ಪಾತಾಳ ಗರಡಿ ಎಂಬ ವಿಶಿಷ್ಟ ಸಾಧನ
ಕಲಬುರಗಿ,ಮೇ.3: ಬಾವಿಗಳಲ್ಲಿ ಬಿದ್ದ ವಸ್ತುಗಳನ್ನು ಮೇಲಕ್ಕೆ ತೆಗೆಯಲು ಬಳಸುವ, ಕೊಂಡಿಗಳುಳ್ಳ ಒಂದು ಬಗೆಯ ಕಬ್ಬಿಣದ ಸಾಧನವೇ ಪಾತಾಳಗರಡಿ.
ಗ್ರಾಮೀಣ ಪ್ರದೇಶದಲ್ಲಿ ಬಾವಿಯಲ್ಲಿ ಬಿಂದಿಗೆ,ಕೊಡ, ಬಟ್ಟೆ, ಹಗ್ಗ, ಇನ್ನಿತರ ವಸ್ತುಗಳು ಬಿದ್ದಾಗ ಇದರ ಸಹಾಯದಿಂದಲೇ ತೆಗೆಯುತ್ತಿದ್ದರು ಇದನ್ನು ಬಾವಿಯ ನೀರಿನಲ್ಲಿ ಬಿಟ್ಟು ಅಲುಗಾಡಿಸಿದರೆ ಅದಕ್ಕಿರುವ ಕೊಂಡಿಗೆ ಬಿದ್ದ ವಸ್ತು ಸಿಕ್ಕು ಹಾಕಿಕೊಳ್ಳುವದು. ನಂತರ ಅದನ್ನು ಮೇಲೆತ್ತುತ್ತಿದ್ದರು.ಹಳ್ಳಿಯ ಕೆಲವೇ ಜನರ ಮನೆಗಳಲ್ಲಿ ಇಂತಹ ಸಾಧನ ಇರುತ್ತಿತ್ತು .ಇದರ ಅಗತ್ಯವಿದ್ದವರಿಗೆ ಉಚಿತವಾಗಿ ನೀಡುತ್ತಿದ್ದರು.
ಈಗ ಬೋರ್‍ವೆಲ್ ಯುಗ.ಈಗ ಹಳ್ಳಿಗಳಲ್ಲಿ ಬಾವಿಗಳು ಕಡಿಮೆ ಆಗುತ್ತಿವೆ.ಹಾಗಾಗಿ ಪಾತಾಳ ಗರಡಿ ಬಳಕೆ ಕಡಿಮೆಯಾಗಿದೆ.