ಎ.ಆರ್.ಓ ಮತ್ತು ತಹಶಿಲ್ದಾರರು ಕೇಂದ್ರ ಸ್ಥಾನದಲ್ಲಿ ಇರಬೇಕು:ಗೋವಿಂದರೆಡ್ಡಿ
ಬೀದರ. ಮೇ. 04: ಬೀದರ ಲೋಕಸಭಾ ಕ್ಷೇತ್ರದ ಚುನಾವಣೆ ಇನ್ನೂ ಎರಡು ಮೂರು ದಿನ ಕಾಲಾವಕಾಶ ಇರುವುದರಿಂದ ಎ.ಆರ್.ಓ ಮತ್ತು ತಹಶಿಲ್ದಾರರು ತಮ್ಮ-ತಮ್ಮ ವಿಧಾನ ಸಭಾ ಕ್ಷೇತ್ರದ ಕೇಂದ್ರ ಸ್ಥಾನದಲ್ಲಿ ಇರಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಗೋವಿಂದರೆಡ್ಡಿ ಹೇಳಿದರು.
ಅವರು ಶುಕ್ರವಾರ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಎ.ಆರ್.ಓ. ತಹಶಿಲ್ದಾರರು ಹಾಗೂ ಸೆಕ್ಟರ್ ಅಧಿಕಾರಿಗಳು ಸೇರಿದಂತೆ ಚುನಾವಣೆ ನಿಯೋಜಿತ ಇತರೆ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಮಾತನಾಡಿದರು.
ಸೆಕ್ಟರ್ ಅಧಿಕಾರಿಗಳು ಎಲ್ಲಾ ಪೆÇೀಲಿಂಗ್ ಭೂತಗಳಿಗೆ ಭೇಟಿ ನೀಡಿ ಮತಗಟ್ಟೆಗಳಲ್ಲಿ ಕುರ್ಚಿ, ಟೇಬಲ್, ಲೈಟಿಂಗ್ ವ್ಯವಸ್ಥೆ ಸೇರಿದಂತೆ ಇತರೆ ಮೂಲಭೂತ ಸೌಕರ್ಯಗಳು ಇರುವುದರ ಕುರಿತು ಪರಿಶೀಲನೆ ನಡೆಸಬೇಕು ಇಲ್ಲದಿದ್ದರೆ ಪಿ.ಡಿ.ಓ ಮತ್ತು ಗ್ರಾಮ ಸೇವಕರಿಗೆ ಅವುಗಳನ್ನು ಹಾಕಲು ಹೇಳಬೇಕು. ಬೇಸಿಗೆ ಹೆಚ್ಚಾಗಿ ಇರುವುದರಿಂದ ಎಲ್ಲಾ ಮತಗಟ್ಟೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಮತ್ತು ಮತದಾನ ದಿನ ಮತಗಟ್ಟೆಗಳಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಬೆಳಗಿನ ಉಪಹಾರ ಮತ್ತು ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಬೇಕೆಂದು ಹೇಳಿದರು.
ಮತಗಟ್ಟೆಗಳಲ್ಲಿ ಎರಡು ಕೋಣೆಗಳನ್ನು ಕಾಯ್ದಿರಿಸಬೇಕು ಒಂದು ಪುರುಷರಿಗೆ ಇನ್ನೊಂದು ಮಹಿಳೆಯರಿಗೆ ಬಿಸಿಲು ಹೆಚ್ಚು ಇರುವುದರಿಂದ ಮತದಾನ ಮಾಡಲು ಬರುವವರಿಗೆ ಅಲ್ಲಿ ನಿಲ್ಲಲು ಅನುಕೂಲವಾಗುತ್ತದೆ. ಮತಗಟ್ಟೆಗಳಲ್ಲಿ ಸೀಲಿಂಗ್ ಅಥವಾ ಟೇಬಲ್ ಫ್ಯಾನ್‍ಗಳ ವ್ಯವಸ್ಥೆ ಮಾಡಬೇಕು. ಮತಗಟ್ಟೆಗಳಲ್ಲಿ ಪ್ರತಿ ಎರಡು ತಾಸಿಗೆ ಮತದಾನವಾದ ಮಾಹಿತಿಯನ್ನು ಬಿ.ಎಲ್.ಓ ಗಳೆ ಕೊಡಬೇಕು. ಮಸ್ಟರಿಂಗ್ ಹಾಗೂ ಮತದಾನ ದಿನ ಅಧಿಕಾರಿಗಳು ಮೊಬೈಲ್ ಪವರ್ ಪ್ಯಾಕ್ ಜೊತೆಯಲ್ಲಿ ತೆಗೆದುಕೊಂಡು ಬರಬೇಕು ಎಂದರು.
