ಬಿ ಎಲ್ ಒ ತರಬೇತಿ: ಚುನಾವಣಾ ಕಾರ್ಯ ದಕ್ಷತೆ, ಪ್ರಾಮಾಣಿಕತೆಯಿಂದ ನಿರ್ವಹಿಸಿ
ಸಂಜೆವಾಣಿ ವಾರ್ತೆ
ಸಿರುಗುಪ್ಪ, ಮೇ.04: ಚುನಾವಣಾ ಕಾರ್ಯವು ಸಂಪೂರ್ಣವಾಗಿ ಯಶಸ್ವಿಯಾಗಲು ಎಲ್ಲರೂ ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ಕೇಲಸವನ್ನು ನಿರ್ವಹಿಸಬೇಕು ಎಂದು ಸಿರುಗುಪ್ಪ ತಾಲ್ಲೂಕು ಸಹಾಯಕ ಚುನಾವಣಾಕಾರಿ ತಿರುಮಲೇಶ್ ತಿಳಿಸಿದರು.
ತಾಲ್ಲೂಕಿನ ತೆಕ್ಕಲಕೋಟೆ ಪಟ್ಟಣದ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ  ಕೊಪ್ಪಳ ಲೋಕಸಭಾ ಚುನಾವಣೆ ಪ್ರಯುಕ್ತ ನಡೆದ ತೆಕ್ಕಲಕೋಟೆ ಹಾಗೂ ಕರೂರು ಹೋಬಳಿ ವ್ಯಾಪ್ತಿಯ ಸೆಕ್ಟರಲ್ ಅಧಿಕಾರಿಗಳು ಹಾಗೂ 150ಕ್ಕೂ ಹೆಚ್ಚು ಬಿಎಲ್ ಒ ಗಳ ತರಬೇತಿ ಕಾರ್ಯಾಗಾರ ಉದ್ದೇಶಿಸಿ ಮಾತನಾಡಿದರು.
ಈ ಬಾರಿಯ ಚುನಾವಣೆಯಲ್ಲಿ ಬಿ ಎಲ್ ಒ ಗಳು ಎಲೆಕ್ಟ್-1 ಆ್ಯಪ್ ಮೂಲಕ 19 ಅಂಶಗಳನ್ನು ಸಮಯಕ್ಕೆ ಸರಿಯಾಗಿ ಮಾಹಿತಿಯನ್ನು ಆಪ್ ಲೋಡ್ ಮಾಡ ಬೇಕಾದ ಹಿನ್ನೆಲೆಯಲ್ಲಿ ಯಾರೂ ನಿರ್ಲಕ್ಷ್ಯ ತಾಳದೆ ದಕ್ಷತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಜಿಲ್ಲಾ ಚುನಾವಣಾ ಸಮಾಲೋಚಕ ಹಾಗೂ ತರಬೇತುದಾರ ಬಸವರಾಜ  ಬಿ ಎಲ್ ಒ ಗಳಿಗೆ ತರಬೇತಿ ನೀಡಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಶಂಶಾ ಆಲಂ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ಗುರುಪ್ಪ, ಸೆಕ್ಟರಲ್ ಅಧಿಕಾರಿ ಸಾಲಿ ಚಂದ್ರಮೌಳಿ, ಕಂದಾಯ ನಿರೀಕ್ಷಕ ಸುರೇಶ್ ಬಾಬು, ಗ್ರಾಮ ಲೆಕ್ಕಾಧಿಕಾರಿ ಶಿವರಾಜ, ಪಟ್ಟಣ ಪಂಚಾಯಿತಿ ಪ್ರಭಾರ ಮುಖ್ಯಾಧಿಕಾರಿ ಶೋಭಾ, ಸಿಬ್ಬಂದಿ ಸುಬ್ರಮಣ್ಯಂ, ಹುಸೇನ್ ಭಾಷ, ಖಾದರ್  ಇದ್ದರು.