ಜಿಲ್ಲೆಯಲ್ಲಿ 8,289 ವಿದ್ಯಾರ್ಥಿಗಳು ನೀಟ್ ಪರಿಕ್ಷೆಗೆ ಅರ್ಹರು: ಮಠಪತಿ
ಬೀದರ್: ಮೇ.4:ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಜಿಲ್ಲೆಯ 14 ಪರಿಕ್ಷಾ ಕೇಂದ್ರಗಳಲ್ಲಿ 8,289 ವಿದ್ಯಾರ್ಥಿಗಳು ನೀಟ್ ಪರಿಕ್ಷೆ ಬರೆಯುತ್ತಿದ್ದಾರೆ ಎಂದು ಜಿಲ್ಲಾ ನೀಟ್ ಪರಿಕ್ಷೆ ಸಂಯೋಜಕರಾದ ಮಲ್ಲಿನಾಥ ಮಠಪತಿ ತಿಳಿಸಿದರು.
ಶುಕ್ರವಾರ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ಉದ್ದೇಸಿಸಿ ಮಾತನಾಡಿರುವ ಅವರು, ದೇಶದಲ್ಲಿ ಈ ವರ್ಷ ಒಟ್ಟು 23 ಲಕ್ಷ ವಿದ್ಯಾರ್ಥಿಗಳು ನೀಟ್ ಪರಿಕ್ಷೆ ಬರೆಯುತ್ತಲಿದ್ದು, ರಾಜ್ಯದಲ್ಲಿ 53 ಸಾವಿರ ವಿದ್ಯಾರ್ಥಿಗಳು ಪರಿಕ್ಷೆ ಬರೆಯಲಿದ್ದಾರೆ. ನಾಳೆ ರವಿವಾರ ಮಧ್ಯಾಹ್ನ 2 ಗಂಟೆಗೆ ಪರಿಕ್ಷೆ ಪ್ರಾರಂಭವಾಗಿ ಸಾಯಂಕಾಲ 5.20 ಗಂಟೆಗೆ ಮುಕ್ತಾಯಗೊಳ್ಳಲಿದೆ. ವಿದ್ಯಾರ್ಥಿಗಳು ಪ್ರವೇಶ ಕೇಂದ್ರಗಳಲ್ಲಿ ಬೆಳಿಗ್ಗೆ 11 ಗಂಟೆಯಿಂದಲೇ ತೆರಳಬಹುದು. ಪರಿಕ್ಷಾ ಮುನ್ನಾದಿನ ಅಂದರೆ ಶನಿವಾರ ತಮ್ಮ ಪರಿಕ್ಷಾ ಕೇಂದ್ರಗಳಿಗೆ ತೆರಳಿ ತಮ್ಮ ನೊಂದಣಿ ಸಂಖ್ಯೆ ಖಾತರಿಪಡಿಸಿಕೊಳ್ಳಬಹುದಾಗಿದೆ ಎಂದವರು ತಿಳಿಸಿದರು.
ಜಿಲ್ಲೆಯಲ್ಲಿ ಕಳೆದ ವರ್ಷ 16 ನೀಟ್ ಪರಿಕ್ಷಾ ಕೇಂದ್ರಗಳಿದ್ದವು. ಆದರೆ ಈ ವರ್ಷ 14 ಪರಿಕ್ಷಾ ಕೇಂದ್ರಗಳಿವೆ. ಅದರಲ್ಲಿ ಶಾಹಿನ್ ಕಾಲೇಜು ಪ್ರಥಮ ಬಾರಿಗೆ ನೀಟ್ ಪರಿಕ್ಷಾ ಕೇಂದ್ರವಾಗಿ ಗುರ್ತಿಸಿದೆ. ಹುಮನಾಬಾದ್‍ನ ಶಕುಂತಲಾ ಪಾಟೀಲ ಪದವಿಪೂರ್ವ ಕಾಲೇಜು ಹಾಗೂ ಭಾಲ್ಕಿ ಕರಡ್ಯಾಳದ ಚನ್ನಬಸವೇಶ್ವರ ಗುರುಕುಲ ನೀಟ್ ಪರಿಕ್ಷಾ ಕೇಂದ್ರಗಳಾಗಿ ಗುರ್ತಿಸಿದೆ. ಬೀದರ್ ನಗರದಲ್ಲಿ ಶಾಹಿನ್ ಕಾಲೇಜು, ಜ್ಞಾನಸುಧಾ ವಿದ್ಯಾಲಯ, ಗುಇರುನಾನಕ ಕಾಲೇಜು, ಕರ್ನಾಟಕ ಕಾಲೇಜು, ಲಿಂಗರಾಜಪ್ಪ ಕಾಲೇಜು ಸೇರಿದಂತೆ ನಗರದಲ್ಲಿ 12 ಪರಿಕ್ಷಾ ಕೇಂದ್ರಗಳಿವೆ. ಪ್ರತಿ ಪರಿಕ್ಷಾ ಕೇಂದ್ರಗಳಿಗೆ ಒಬ್ಬರು ಪಿ.ಎಸ್.ಐ ಹಾಗೂ ಇಬ್ಬರು ಪೋಲಿಸ್ ಕಾನ್ಸಟೆಬಲ್‍ಗಳನ್ನು ನಿಯೋಜಿಸಲಾಗಿದೆ. ವಿಶೇಷವಾಗಿ ಶಾಹಿನ್ ಕಾಲೇಜು ಮೂಲಕವೇ ಎಲ್ಲ ಪರಿಕ್ಷಾ ಕೇಂದ್ರಗಳ ಒ.ಎಮ್.ಆರ್ ಸೀಟ್‍ಗಳು ರಾಜ್ಯಧಾನಿ ತಲುಪಲಿವೆ ಎಂದು ವಿವರಿಸಿದರು.
ನೀಟ್ ಪರಿಕ್ಷೆ 720 ಅಂಕಗಳಿಗೆ ಒಳಗೊಂಡಿದ್ದು, ಭೌತಶಾಸ್ತ್ರ, ರಸಾಯನಶಾಸ್ತ್ರ, ಸಸ್ಯಶಾಸ್ತ್ರ ಹಾಗೂ ಪ್ರಾಣಿಶಾಸ್ತ್ರ ವಿಷಯಗಳು ಒಳಗೊಂಡಿರುತ್ತವೆ ಎಂದವರು ತಿಳಿಸಿದರು.
ಶಾಹಿನ್ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಅಬ್ದುಲ್ ಖದೀರ್ ಮಾತನಾಡಿ, ನಮ್ಮ ಕಾಲೇಜಿನಲ್ಲಿ ಈ ವರ್ಷ ನೀಟ್ ಪರಿಕ್ಷಾ ಕೇಂದ್ರವಾಗಿ ಗುರ್ತಿಸಿರುವುದು ಹೆಮ್ಮೆ ಎನಸಿದೆ. ನಮ್ಮ ಕಾಲೇಜಿಗೆ ಬಂದು ಪರಿಕ್ಷೆ ಬರೆಯುವ ಎಲ್ಲ ವಿದ್ಯಾರ್ಥಿಗಳಿಗೆ ಸಕಲ ಸೌಲಭ್ಯ ಒದಗಿಸಲಾಗುವುದು ಎಂದರು.