ಮತಗಟ್ಟೆ ಒಳಗಡೆ ಎಲ್ಲಾ ಚುನಾವಣಾ ಸಾಮಗ್ರಿಗಳನ್ನು ಇರುವಂತೆ ನೋಡಿಕೊಳ್ಳಬೇಕು. ಎಲ್ಲಾ ಮತಗಟ್ಟೆಗಳಲ್ಲಿ ನೂರು ಮೀಟರ್ ಹಾಗೂ ಎರಡನೂರು ಮೀಟರ್ ಗೆರೆಗಳನ್ನು ಹಾಕಬೇಕು ಮತ್ತು ನೂರು ಮೀಟರ್ ಒಳಗಡೆ ಯಾವುದೇ ಪ್ರಚಾರ ಮಾಡುವ ಹಾಗಿಲ್ಲ. ಎರಡುನೂರು ಮೀಟರ್ ಆಚೆ ರಾಜಕೀಯ ಪಕ್ಷಗಳು ಶಾಮಿಯಾನ ಹಾಕಿಕೊಂಡು ಮತದಾರರಿಗೆ ಚೀಟಿಗಳನ್ನು ಕೊಡಬಹುದು. ಮತಗಟ್ಟೆಗಳ ಒಳಗಡೆ ಮೊಬೈಲ್ ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ ಎಂದು ಹೇಳಿದರು.
ಸೆಕ್ಟರ್ ಅಧಿಕಾರಿಗಳ ವಾಹನಗಳಿಕೆ ಕಡ್ಡಾಯವಾಗಿ ಜಿ.ಪಿ.ಎಸ್. ಅಳವಡಿಸಬೇಕು. ಮಸ್ಟರಿಂಗ್ ನಡೆಯುವ ಸ್ಥಳಗಳಲ್ಲಿ ಶಾಮಿಯಾನ ಹಾಕಬೇಕು ಮತ್ತು ಮೊಬೈಲ್ ಶೌಚಾಲಯಗಳ ವ್ಯವಸ್ಥೆ ಮಾಡಬೇಕು ಹಾಗೂ ಒಂದು ಅಂಬುಲೆನ್ಸ ಇರಬೇಕು. ಮತದಾನ ಸಿಬ್ಬಂದಿಗಳಿಗೆ ಬೆಳಿಗ್ಗೆ ಉಪಹಾರ ವ್ಯವಸ್ಥೆ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲು ಇದಕ್ಕೆ ಒಬ್ಬರನ್ನು ನಿಯೋಜನೆ ಮಾಡಬೇಕೆಂದರು ಹೇಳಿದರು.
ಈ ಸಭೆಯಲ್ಲಿ ಬೀದರ ಸಹಾಯಕ ಆಯುಕ್ತರಾದ ಲವೀಶ್ ಓರ್ಡಿಯಾ, ಚುನಾವಣಾ ತಹಶಿಲ್ದಾರ ಅಣ್ಣಾರಾವ್ ಪಾಟೀಲ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಸುವರ್ಣಾ, ಎನ್.ಐ.ಸಿ. ಅಧಿಕಾರಿ ಶ್ರೀನಿವಾಸ, ಎ.ಆರ್.ಓ. ತಹಶಿಲ್ದಾರರು, ಸೆಕ್ಟರ್ ಅಧಿಕಾರಿಗಳು ಸೇರಿದಂತೆ ಚುನಾವಣೆಗೆ ನಿಯೋಜಿತ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.