ಮನೆಕಳ್ಳತನ ಆರೋಪಿಗಳು ಬಂಧನ
ಸೇಡಂ, ಮೇ,04: ಡಿವೈಎಸ್ಪಿ ಎಸ್.ಎಸ್. ಹಿರೇಮಠ ರವರ ಮಾರ್ಗದರ್ಶನದಲ್ಲಿ ಇನ್ಸ್‍ಪೆಕ್ಟರ್ ಎನ್.ಕೆ. ದೌಲತ್ ರವರ ಸಾರಥ್ಯದಲ್ಲಿ ಮುಧೋಳ್ ಠಾಣೆ ಪೆÇಲೀಸರ ಕಾರ್ಯಾಚರಣೆ ನೇತೃತ್ವದಲ್ಲಿ ಮನೆಕಳ್ಳತನದ ಆರೋಪಿಗಳನ್ನು ಬಂಧನ ಮಾಡಲಾಗಿದೆ ಎಂದು ಸಂಜೆವಾಣಿಗೆ ಪಿಐ ಎನ್.ಕೆ. ದೌಲತ್ ಮಾಹಿತಿ
ತಿಳಿಸಿದ್ದಾರೆ.
ಚಿಂಚೋಳಿ ಉಪವಿಭಾಗದ, ಮುಧೋಳ ಠಾಣೆ ಪೆÇಲೀಸರು, ಮನೆಗಳ್ಳತನದ ಆರೋಪದ ಮೇಲೆ, ಇಬ್ಬರನ್ನು ಬಂಧಿಸಿದ್ದಾರೆ. ಮುದೋಳ ಠಾಣೆ ವ್ಯಾಪ್ತಿಯ, ಶಿಲಾರಕೋಟ ಗ್ರಾಮದ ನಿವಾಸಿಗಳಾದ 1) ಶ್ರೀನಿವಾಸ ತಂದೆ ಸಾಯಪ್ಪ ಬೈರಗೊಂಡ ಮತ್ತು 2) ನಾಗೇಶ, ನರೇಶ ತಂದೆ ಬಾಲಪ್ಪ ಚಂದ್ರಕಲಾ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ 30 ಗ್ರಾಂ ಬಂಗಾರದ ಆಭರಣಗಳು, 80 ಗ್ರಾಂ ಬೆಳ್ಳಿಯ ಆಭರಣಗಳು ಮತ್ತು ರೂ. 1,19,000/- ನಗದು ಹಣವನ್ನು ವಶಪಡಿಸಿಕೊಂಡಿರುವುದಾಗಿ ಹೇಳಿದರು.ದಿನಾಂಕ 15-4-2024 ಮತ್ತು ದಿನಾಂಕ 28-4-2024ರಂದು, ಶಿಲಾರಕೋಟ ಗ್ರಾಮದಲ್ಲಿ, ಮೂರು ಮನೆಗಳ್ಳತನ ಪ್ರಕರಣಗಳು ನಡೆದಿದ್ದವು. ಈ ಬಗ್ಗೆ ದಾಖಲಾಗಿದ್ದ
ಪ್ರಕರಣದ ತನಿಖೆ ನಡೆಸಿರುವ, ಮುದೋಳ ಠಾಣೆ ಪೆÇಲೀಸರು, ಹಲವು ಆಯಾಮಗಳ ಮೂಲಕ ಖಚಿತ ಮಾಹಿತಿ ಸಂಗ್ರಹಿಸಿ, ದಿನಾಂಕ 1-5-2024ರಂದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಇವರುಗಳ ಬಂಧನದಿಂದಾಗಿ,ಮೂರು ಪ್ರಕರಣಗಳಿಗೂ ಮುಕ್ತಿ ಸಿಕ್ಕಿದೆ. ಕಲಬುರುಗಿ ಜಿಲ್ಲೆ ಎಸ್ಪಿ ಎಂ.ಹೆಚ್. ಅಕ್ಷಯ್, ಅಡಿಷನಲ್ ಎಸ್ಪಿ ಶ್ರೀನಿಧಿ ಮತ್ತು ಚಿಂಚೋಳಿ ಉಪವಿಭಾಗದ ಡಿವೈಎಸ್ಪಿ ಸಂಗಮನಾಥ ಎಸ್.ಹಿರೇಮಠ ರವರುಗಳ ಮಾರ್ಗದರ್ಶನ, ಮುಧೋಳ ಪೆÇಲೀಸ್ ಇನ್ಸ್‍ಪೆಕ್ಟರ್ ಎನ್.ಕೆ. ದೌಲತ್ ರವರ ಸಾರಥ್ಯದಲ್ಲಿ ನಡೆದ ಕಾರ್ಯಾಚರಣೆಯಲ್ಲಿ; ಸಬ್ ಇನ್ಸ್‍ಪೆಕ್ಟರ್ ಸೋಮಲಿಂಗಪ್ಪ ಹಾಗೂ ಸಿಬ್ಬಂದಿಯವರಾದ ಶಂಕರಗೌಡ,ಸಿದ್ದರಾಮ, ಶಿವಕುಮಾರ್, ಶಿವಕುಮಾರ್ ಗುತ್ತೇದಾರ್ ಮತ್ತು ವೀರಾರೆಡ್ಡಿ ಈ ವೇಳೆಯಲ್ಲಿ ಇದ್ದರು.