ಭಾರಿ ಮಳೆಗೆ ಹಲವಡೆ ಉರುಳಿ ಬಿದ್ದ ಮರಗಳು
ಮೈಸೂರು.ಮೇ.04:- ಬಿರುಗಾಳಿ ಸಮೇತ ಬಿದ್ದ ಭಾರಿ ಮಳೆಗೆ ಹಲವಡೆ ಮರಗಳು ಉರುಳಿ ಬಿದ್ದಿವೆ. ಪ್ರಮುಖ ರಸ್ತೆಗಳಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತವಾಗಿದೆ.ಮರದ ಕೊಂಬೆಗಳ ತೆರುವಿಗೆ ಪೆÇಲೀಸರೇ ಮುಂದಾಗಿ ಅಚ್ಚರಿ ಮೂಡಿಸಿದ್ದಾರೆ. ಮೈಸೂರಿನ ಗ್ರಾಮಾಂತರ ಬಸ್ ನಿಲ್ದಾಣದ ಮುಂಭಾಗ ಭಾರಿ ಮಳೆಗೆ ಮರದ ಕೊಂಬೆ ಮುರಿದುಬಿದ್ದು ಸಂಚಾರ ಅಸ್ತವ್ಯಸ್ತಗೊಂಡಿತ್ತು.ಸ್ಥಳಕ್ಕೆ ಸಿಬ್ಬಂದಿಗಳ ಸಮೇತ ಆಗಮಿಸಿದ ಲಷ್ಕರ್ ಠಾಣೆ ಇನ್ಸ್ಪೆಕ್ಟರ್ ಸಲೀಂ ಅಬ್ಬಾಸ್ ಮರದಕೊಂಬೆ ತೆರುವಿಗೆ ಮುಂದಾದರು. ಸಲೀಅಬ್ಬಾಸ್ ರವರ ಕಾರ್ಯಕ್ಕೆ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಸಾಥ್ ನೀಡಿದರು.ಸಲೀಂ ಅಬ್ಬಾಸ್ ರವರ ಸಾಮಾಜಿಕ ಕಳಕಳಿಗೆ ಸಾರ್ವಜನಿಕರ ಮೆಚ್ಚುಗೆಯೂ ವ್ಯಕ್ತವಾಯಿತು.