ಹಬೋಹಳ್ಳಿ ಕ್ಷೇತ್ರದಲ್ಲಿ ಬಿಜೆಪಿಗೆ 30 ಸಾವಿರ ಮತಗಳು ಲೀಡ್ : ಕೆ ನೇಮಿರಾಜ್ ನಾಯ್ಕ್
ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ. ಮೇ.04 ಲೋಕಸಭಾ ಚುನಾವಣೆಯಲ್ಲಿ ಹಗರಿಬೊಮ್ಮನಹಳ್ಳಿ ಕ್ಷೇತ್ರದಿಂದ ಬಿಜೆಪಿಗೆ 30 ಸಾವಿರಕ್ಕೂ ಹೆಚ್ಚು  ಮತಗಳು ಲೀಡ್ ಕೊಡುತ್ತದೆ ಎಂದು ಶಾಸಕ ಕೆ. ನೇಮಿರಾಜ್ ನಾಯ್ಕ್  ತಿಳಿಸಿದರು.
 ಪಟ್ಟಣದ ತಮ್ಮ ನಿವಾಸದಲ್ಲಿ ಕಾಂಗ್ರೆಸ್ ತೊರೆದು ಜೆಡಿಎಸ್ ಮೈತ್ರಿ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಈ ಚುನಾವಣೆ ದೇಶದ ಭದ್ರತೆಯ ದೃಷ್ಟಿಯಿಂದ ಮತದಾರರು ಬಿಜೆಪಿ ಪಕ್ಷಕ್ಕೆ ಒಲವು ತೋರಿಸುತ್ತಿದ್ದಾರೆ. ಮತ್ತೊಮ್ಮೆ ಪ್ರಧಾನಿಯಾಗಿ ಮೋದಿ ಆಗಬೇಕೆಂಬುದು ಮತದಾರರ ಆಶಯವಾಗಿದೆ. ಈ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರದಿಂದ ಶ್ರೀರಾಮುಲು ನೂರಕ್ಕೆ ನೂರು ಗೆಲ್ಲುತ್ತಾರೆ. ಜೊತೆಗೆ ಕೇಂದ್ರ ಸಚಿವರು ಕೂಡ ಆಗುತ್ತಾರೆ ಎಂದರು.
 ಕಾಂಗ್ರೆಸ್ ಪಕ್ಷ ತೊರೆದು ಬಸರಕೋಡು ಮತ್ತು ಬನ್ನಿಗೋಳ ಗ್ರಾಮ ಪಂಚಾಯತಿ ವ್ಯಾಪ್ತಿಯ  ಕಾಂಗ್ರೆಸ್ ಕಾರ್ಯಕರ್ತರು ಪಕ್ಷ ತೊರೆದು ಶಾಸಕ ನೇಮಿರಾಜ್ ನಾಯ್ಕ್ ನೇತೃತ್ವದಲ್ಲಿ ಜೆಡಿಎಸ್ ಮೈತ್ರಿಕೂಟಕ್ಕೆ  ಸೇರ್ಪಡೆಯಾದರು.
ಗ್ರಾ ಪಂ ಸದಸ್ಯರಾದ ಎಂ ಎಂ ಗವಿಸಿದ್ದಯ್ಯ, ಬಿ ಕರಬಸಪ್ಪ, ಕೆ ನಾಗರಾಜ್ ಎಚ್ ಎಂ ನಾಗರಾಜ್ ಬಿ ಕೆ ಶ್ರೀಧರ್ , ಎಮ್ ವೆಂಕಪ್ಪ ಎಸ್ ಯಮನೂರ್ ಎಸ್ಎಂ ಶಿವಶಾಂತ ಇತರರು.