ಸಣ್ಣ ಕೈಗಾರಿಕೆ ಪ್ರಗತಿಯಿಂದ ವಿಕಸಿತ ಭಾರತ ಸಾಧ್ಯ
ಬೆಂಗಳೂರು, ಸೆ. ೨೨- ಸಣ್ಣ ಕೈಗಾರಿಕೆಗಳು ಅಭಿವೃದ್ಧಿಯಾದರೆ ಮಾತ್ರ ವಿಕಸಿತ ಭಾರತ ಸಾಧ್ಯ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಾಸಿಯಾದಲ್ಲಿ ಆಯೋಜಿಸಿದ್ದ ಸಂವಾದ ಕಾರ್‍ಯಕ್ರಮದಲ್ಲಿ ಮಾತನಾಡಿದ ಅವರು, ತಿಳಿಸಿದರು.
ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಕೇಂದ್ರ ಸರ್ಕಾರವು ಸಂಪೂರ್ಣವಾಗಿ ಅರಿತುಕೊಂಡಿದೆ ಮತ್ತು ಎಂ.ಎಸ್.ಎಂ.ಇ ಗಳ ವಿವಿಧ ಸಂಘ ಸಂಸ್ಥೆಗಳಿಂದ ಪಡೆದ ನಿರಂತರ ಪ್ರತಿಕ್ರಿಯೆಯ ಆಧಾರದ ಮೇಲೆ ಎಂ.ಎಸ್.ಎಂ.ಇಗಳ ಸ್ಥಿತಿಯನ್ನು ಸುಧಾರಿಸಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಹಾಗೂ ಸಣ್ಣ ಕೈಗಾರಿಕೆಗಳು ಅಭಿವೃದ್ಧಿಯಾದರೆ ಮಾತ್ರ ವಿಕಸಿತ ಭಾರತ ಸಾಧ್ಯ ಎಂದರು.
ಪೀಣ್ಯದಲ್ಲಿ ಉನ್ನತ ಕೌಶಲ್ಯಕ್ಕಾಗಿ ಎನ್‌ಎಸ್‌ಐಸಿಯಿಂದ ಉತ್ಕೃಷ್ಟತಾ ಕೇಂದ್ರವನ್ನು ತೆರೆಯುವ ಪ್ರಸ್ತಾವನೆ, ನಾಲ್ಕು ವೇತನ ಸಂಹಿತೆಗಳ ರಚನೆ, ಕಾಸಿಯಾವನ್ನು ರಾಷ್ಟ್ರೀಯ ಎಂ.ಎಸ್.ಎಂ.ಇ. ಮಂಡಳಿಗೆ ಸೇರ್ಪಡೆಗೆ ತಾತ್ಕಾಲಿಕ ಒಪ್ಪಿಗೆ. ಮತ್ತು ಕಾಸಿಯಾ ಮನವಿ ಪತ್ರದಲ್ಲಿ ವ್ಯಕ್ತಪಡಿಸಿದ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.
ಸಚಿವರು ತಿಳಿಸಿದಂತೆ ದೇಶದಲ್ಲಿ ಎಂ.ಎಸ್.ಎಂ.ಇ ವಲಯವನ್ನು ಉತ್ತೇಜಿಸಲು ಸಚಿವಾಲಯವು ತೆಗೆದುಕೊಂಡ ಕ್ರಮಗಳ ಸಾರಾಂಶವನ್ನು ಕೆಳಗೆ ನೀಡಲಾಗಿದೆ:
ಇದಕ್ಕೂ ಮೊದಲು ಎಂ.ಜಿ. ರಾಜಗೋಪಾಲ್, ಅಧ್ಯಕ್ಷರು, ಸಚಿವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿ ಸೂಕ್ಷ್ ಮತ್ತು ಸಣ್ಣ ಕೈಗಾರಿಕೆಗಳು ಎದುರಿಸುತ್ತಿರುವ ಈ ಕೆಳಗಿನ ಗಂಭೀರ ಸಮಸ್ಯೆಗಳ ಕುರಿತು ಮಾಹಿತಿ ನೀಡಿದರು.
“ಒಂದು ರಾಷ್ಟ್ರ ಒಂದು ತೆರಿಗೆ” ನೀತಿಯು ದೇಶದಾದ್ಯಂತ ಗಮನಾರ್ಹ ಏಕರೂಪತೆ ಮತ್ತು ವ್ಯವಹಾರವನ್ನು ಸುಲಭಗೊಳಿಸಿದೆ. ಇದೇ ಮಾದರಿಯಲ್ಲಿ ದೇಶಾದ್ಯಂತ ವಿವಿಧ ರಾಜ್ಯಗಳ ವೇತನ ರಚನೆಗಳಲ್ಲಿನ ಅಸಮಾನತೆಗಳನ್ನು ಪರಿಹರಿಸಲು ನಿರ್ದಿಷ್ಟವಾಗಿ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ “ಒಂದು ರಾಷ್ಟ್ರ ಒಂದು ವೇತನ” ನೀತಿಯ ಅವಶ್ಯಕತೆಯಿದೆ ಎಂದು ಸಚಿವರಲ್ಲಿ ಮನವಿ ಮಾಡಿದರು.