ಮತ ಹಾಕಿ ಕೈ ಬೆರಳು ತೋರಿಸಿದ ಮಹಿಳೆಯರಿಗೆ ಉಚಿತ ಐಬ್ರೋ.ಅಂಗಡಿ ಮುಂಭಾಗದಲ್ಲಿ ಮತದಾನ ಪ್ರೋತ್ಸಾಹದ ಬಿತ್ತಿಪತ್ರಗಳು.
ಸಂಜೆವಾಣಿವಾರ್ತೆ
 ಹರಪನಹಳ್ಳಿ, ಮೇ.04,: ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಮತ ಹಾಕುವಂತೆ ಪ್ರೋತ್ಸಾಹಿಸಲು ಅದರಲ್ಲೂ ಮಹಿಳೆಯರು ಕಡ್ಡಾಯವಾಗಿ ಮತಹಾಕಬೇಕು ಎಂಬ ಉದ್ದೇಶದಿಂದ ಪಟ್ಟಣದಲ್ಲಿ ಕನ್ನಡತಿ ನ್ಯಾಚೂರಲ್ ಬ್ಯೂಟಿ ಪಾರ್ಲರ ರ್ಮಾಲಿಕರು ಗಮನ ಸೆಳೆಯುತ್ತಿದ್ದಾರೆ.
ನಮ್ಮಲ್ಲಿ ಎರಡನೆ ಹಂತದ ಮತದಾನ ಇದೇ ಮೆ.7 ರಂದು ನಡೆಯುತ್ತದೆ, ಮೆ.7 ರಂದು ಯಾವುದೇ ಮಹಿಳೆಯರು ಮತದಾನ ಮಾಡಿ ತಮ್ಮ ಬೆರಳಿನ ಶಾಹಿ ಗುರುತು ತೋರಿಸಿದರೆ ಸಾಕು ಅಂತವರಿಗೆ ಉಚಿತವಾಗಿ ಐಬ್ರೋ ಮಾಡುತ್ತಾರೆ.
ಪಟ್ಟಣದ ಮಠದ ಕೇರಿಯ ರಾಘವೇಂದ್ರ ಮಠದ ಬಳಿ ಇರುವ ಕನ್ನಡತಿ ನ್ಯಾಚುರಲ್ಬ್ಯೂಟಿ ಪಾರ್ಲರ್ಬಳಿ ಮಹಿಳೆಯರು ಮತದಾನ ಮಾಡಿದ ನಂತರ ಆಗಮಿಸಿ ಮತದಾನ ಮಾಡಿದ ಗುರುತು ಬೆರಳಿನ ಕಪ್ಪು ಶಾಹಿ ಇರುವುದನ್ನು ತೋರಿಸಿ ಉಚಿತವಾಗಿ ಐಬ್ರೋ ಮಾಡಿಸಿಕೊಂಡು ಹೋಗಬಹುದು.
ಇದು ಮೆ.7 ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆವರೆಗೂ ಸತತವಾಗಿ ನಡೆಯುತ್ತದೆ, ಈ ಸಮಯದಲ್ಲಿ ಮತದಾನ ಮಾಡಿದ ಎಸ್ಟಿ ಮಹಿಳೆಯರು ಆಗಮಿಸಿದರೂ ಐ ಬ್ರೋ ಮಾಡಿಕೊಡಲಾಗುವುದು ಎಂದು ಬ್ಯೂಟಿ ಪಾರ್ಲರ ಮಾಲೀಕರಾದ ಕೆ.ಎಂ.ಲತಾ ಹೇಳುತ್ತಾರೆ
ತಮ್ಮ ಬ್ಯೂಟಿಪಾರ್ಲರ ಅಂಗಡಿ ಮುಂಬಾಗದಲ್ಲಿ ನನ್ನ ಮತ ನನ್ನ ಹಕ್ಕು, ಜನಸಾಮಾನ್ಯ ಶಕ್ತಿ ಮತ ಚಲಾವಣೆ, ಮತದಾನ ನಿಮ್ಮ ಹಕ್ಕು ನಿಮ್ಮ ಜವಾಬ್ದಾರಿ, ನಾನು ಮತ್ತು ನನ್ನ ಮತ ಮಾರಾಟಕ್ಕಿಲ್ಲ, ನೈತಿಕ ಮತದಾನ ಮಾಡಿ ಹೀಗೆ ಮತದಾನ ಪ್ರೋತ್ಸಾಹಿಸಲು ಬಿತ್ತಿಪತ್ರಗಳನ್ನು ಅಂಟಿಸಿದ್ದಾರೆ.
 ಈ ಹಿಂದೆ ಇವರು ಲೇಡಿಸ್ ಟೈಲರಿಂಗ್ ಅಂಗಡಿ ನಡೆಸುತ್ತಿದ್ದಾಗÀಲೂ ರಾಖಿ ಹಬ್ಬದಲ್ಲಿ ಸತತ ಎಂಟು ವರ್ಷ ಮಹಿಳೆಯರಿಗೆ ಉಚಿತವಾಗಿ ರಾಖಿಗಳನ್ನು ವಿತರಿಸಿ ಸಹೋದರರ ಬಾತೃತ್ವದ ಬಗ್ಗೆ ಸಂದೇಶ ನೀಡಿದ್ದರು. ಈಗ್ಗೆ 6 ತಿಂಗಳ ಕೆಳಗೆ ಇವರು ಈ ಬ್ಯೂಟಿ ಪಾರ್ಲರ ಆರಂಭಿಸಿದ್ದಾರೆ.
ಅವರ ಪತಿ ನಟರಾಜ ಸಹ ಸದಾ ಬೆನ್ನೆಲುಬಾಗಿ ನಿಂತಿದ್ದಾರೆ. ಯಾರು ಏನೆ ಅನ್ನಲಿ ಒಟ್ಟಿನಲ್ಲಿ ಮಹಿಳೆಯರು ಮಾತ್ರ ಭಾಗ್ಯವಂತರು.
ನಮ್ಮ ಉಚಿತ ಐ ಬ್ರೋ ಕಾರ್ಯಕ್ರಮ ಮತದಾನದ ಉತ್ತೇಜನಕ್ಕಾಗಿ, ಸಾಮಾಜಿಕ ಕಳಕಳಿಯಿಂದ ಮಾತ್ರ ಕೂಡಿದೆ, ತಪ್ಪದೆ ಮತ ಹಾಕಿ ಸೌಲಭ್ಯವನ್ನು ಮಹಿಳೆಯರು ಸದುಪಯೋಗ ಪಡಿಸಿಕೊಳ್ಳಿ.
ಕೆ.ಎಂ.ಲತಾ ನಟರಾಜ, ಮಾಲೀಕರು, ಕನ್ನಡತಿ ಬ್ಯೂಟಿ ಪಾರ್ಲರ್.