ಬೈಕ್ ಜಾಥ ಮತದಾನ ಜಾಗೃತಿ
ಕಲಬುರಗಿ:ಮೇ.4: ಜಿಲ್ಲೆಯ ಅಫಜಲಪುರ ತಾಲೂಕು ತಹಶಿಲ್ದಾರರ ಕಾರ್ಯಾಲಯದಿಂದ ವಿವಿಧ ಬಡಾವಣೆಗಳಲ್ಲಿ ಹಾಗೂ ಬಸವೇಶ್ವರ ವೃತ, ಬಸ್ ನಿಲ್ದಾಣ, ವಿಭಿನ್ನವಾಗಿ ತಾಲೂಕು ಸ್ವೀಪ್ ಸಮಿತಿ ವತಿಯಿಂದ ದ್ವಿಚಕ್ರ ವಾಹನ ಮೂಲಕ ಮತದಾರರ ಜಾಗೃತಿ ಜಾಥ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಚುನಾವಣಾ ಸಹಾಯಕ ನಿರ್ದೇಶಕರು ಜಾವಿದ ಕೆ ಕರಣಗಿ ಹಸಿರು ನಿಶಾನೆ ತೋರಿಸಿ ಬೈಕ್ ಜಾಥಕ್ಕೆ ಚಾಲನೆ ನೀಡಿದರು..
ನಂತರ ಮತದಾನದ ಪ್ರತಿಜ್ಞಾ ವಿಧಿ ಬೋಧಿಸಿದರು. ತಪ್ಪದೆ ಮೇ 7 ರಂದ ಮತದಾನ ಮಾಡಲು ಕರೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿ ಸಂಜೀವ್ ಕುಮಾರ್ ದಾಸರ್, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್, ತಾಲೂಕು ಯೋಜನಾಧಿಕಾರಿ ಡಾ.ರೇಣುಕಾ, ಸೇರದಂತೆ ತಾಲೂಕು ಮಟ್ಟದ ಅಧಿಕಾರಿಗಳು ತಾಲೂಕು ಪಂಚಾಯಿತಿ ಸಿಬ್ಬಂದಿ ಇದ್ದರು.