ಚಿಣ್ಣರ ಬೇಸಿಗೆ ಶಿಬಿರದ ಪ್ರಾರಂಭೋತ್ಸವ
ವಿಜಯಪುರ,ಮೇ.3:ಇಲ್ಲಿನ ಅನೌಪಚಾರಿಕ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಗಾಂಧಿ ವೃತ್ತದಲ್ಲಿರುವ ಸಂತ ಅನ್ನಮ್ಮನವರ ದೇವಾಲಯ ಸಭಾಂಗಣದಲ್ಲಿ 10 ದಿನಗಳ ಚಿಣ್ಣರ ಬೇಸಿಗೆ ಶಿಬಿರ-2024ಕ್ಕೆ ಸಸಿಗೆ ನೀರು ಹಾಕುವುದರ ಮೂಲಕ ಚಾಲನೆ ನೀಡಲಾಯಿತು.
ಕಾರ್ಯಕ್ರಮದ ಪ್ರಾಸ್ತಾವಿಕವಾಗಿ ಮಾತನಾಡಿದ ಅನೌಪಚಾರಿಕ ಶಿಕ್ಷಣ ಸಂಸ್ಥೆಯ ನಿರ್ದೇಶಕÀ ಫಾದರ್À ಟಿಯೋಲ ಮಚಾದೊ ಅವರು ಹತ್ತು ದಿನದ ಶಿಬಿರದಲ್ಲಿ ಪಠ್ಯೇತರ ಚಟುವಟಿಕೆಗೆ ಆಧ್ಯತೆ ನೀಡಲಾಗುವುದು. ಶಿಬಿರದಲ್ಲಿ ಅನೇಕ ಹೊಸ ವಿಷಯಗಳನ್ನು ಕಲಿಸಲಾಗುವುದು. ಮಕ್ಕಳು ರಜೆಯ ದಿನಗಳನ್ನು ವ್ಯರ್ಥಮಾಡದೆ ಶಿಬಿರದಲ್ಲಿ ಭಾಗವಹಿಸಿರುವುದು ಕಂಡು ತುಂಬಾ ಖುಷಿಯಾಗಿದೆ. ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಇದ್ದಾಗ ಮಾತ್ರ ಸಾಧನೆಯನ್ನು ಮಾಡಲಿಕ್ಕೆ ಸಾಧ್ಯವಾಗುತ್ತದೆ. ಪ್ರತಿ ಮಗುವಿನಲ್ಲೂ ಒಂದಿಲ್ಲೊಂದು ಪ್ರತಿಭೆ ಇರುತ್ತದೆ. ಅದನ್ನು ಹೊರ ತರುವ ಪ್ರಯತ್ನವನ್ನು ಈ ಶಿಬಿರದಲ್ಲಿ ಮಾಡಲಾಗುತ್ತದೆ. ತಾವುಗಳು ಶಿಬಿರದಲ್ಲಿ ಸಕ್ರಿಯವಾಗಿ ಭಾಗವಹಿಸುವುದರ ಮೂಲಕ ಶಿಬಿರದ ಲಾಭವನ್ನು ಪಡೆಯಬೇಕು. ಜೊತೆಗೆ ಪರಸ್ಪರರನ್ನು
ದಾನಿಗಳಾದ ಐವನ್ ಅವರು ಮಾತನಾಡುತ್ತಾ, ಉತ್ತಮ ಕೆಲಸಗಳಿಗೆ ನಮ್ಮ ಬೆಂಬಲ ಸದಾ ಇರುತ್ತದೆ. ಇಲ್ಲಿ ಇಷ್ಟು ಮಕ್ಕಳನ್ನು ನೋಡಿ ತುಂಬಾ ಖುಷಿಯಾಗಿದೆ. ಶಿಬಿರ ಯಶಸ್ವಿಯಾಗಲೆಂದು ಹಾರೈಸಿದರು.
ಅದsÀ್ಯಕ್ಷತೆಯನ್ನು ವಹಿಸಿದ್ದ ಅನೌಪಚಾರಿಕ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಫಾದರ್ ಪ್ರಾನ್ಸಿಸ್ ಮೆನಿಜಿಸ್À ಅವರು ಮಾತನಾಡುತ್ತಾ, ಶಿಬಿರಗಳು ಮಕ್ಕಳಲ್ಲಿನ ಪ್ರತಿಭೆಯನ್ನು ಗುರುತಿಸಲು ಸಹಕಾರಿಯಾಗಿವೆ. ಮಕ್ಕಳು ಆಸಕ್ತಿವಹಿಸಿಕೊಂಡು ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಪ್ರತಿ ಚಟುವಟಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರ ಮೂಲಕ ಹೊಸ ನಾಯಕರಾಗಿ ಹೊರ ಹೊಮ್ಮಬೇಕೆಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ದಾನಿಗಳಾದ ಐವನ್ ಮತ್ತು ನಿರ್ಮಲಾ, ಸಿಸ್ಟರ್ ಡೆಸಿ, ಸಿಸ್ಟರ್ ಜಯಾ ಹಾಗೂ ವಿವಿಧ ಸ್ಲಂಗಳಿಂದ 120 ಮಕ್ಕಳು ಮತ್ತು ಅನೌಪಚಾರಿಕ ಶಿಕ್ಷಣ ಸಂಸ್ಥೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಮಹಾದೇವಿ ರಾಠೋಡ ಸ್ವಾಗತಿಸಿದರು. ಜಯಶ್ರೀ ಚಲವಾದಿ ನಿರೂಪಿಸಿದರು. ಸರೋಜಾ ಕಟ್ಟಿಮನಿ ವಂದಿಸಿದರು.