ಮೇವು ಒದಗಿಸಲು ವಿಳಂಬ ಜಿಲ್ಲಾಡಳಿತ ವಿರುದ್ಧ: ಕಿಸಾನ್ ಸಂಘ ಪ್ರತಿಭಟನೆ
ಸಂಜೆವಾಣಿ ವಾರ್ತೆ
ಹನೂರು ಮೇ 4 : ಕ್ಷೇತ್ರದ ವಿವಿಧ ಕಡೆಗಳಲ್ಲಿ ಗೋ ಶಾಲೆಯನ್ನು ಪ್ರಾರಂಭಿಸಿದರು ಕಳೆದ ಒಂದು ವಾರಗಳಿಂದ ಸರಿಯಾಗಿ ಗೋವುಗಳಿಗೆ ಮೇವು ಒದಗಿಸುತ್ತಿಲ್ಲ ಸರಕಾರ ಹಾಗೂ ಜಿಲ್ಲಾಡಳಿತ ಅಧಿಕಾರಿಗಳು, ಜನಪ್ರತಿನಿದಿಗಳು ಕೂಡಲೇ ಮೇವು ಒದಗಿಸುವ ವ್ಯವಸ್ಥೆ ಕಲ್ಪಿಸಬೇಕು ಎಂದು ಭಾರತೀಯ ಕಿಸಾನ್ ಸಂಘದ ವತಿಯಿಂದ ಪ್ರತಿಭಟನೆ ನಡೆಸಿದ್ದಾರೆ.
ಹನೂರು ಪಟ್ಟಣದ ತಹಶೀಲ್ದಾರ್ ಕಚೇರಿ ಮುಂಭಾಗ ಗುರುವಾರದಂದು ಭಾರತೀಯ ಕಿಸಾನ್ ಸಂಘ ಪ್ರತಿಭಟನೆ ನೆಡೆಸಿ ಸರ್ಕಾರ ಹಾಗು ಜಿಲ್ಲಾಡಳಿತಕ್ಕೆ ದಿಕ್ಕಾರ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ಸ್ಥಳಕ್ಕೆ ತಾಲೂಕು ತಹಸೀಲ್ದಾರ್ ಗುರುಪ್ರಸಾದ್ ಅವರು ಆಗಮಿಸಿ ಭಾರತೀಯ ಕಿಸಾನ್ ಸಂಘ ಹಾಗೂ ಪದಾಧಿಕಾರಿಗಳ ಮನವೊಲಿಸಿ ಮಾತನಾಡಿದ ರವರು ಗೋವಳಿಗೆ ಮೇವು ಸಮಸ್ಯೆ ಆಗಿರುವುದು ನಮ್ಮ ಗಮನಕ್ಕೆ ಬಂದಿರುವುದರಿಂದ ಚಾಮರಾಜನಗರ ಜಿಲ್ಲಾಧಿಕಾರಿಗಳು ಅನುಮತಿ ಪಡೆದು ಮುಂದಿನ ದಿನಗಳಲ್ಲಿ ಮೇವು ಪೂರೈಸಲಾಗುವುದು ಎಂದು ಭರವಸೆ ನೀಡಿದರು.
ಪಶು ವೈದಾಧಿಕಾರಿ ಡಾ. ಸಿದ್ದರಾಜುರವರು ಮಾತನಾಡಿ ನಾನೊಬ್ಬನೇ ಹನೂರು ಕ್ಷೇತ್ರದಲ್ಲಿ ಪಶು ಆರೋಗ್ಯ ಕೇಂದ್ರ ಏಳು ಕೇಂದ್ರ ಇದ್ದು ಎಲ್ಲ ಕೇಂದ್ರಗಳಲ್ಲಿ ಪಶು ವೈದ್ಯಧಿಕಾರಿಗಳಿಲ್ಲದ ಕಾರಣ ನಾನೊಬ್ಬನೇ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಜಾನುವಾರಗಳಿಗೆ ಮೇವು ಜಾನುವಾರುಗಳಿಗೆ ಲಸಿಕೆ ಹಾಗೂ ಎಲ್ಲಾ ಕೆಲಸ ಕಾರ್ಯಗಳನ್ನು ಒಬ್ಬನೇ ನಿರ್ವಹಿಸುವುದು ಬಹಳ ಕಷ್ಟವಾಗಿದೆ.
ಕ್ಷೇತ್ರದ ಕೆಲವು ಕಡೆಗಳಲ್ಲಿ ಜಾನುವಾರುಗಳಿಗೆ ಮೇವನ್ನ ಒದಗಿಸುತಿದ್ದೆವು ತಾತ್ಕಾಲಿಕವಾಗಿ ಮೇವು ಸ್ಥಗಿತವಾಗಿದೆ ಮುಂದಿನ ದಿನದಲ್ಲಿ ನಮ್ಮ ಮೇಲಾಧಿಕಾರಿಗಳ ಅನುಮತಿ ಪಡೆದುಕೊಂಡು ಮೇವನ್ನು ಒದಗಿಸುವಂತಹ ಕೆಲಸ ಕಾರ್ಯಗಳನ್ನು ಮಾಡುತ್ತೇವೆ ಹಾಗಾಗಿ ಗೋಪಾಲಕರು ಸಾರ್ವಜನಿಕ ಸಹಕರಿಸಿ ಎಂದು ಮನವಿ ಮಾಡಿಕೊಂಡರು.
ಹನೂರು ತಾಲೂಕು ಕೇಂದ್ರದಲ್ಲಿ 16 ಗೋಶಾಲೆಯಲ್ಲಿ 778 ಟನ್ ಮೇವು ವಿತರಣೆ ಮಾಡಲಾಗಿದೆ. ಪಟ್ಟಣದ ಎಪಿಎಂಸಿ ಯಾರ್ಡ್, ಬಳಿಕ ವಿವಿಡೆದೆ ಮೇವು ವಿತರಣೆ ಮಾಡಲು ಸಬ್ಸಿಡಿ ನಿಗದಿ ಮಾಡಲಾಗಿದೆ ಹೀಗಾಗಿ ನೊಂದಾವಣೆ ಮಾಡಿಕೊಳ್ಳಿ ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಹನೂರು ತಾಲೂಕು ಅದ್ಯಕ್ಷ ಹರೀಶ್, ಜಿ. ಪ್ರ. ಕಾರ್ಯದರ್ಶಿ ಬೋಸ್ಕೊ, ಜಿಲ್ಲಾ ಕಮಿಟಿ ಸದಸ್ಯ ಶಾಗ್ಯ ಮಣಿಗಾರ್ ಪ್ರಸಾದ್, ತಾ. ಕಾ. ಸದಾನಂದ, ಮುಖಂಡರು ವಿಶ್ವ, ಕೊಪ್ಪ ಶಿವರಾಜು, ನಾಗರಾಜು, ಮಹೇಶ್, ಮುತ್ತಯ್ಯ, ಮುರುಗೇಶ್, ನಾಗೇಶ್, ಮಾದೇಶ್ ಇದ್ದರು.