ವಿಜೃಂಭಣೆಯ ಹೂವಿನ ಕರಗ
ಕೆ.ಆರ್.ಪುರ,ಮೇ೪- ಶ್ರೀ ಬಾವಿ ಗಂಗಮ್ಮ ದೇವಿಯ ಹತ್ತನೇ ವರ್ಷದ ಹೂವಿನ ಕರಗ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.
ಶುಕ್ರವಾರ ಸಂಜೆ ೬ ಗಂಟೆ ಸುಮಾರಿಗೆ ಮಲ್ಲಿಗೆ ಹೂವುಗಳಿಂದ ಅಲಂಕರಿಸಿದ ಹೂವಿನ ಕರಗವನ್ನು ಕರಗಧಾರಿ ಹೊತ್ತು ಕೆಆರ್ ಪುರದ ಹಳೇ ಪೊಲೀಸ್ ಠಾಣೆ ರಸ್ತೆಯಿಂದ ಕೋಟೆ ವೆಂಕಟರಮಣ ಸ್ವಾಮಿ ದೇವಾಲಯ ರಸ್ತೆ,ಬಾಲಪ್ಪ ರೆಡ್ಡಿ ಬಡಾವಣೆ, ಕೆಟಿ ವೆಂಕಟಪ್ಪ ಬಡಾವಣೆ, ಮುನಿಯಪ್ಪ ಬಡಾವಣೆ,ವಾಸವಿ ಮಹಲ್ ರಸ್ತೆ,ಕುಂಬಾರ ಬೀದಿ ರಸ್ತೆ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಸಂಚರಿಸಿ ಮನೆಗಳಿಂದ ಪೂಜೆ ಸ್ವೀಕರಿಸಿ ಬೆಳಿಗ್ಗೆ ೪:೩೦ ಕ್ಕೆ ಕೆ.ಟಿ.ರಾಜಕುಮಾರ್ ಆಪೀಸ್ ರಸ್ತೆ ಯಲ್ಲಿ ಕೊನೆಗೊಂಡು ಶ್ರೀ ಗಂಗಮ್ಮ ದೇವಾಲಯ ತಲುಪಿತು.ಶ್ರೀ ಬಾವಿ ಗಂಗಮ್ಮ ಜಾತ್ರಾ ಮಹೋತ್ಸವ ಅಧ್ಯಕ್ಷ ಕೆ.ಟಿ.ರಾಜಕುಮಾರ್ ಮುಂದಾಳತ್ವ
ದಲ್ಲಿ ನಡೆದ ಕರಗ ಉತ್ಸವ ಕಣ್ತುಂಬಿಕೊಳ್ಳಲು ಅಯ್ಯಪ್ಪ ನಗರ,ರಾಮಮೂರ್ತಿ ನಗರ,ದೇವಸಂದ್ರ,ಐಟಿಐ ,ವಿಜಿನಾಪುರ ಸೇರಿದಂತೆ ವಿವಿಧ ಭಾಗಗಳಿಂದ
ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು,
ಈ ವೇಳೆ ಭಕ್ತರು ಕರಗದ ಮೇಲೆ ಮಲ್ಲಿಗೆ ಹೂವುಗಳನ್ನು ಹಾಕಿ ಧನ್ಯಾತಾ ಭಾವ ಮರೆದರು.