ಕುರಿಕೋಟ ಮಠದಲ್ಲಿ ಮಹಿಳಾ ಸಮಾವೇಶ
ಕಲಬುರಗಿ,ಮೇ 4: ಕಮಲಾಪುರ ತಾಲ್ಲೂಕಿನ ಕುರಿಕೋಟ ಗ್ರಾಮದಲ್ಲಿ ರೇವಣಸಿದ್ದೇಶ್ವರ ಶಿವಾಚಾರ್ಯರ ಷಷ್ಠಿಪೂರ್ತಿ ಸಮಾರಂಭದ ನಿಮಿತ್ತವಾಗಿ ಐದು ದಿನಗಳ ಕಾಲ ಹಮ್ಮಿಕೊಂಡ ಪ್ರವಚನ ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ವಿಜಯಲಕ್ಷ್ಮಿ ತಡಕಲ್ ಉದ್ಘಾಟಿಸಿದರು. ಸಾನಿಧ್ಯವನ್ನು ಡಾ.ರೇವಣಸಿದ್ದ ಶಿವಾಚಾರ್ಯರು ವಹಿಸಿದರು.ರೇವಣಸಿದ್ದ ಚರಂತೇಶ್ವರ ಶಿವಾಚಾರ್ಯರು ನೇತೃತ್ವ ವಹಿಸಿದರು. ಮುಖ್ಯ ಅತಿಥಿಗಳಾಗಿ ಡಾ. ಶಾಮಲಾ ಸ್ವಾಮಿ ಮಾಲಕಣ್ಣಿ ಚೆನ್ನಮ್ಮ ಸಾಹು,ಕಮಲ ಶ್ರೀದೇವಿ ಪಾರ್ವತಿ ಸಲಗರ್ ಶಾಂತ ಎಸ್ ಪಾಟೀಲ್ ಶ್ರೀದೇವಿ ಬಸಣ್ಣ ಮಲ್ಲಮ್ಮ ಕಾಳಗಿ ಉಪಸ್ಥಿತರಿದ್ದರು. ಪೂಜ್ಯರ ತುಲಾಭಾರ ವನ್ನು ಅಮೃತಪ್ಪ ಗೌಡಪಗೋಳ ನೆರವೇರಿಸಿದರು ಪ್ರವಚನವನ್ನು ಶಿವಲಿಂಗ ಶಾಸ್ತ್ರೀ ಗರೂರು ವೀರೇಶ್ ಕುಮಾರ್ ಯಡ್ರಾಮಿ ಜ್ಞಾನೇಶ್ ಬೆಳಕೋಟ್ ಸಂಗೀತ ಸೇವೆ ಸಲ್ಲಿಸಿದರು. ಕಾರ್ಯಕ್ರಮವನ್ನುಗ್ರಾಮದ ಕುಮಾರಿಯರು ನಿರೂಪಿಸಿದರು ಎಂದು ಬಸವರಾಜ ಶೀಲವಂತ ತಿಳಿಸಿದ್ದಾರೆ.