ಸಾಮೂಹಿಕ ಪಾರಾಯಣ ನಾಳೆ
ಕಲಬುರಗಿ,ಮೇ 4: ನಗರದ ರಾಘವೇಂದ್ರ ಕಾಲೋನಿಯ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ನಾಳೆ ( ಮೇ 5) ಬೆಳಿಗ್ಗೆ 8 ಗಂಟೆಗೆ ಸಾಮೂಹಿಕ ಪಾರಾಯಣ ನಡೆಯಲಿದೆ ಎಂದು ಪಾರಾಯಣ ಸಂಘಗಳ ಸಂಚಾಲಕ ರವಿ ಲಾತೂರಕರ ತಿಳಿಸಿದರು.ಬರುವ ಚುನಾವಣೆಯಲ್ಲಿ ಎಲ್ಲರೂ ಕಡ್ಡಾಯವಾಗಿ ಮತ ಚಲಾಯಿಸುವ ಮೂಲಕ ನಮ್ಮ ಹಕ್ಕು ಎತ್ತಿ ಹಿಡಿಯಬೇಕು.ನಿಮ್ಮ ಮತ ಸನಾತನ ಧರ್ಮ ಉಳಿಸುವವರಿಗೆ,ಗೋ ರಕ್ಷಣೆ ಮಾಡುವವರೆಗೆ ಇರಲಿ.ಅಂದು ಬೆಳಿಗ್ಗೆ 8 ಗಂಟೆಗೆ ವಿಷ್ಣು ಸಹಸ್ರನಾಮ ಮತ್ತು ಸುಂದರ ಕಾಂಡ 3 ಬಾರಿ ಪಾರಾಯಣ ನಡೆಯಲಿದೆ ಎಂದು ಪಾರಾಯಣ ಸಂಘಗಳ ಸಂಚಾಲಕ ರವಿ ಲಾತೂರಕರ, ಮಠಾಧಿಕಾರಿಗಳಾದ ರಾಮಾಚಾರ್ಯ ಘಂಟಿ ,ಮಂದಿರ ಅರ್ಚಕರಾದ ಆನಂದ ತೀರ್ಥ ಆಚಾರ್ಯ ಜೋಶಿ ತಿಳಿಸಿದ್ದಾರೆ.