕಡಿಮೆ ಅವಧಿಯಲ್ಲಿ ಜನರ ಮನಸ್ಸಿನಲ್ಲಿ ನೆಲೆಸಿರುವುದು ಇದೇ ಮೊದಲು ಎಂದರು.ಎಷ್ಟೇ ಒತ್ತಡ ತಂದರೂ, ಯಾವುದಕ್ಕೂ ಜಗ್ಗದೇ ಮತದಾರರ ಅಭಿಪ್ರಾಯವನ್ನು ಗೌರವಿಸಿ ದಿಟ್ಟತನದಿಂದ ಕಣಕ್ಕಿಳಿದಿರುವ ಜಿ. ಬಿ. ವಿನಯ್‌ ಕುಮಾರ್‌ರವರ ಕ್ರಮ ಸಂಖ್ಯೆ 28, “ಸಿಲಿಂಡರ್” ಗುರುತಿಗೆ ಮತ ನೀಡಿ, ಇಂತಹ ಪ್ರಬುದ್ಧ ಯುವ ರಾಜಕಾರಣಿಯನ್ನು ಗೆಲ್ಲಿಸಿಕೊಳ್ಳುವ ನಿರ್ಧಾರ ತಮ್ಮೊಳಗೆ ಮಾಡಿಕೊಂಡಿದ್ದಾರೆ.ಅಹಿಂದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜು ಬಿ. ಮೌರ್ಯ ಮಾತನಾಡಿ, “ಸ್ವಾಭಿಮಾನ” ಎಂಬ ಪದದ ಅರ್ಥ ಏನೆಂಬುದನ್ನು  ಸಿದ್ದರಾಮಯ್ಯನವರಲ್ಲಿ ಕಾಣುತ್ತಿದ್ದವರಿಗೆ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಜನರ ಧ್ವನಿಯಾಗಿ, ರಾಜಕೀಯ ಕ್ಷೇತ್ರದಲ್ಲಿ “ಸ್ವಾಭಿಮಾನಿ”ಯಾಗಿ ಚುನಾವಣಾ ಕಣದಲ್ಲಿರುವ ವಿನಯ್‌ ಕುಮಾರ್ ತೋರಿಸಿಕೊಟ್ಟಿದ್ದಾರೆ. ಇಂತಹ ಹೋರಾಟಗಾರನನ್ನು ಗೆಲ್ಲಿಸುವ ಅವಕಾಶ ಲೋಕಸಭಾ ಕ್ಷೇತ್ರದ ಶೋಷಿತ ವರ್ಗಗಳು ಹಾಗೂ ಸ್ವಾಭಿಮಾನಿ ಮತದಾರರಿಗೆ ಸಿಕ್ಕಿದೆ. ಮೇ 7 ರಂದು ನಡೆಯಲಿರುವ ಚುನಾವಣೆಯಲ್ಲಿ “ನಾವೇ ವಿನಯ್‌ ಕುಮಾರ್” “ನಮ್ಮ ಮನೆಯ ಮಗ ವಿನಯ್ ಕುಮಾರ”ರೆಂದುಕೊಂಡು ಗೆಲ್ಲಿಸುವ ಸಂಕಲ್ಪ ಮಾಡಿ, ಸ್ವಾಭಿಮಾನಿ ಪಕ್ಷೇತರ ಅಭ್ಯರ್ಥಿಯನ್ನು ಗೆಲ್ಲಿಸಿ ಸಂಸತ್‌ಗೆ ಕಳುಹಿಸಿದ ಇತಿಹಾಸವೂ ನಮ್ಮ ದಾವಣಗೆರೆಯಿಂದಲೇ ಆಗಲಿ” ಎಂದು ಸ್ವಾಭಿಮಾನಿ ಮತದಾರರಲ್ಲಿ ಮನವಿ ಮಾಡಿಕೊಳ್ಳುತ್ತೇವೆ ಎಂದರು.