ಬಿಜೆಪಿ ಮುಖಂಡ ವಿಜುಗೌಡರಿಂದ ಜೀವ ಬೆದರಿಕೆ: ರಕ್ಷಣೆ ಕೋರಿ ಎಂಎಲ್ಸಿ ಸುನೀಲಗೌಡರಿಂದ ಸಿಎಂಗೆ ಮನವಿ
ಸಂಜೆವಾಣಿ ವಾರ್ತೆ,
ವಿಜಯಪುರ,ಮೇ.4:ಬಿಜೆಪಿ ಮುಖಂಡ ವಿಜುಗೌಡ ಪಾಟೀಲ ಹಾಗೂ ಅವರ ಜನರಿಂದ ತನಗೆ ಜೀವ ಬೆದರಿಕೆ ಇದ್ದು, ಸೂಕ್ತ ರಕ್ಷಣೆ ಒದಗಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಮನವಿ ಮಾಡಿಕೊಂಡಿದ್ದಾರೆ.
ಶುಕ್ರವಾರ ನಗರದಲ್ಲಿ ಪತ್ರಿಕಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ವಿಜುಗೌಡ ಜೊತೆಗಿರುವ ಸರ್ದಾರ್ ಜೀಗಳು ನನಗೆ ಬಹಿರಂಗವಾಗಿಯೇ ಜೀವ ಬೆದರಿಕೆ ಹಾಕಿದ್ದು, ಈ ಬಗ್ಗೆ ಈಗಾಗಲೇ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ, ಗೃಹ ಸಚಿವರ ಹಾಗೂ ಪೆÇಲೀಸ್ ಮಹಾನಿರ್ದೇಶಕರಿಗೆ ದೂರು ಸಲ್ಲಿಸಿದ್ದೇನೆ ಎಂದು ತಿಳಿಸಿದರು.
ಹೊರ ರಾಜ್ಯಗಳಿಂದ ಬಂದಿರುವ ಕ್ರಿಮಿನಲ್ ಹಿನ್ನೆಲೆ ಹೊಂದಿರುವ ಸರ್ದಾರಜಿಗಳ ಬಗ್ಗೆ ಸಮಗ್ರ ತನಿಖೆ ನಡೆಸಲು ಒತ್ತಾಯ ಕೂಡಾ ಮಾಡಿದ್ದಾಗಿ ಅವರು ಹೇಳಿದ್ದಾರೆ. ವಿಜುಗೌಡರು ನನ್ನ ಮೇಲೆ ಆಗಾಗ ಗೂಂಡಾಗಿರಿ, ದಬ್ಬಾಳಿಕೆ ಮಾಡಿ ಜೀವ ಬೆದರಿಕೆ ಹಾಕುತ್ತಲೇ ಬಂದಿದ್ಧಾರ. ಮತ್ತೆ ನನ್ನ ಮೇಲೆಯೇ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದರು.
ವಿಜುಗೌಡರ ಹಿಂದೆ ಇರುವ ಸರ್ದಾರ್ ಜೀಗಳು ಅನೇಕ ರೀತಿಯ ಶಸ್ತ್ರಾಸ್ತ್ರಗಳು ಇರಿಸಿಕೊಂಡಿದ್ದಾರೆ, ವಿಜುಗೌಡರು ಸರ್ದಾರಜಿಯನ್ನು ತನ್ನ ಗನ್ ಮ್ಯಾನ್ ಎಂದು ಹೇಳುತ್ತಾರೆ, ಈ ಬಗ್ಗೆ ಪೆÇಲೀಸ್ ಇಲಾಖೆಗೆ ಮಾಹಿತಿ ನೀಡಬೇಕಾಗುತ್ತದೆ. ಈ ಬಗ್ಗೆ ಪೆÇಲೀಸರು ವಿಚಾರಣೆ ನಡೆಸಿದರೆ ಸರ್ದಾರ ಜೀ ನನಗೆ ಗೊತ್ತಿಲ್ಲ, ಮದುವೆಗೆ ಬಂದಿರಬಹುದು ಎಂದು ಹೇಳಿ ಜಾರಿಕೊಳ್ಳುವ ಪ್ರಯತ್ನವನ್ನು ವಿಜುಗೌಡರು ಮಾಡಿದ್ದಾರೆ ಎಂದು ಸುನೀಲಗೌಡರು ದೂರಿದರು.
