ದೇಶದಲ್ಲಿ ಮಹಿಳಾ ಶಕ್ತಿ ಬಿಜೆಪಿ ವಿರೋಧಿಯಾಗಿದೆ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ.04: ದೇಶದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಮಹಿಳಾ ಮತದಾರರು ಬಿಜೆಪಿ ವಿರೋಧಿಯಾಗಿ ಮಾರ್ಪಟ್ಟಿದ್ದಾರೆಂದು ರಾಜ್ಯ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪ ಅಮರನಾಥ್ ಹೇಳಿದ್ದಾರೆ.
ಅವರು ಇಂದು ನಗರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡುತ್ತಿದ್ದರು.
ಮಹಿಳೆಯರು   ಹೆಚ್ಚು ಮತದಾನ ಮಾಡಲಿದ್ದಾರೆ. ಅವರು ತೆಗೆದುಕೊಳ್ಳುವ ನಿರ್ಧಾರವೇ ದೇಶದ ಆಡಳಿತ ನಡೆಸುವವರ ಭವಿಷ್ಯ ನಿಂತಿದೆ.
ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಾಮಾನ್ಯ ಜನರ  ದಿನ ನಿತ್ಯದ ಬದುಕು ದುಸ್ತರವಾಗಿದೆ. ಇದರಿಂದ ಮಹಿಳೆಯರು ಬಿಜೆಪಿಯ ಹುಸಿ ಭರವಶೆಗಳಿಂದ ಬೇಸತ್ತು ಕಾಂಗ್ರೆಸ್ ಗೆ ಮತ ಹಾಕಲು ನಿರ್ಧರಿಸಿದ್ದಾರೆಂದರು.
ಇಲ್ಲಿ ಹಣ ಹಾಗು ಸಿದ್ದಾಂತಗಳನ್ನು ನಂಬಿದ ಇಬ್ಬರು ವ್ಯಕ್ತಿಗಳ ಮಧ್ಯೆ ನಡೆಯುವ ಧರ್ಮ ಅಧರ್ಮದ ಯುದ್ದವಾಗಿದೆಂದ ಅವರು, ಧರ್ಮ, ಜಾತಿಗಳಿಂದ ದಾರಿ ತಪ್ಪಿಸುತ್ತಿದ್ದಾರೆ ಬಿಜೆಪಿ. ಇವರ ಆಡಳಿತದಲ್ಲಿ. ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ, ಕೊಲೆ ಹೆಚ್ಚುತ್ತಿದೆಂದರು.
ಕಳೆದ ಎರೆಡು ಬಾರಿಯ ಲೋಕಸಭಾ  ಚುನಾವಣೆಯಲ್ಲಿ‌ ಮೋದಿ ಅಲೆ ಇತ್ತು. ಅವರ ಅಭ್ಯರ್ಥಿಗಳು ಗೆದ್ದಿದ್ದರು. ಆದರೆ ಹತ್ತು ವರ್ಷಗಳಲ್ಲಿ ಅವರಿಂದ ಜನರ ಸಮಸ್ಯೆಗಳಿಗೆ ಪರಿಹಾರ ಸಿಗಲಿಲ್ಲ. 
ಬಿಜೆಪಿ ಆಡಳಿತದಿಂದ ಹತ್ತು ಲಕ್ಷ ಮಹಿಳೆಯರು ಉದ್ಯೋಗ ಕಳೆದುಕೊಂಡಿದ್ದಾರೆಂದು ಆರೋಪಿಸಿದರು. ಮಂಗಳ ಸೂತ್ರದ ಬಗ್ಗೆ ಚರ್ಚಿಸಿ ಮತಯಾಚಿಸುತ್ತಿದ್ದಾರೆ ಮೋದಿ ಅವರು, ಇದು ಅವರ ಪಕ್ಷದ ಸೋಲಿನ ಭೀತಿಯಾಗಿದ್ದಾರೆ.
ಮಹಿಳೆಯರಿಗೆ ಶಕ್ತಿ ಯೋಜನೆ ಸಾಕಷ್ಟು ಪರಿಣಾಮ ಬೀರಿದೆ. ಅವರಿಗೆ ಅರ್ಥಿಕವಾಗಿ ಸಹಕಾರಿಯಾಗಿದೆ. ನಾಲ್ಕಕು ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿದ್ದಾರೆಂದರು.
ಮಣಿಪುರದಲ್ಲೂ ಮಹಿಳೆಯರಿಗೆ ಸುರಕ್ಷಿತವಿಲ್ಲ.  ಅದರ ಬಗ್ಗೆ ಬಿಜೆಪಿ ಮಾತನಾಡಲ್ಲ ಆದರೆ ನಾರಿ ಶಕ್ತಿ ಯೋಜನೆ ಬಗ್ಗೆ ಮಾತನಾಡುತ್ತಾರೆ.  ನೇಹ ಹತ್ಯೆಗೆ ನ್ಯಾಯಸಿಗದಿದ್ದರೆ ನಾನು ಬೀದಿಯಲ್ಲಿ ಹೋರಾಟ ಮಾಡಲು ಸಿದ್ದಳಿರುವೆ ಎಂದರು.
ಪಕ್ಷದ ಜಿಲ್ಲಾ ಅಧ್ಯಕ್ಷೆ ಮಜುಳ,  ಲಕ್ಷ್ಮಿ, ಜ್ಯೋತಿ, ಮಲ್ಲಮ್ಮ, ಶೋಭಾಕಾಳಿಂಗ, ಅಸಿನಾ, ಯೋಗಿನಿ, ಮೊದಲಾದವರು ಇದ್ದರು.
ಪತ್ರಕರ್ತರ
ಕ್ಷಮೆ ಕೇಳಿದ ಪುಷ್ಪ ಅಮರನಾಥ:
ಮಹೀಳಾ ಶಕ್ತಿ ದೇಶದಲ್ಲಿ ಪ್ರಬಲವಾಗಿದೆಂದ ಪುಷ್ಪ ಅಮರನಾಥ ಅವರಿಗೆ. ಅದಕ್ಕಾಗಿ  ಹೆದರಿ ಅಮೇಥಿ ಯಿಂದ ಸ್ಪರ್ಧೆ ಮಾಡಲಿಲ್ಲವಾ ಎಂದು ಪ್ರಶ್ನಿದ ಪತ್ರಕರ್ತರಿಗೆ. ಇವರೇನು ಬಿಜೆಪಿ ಏಜೆಂಟರೆಂದರು. ಹೀಗೆ ಹೇಳಿದ್ದಕ್ಕೆ ಅವರನ್ನು ಪತ್ರಕರ್ತರು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಾಗ ತಾವು ಮಾತನಾಡಿದ್ದು ತಪ್ಪಾಯಿತೆಂದು ಕ್ಷಮೆಕೇಳಿದರು.