ಬಿಸಿಲು ತಾಪ ಹೆಚ್ಚಳ ಹಿನ್ನೆಲೆ, ಮತದಾನಕ್ಕೆ ಚಿಕ್ಕ ಮಕ್ಕಳನ್ನು ತರಬೇಡಿ
ಕಲಬುರಗಿ:ಮೇ.04: ಲೋಕಸಭೆ ಸಾರ್ವತ್ರಿಕ ಚುನಾವಣೆಯ ಮತದಾನ ಇದೇ ಮೇ 7 ರಂದು ಬೆಳಿಗ್ಗೆ 7 ರಿಂದ ಸಂಜೆ 6 ಗಂಟೆ ವರೆಗೆ ನಡೆಯಲಿದ್ದು, ಬಿಸಿಲು ತಾಪ ಹೆಚ್ಚಳ ಹಿನ್ನೆಲೆಯಲ್ಲಿ 45-ಗುಲಬರ್ಗಾ ಉತ್ತರ ಮತಕ್ಷೇತ್ರದ ಮತದಾರರು ಮತದಾನ ಮಾಡಲು ಬರುವಾಗ ಚಿಕ್ಕ ಮಕ್ಕಳನ್ನು ಕರೆತರಬಾರದೆಂದು ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಮತ್ತು ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ಹೇಳಿದರು.
ಮತದಾನ ಮಾಡಲು ಬರುವಾಗ ಮತದಾರರು ತಲೆಯ ಮೇಲೆ ಕ್ಯಾಪ್ ಅಥವಾ ಬಿಳಿ ಬಟ್ಟೆಯನ್ನು ಹಾಕಿಕೊಂಡು ಬರುವ ಮೂಲಕ ಬಿಸಿಲಿನಿಂದ ರಕ್ಷಣೆ ಮಾಡಿಕೊಳ್ಳುವಂತೆ ಕೋರಿದ್ದಾರೆ.