ಇದಲ್ಲದೆ ಏ.26 ರಂದು ಬಬಲೇಶ್ವರ ಕಾಂಗ್ರೆಸ್ ಕಾರ್ಯಕರ್ತರು ರಾಹುಲ್ ಗಾಂಧಿ ಅವರ ಕಾರ್ಯಕ್ರಮಕ್ಕೆ ವಿಜಯಪುರಕ್ಕೆ ಆಗಮಿಸುತ್ತಿದ್ದರು, ಅವರನ್ನು ಹಲಗಣಿ ಕ್ರಾಸ್ ಬಳಿ ತಡೆದು ಬೆದರಿಕೆ ಹಾಕಿ ಓಡಿಸಿದ್ದಾರೆ, ಏ.28 ರಂದು ಮದುವೆ ಕಾರ್ಯಕ್ರಮದಲ್ಲಿ ಘಟನೆಗೆ ಸಂಬಂಧಿಸಿದಂತೆ ಸರ್ದಾರ್ ಜೀ ನನಗೆ ಮನೆಗೆ ನುಗ್ಗಿ ಕೊಲೆ ಮಾಡುತ್ತೇನೆ ಎಂದು ಹಿಂದಿ ಭಾಷೆಯಲ್ಲಿ ಜೀವ ಬೆದರಿಕೆ ಹಾಕಿದ್ದಾರೆ. ಆಗ ಕಾರಿನಲ್ಲಿದ್ದ ವಿಜುಗೌಡ ಸರ್ದಾರಜಿಗೆ ಬುದ್ಧಿವಾದ ಹೇಳದೆ ಅವರೂ ಕೂಡಾ ನನಗೆ ಆವಾಜ್ ಹಾಕಿ ಸರ್ದಾರಜಿ ಬೆಂಬಲಕ್ಕೆ ನಿಂತರು ಎಂದರು.
ಏ.28 ರಂದು ಮಹೇಶ್ವರಿ ಮಂಗಲ ಕಾರ್ಯಾಲಯದಲ್ಲಿ ನಡೆದ ಘಟನೆಗೆ ಸಂಬಂದಿಸಿದಂತೆ ತಕ್ಷಣ ಜಿಲ್ಲಾ ಪೆÇಲೀಸ್ ಅಧೀಕ್ಷಕರಿಗೆ ಲಿಖಿತ ದೂರು ಸಲ್ಲಿಸಿದ್ದೇನೆ, ಇಷ್ಟೇ ಅಲ್ಲದೆ ಈ ಎಲ್ಲ ಘಟನೆಗಳ ಬಗ್ಗೆ ಡಿಐಜಿ, ಗೃಹ ಸಚಿವರು ಹಾಗೂ ಮುಖ್ಯಮಂತ್ರಿಗಳ ಕಚೇರಿಗೆ ಬೆಂಗಳೂರಿಗೆ ತೆರಳಿ ಲಿಖಿತ ಮಾಹಿತಿ ನೀಡಿದ್ದೇನೆ ಎಂದರು.
ಜೈಲಿನಲ್ಲಿರುವ ಕೈದಿಗಳಿಗೆ ನಿಕಟ ಸಂಪರ್ಕ
ವಿಜುಗೌಡರ ಬಳಿ ನಾಲ್ಕೈದು ಜನ ಸರ್ದಾರ ಜೀ ಇದ್ದಾರೆ. ಅವರು ತಮ್ಮ ಬಳಿ ಶಸ್ತ್ತಾಸ್ತ್ರಗಳನ್ನು ಇರಿಸಿಕೊಂಡಿದ್ದಾರೆ, ಜೈಲಿನಲ್ಲಿರುವ ಕುಖ್ಯಾತ ಕ್ರಿಮಿನಲ್‍ಗಳ ಜೊತೆಗೂ ವಿಜುಗೌಡರಿಗೆ ನಂಟು ಇರುವ ಶಂಕೆಯೂ ಇದೆ, ವಿಜಯಪುರ ದರ್ಗಾ ಜೈಲಿನಲ್ಲಿರುವ ಕೈದಿಗಳಿಗೆ ಸಾರಾಯಿ, ಸಿಮ್ ಕಾರ್ಡ್, ಗಾಂಜಾ, ಊಟ ಪೂರೈಸುವ ನಿಟ್ಟಿನಲ್ಲಿಯೂ ವಿಜುಗೌಡರ ಪಾತ್ರವಿರಬಹುದು ಎಂದು ಸುನೀಲಗೌಡ ಪಾಟೀಲ ಆರೋಪಿಸಿದರು.
ಸರ್ದಾರ್ ಜೀ ಯಾರು, ಅವರನ್ನು ಕರೆ ತಂದವರು ಯಾರು? ಗನ್ ಮ್ಯಾನ್ ಇರಿಸಿಕೊಳ್ಳಲು ಅನುಮತಿ ಪಡೆದುಕೊಂಡಿದ್ದಾರೋ? ಆ ಸರ್ದಾರ್ ಜೀ ಟೆರರಿಸ್ಟ್ ಸಹ ಇದ್ದರೂ ಇರಬಹುದು, ಹೀಗಾಗಿ ಸಮಗ್ರ ತನಿಖೆಯಾಗಬೇಕು,? ಎಲ್ಲ ಬೆಳವಣಿಗೆಗಳಿಂದ ನನಗೆ ಜೀವ ಭಯ ಕಾಡುತ್ತಿದೆ. ಹೀಗಾಗಿ ಸೂಕ್ತ ರಕ್ಷಣೆ ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇನೆ ಎಂದರು.