ಜೆಜೆಎಂ ಯೋಜನೆ ಅಡಿಯಲ್ಲಿ ಭಾರಿ ಅವ್ಯವಹಾರ:ಆರೋಪ
ಶಿವಶರಣ ಚಾಂಗಲೇರಿ
ಹುಮನಾಬಾದ್:ಮೇ.3:ತಾಲೂಕಿನ ಕಲ್ಲೂರ ಗ್ರಾಮ ಪಂಚಾಯತ ವ್ಯಾಪ್ತಿಯ ಕಠಳ್ಳಿ ಗ್ರಾಮದಲ್ಲಿ ಕೈಗೊಳ್ಳುತ್ತಿರುವ ಜೆಜೆಎಂ ಯೋಜನೆಯ ಕಾಮಗಾರಿ ಸಂಪೂರ್ಣ ಕಳೆಪೆಯಿಂದ ಕೂಡಿದ್ದು ಇದರಲ್ಲಿ ಭಾರಿ ಅವ್ಯವಹಾರ ಮಾಡಲಾಗಿದೆ ಎಂದು ಆರೋಪಗಳು ಕೇಳಿ ಬರುತ್ತಿವೆ.
ಜನರ ಅನುಕೂಲಕ್ಕಾಗಿ ಕಠಳ್ಳಿ ಲಕ್ಷಾಂತರ ರೂಪಾಯಿ ಅನುದಾನ ವೆಚ್ಚ ಮಾಡಿದರು ಕೂಡಾ ಯೋಜನೆಯ ನಿಯಮದಂತೆ ಕಾಮಗಾರಿ ಕೈಗೊಳ್ಳದೇ, ಬೇಜವ್ದಾರಿಯಿಂದ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದಾರೆ. ಗ್ರಾಮದ ಪ್ರಮುಖ ರಸ್ತೆಗಳಲ್ಲಿ ತಗ್ಗು ಗುಂಡಿಗಳು ಬಿದ್ದಿದ್ದು, ಸಾರ್ವಜನಿಕರು ಹಾಗೂ ದ್ವಿಚಕ್ರ ಸವಾರರು ಓಡಾಡುವುದಕ್ಕೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಗ್ರಾಮದ ಜನರ ಮನೆಗಳಿಗೆ ನೀರು ಸರಬರಾಜು ಮಾಡುವ ನಿಟ್ಟಿನಲ್ಲಿ ಅನೇಕ ವರ್ಷಗಳ ಹಿಂದೆ ಬೃಹತ್ ಟ್ಯಾಂಕ್ ನಿರ್ಮಾಣ ಮಾಡಲಾಗಿದೆ. ಆದರೆ ಇತ್ತಿಚೆಗೆ ಕೆಲ ತಿಂಗಳ ಹಿಂದೆ ನೀರಿನ ಟ್ಯಾಂಕ್ ಬಣ್ಣ ಬಳೆದು 2022-23ನೇ ಸಾಲಿನಲ್ಲಿ ನಿರ್ಮಿಸಲಾಗಿದೆ ಎಂದು ನಾಮ ಫಲಕ ಹಾಕಲಾಗಿದೆ. ಈ ಯೋಜನೆ ಅಡಿಯಲ್ಲಿ ಅಧಿಕಾರಿಗಳು ಹಾಗೂ ಗುತ್ತಿಗೆದಾರು ಅವ್ಯವಹಾರ ಮಾಡಿದ್ದಾರೆ ಎಂದು ಸ್ಥಳೀಯರು ಗಂಭಿರ ಆರೋಪ ಮಾಡುತ್ತಿದ್ದಾರೆ.
ಗ್ರಾಮದಲ್ಲಿ ನಡೆಯುತ್ತಿರುವ ಕಾಮಗಾರಿ ಸ್ಥಳದಲ್ಲಿ ಗ್ರಾಮಸ್ಥರು ಗುರುವಾರ ಮಧ್ಯಾನ ವಿರೋಧ ವ್ಯಕ್ತಪಡಿಸುತ್ತಿರುವ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದರು. ಸಂದರ್ಭದಲ್ಲಿ ಗ್ರಾಮಸ್ಥರು ಕೇಳಿದ ಬಹುತೇಕ ಪ್ರಶ್ನೆಗಳಿಗೆ ಉತ್ತರ ನೀಡದೇ ಎಲ್ಲವು ಸರಿ ಪಡಿಸುವುದಾಗಿ ತಾಲೂಕ ಕಚೇರಿಗೆ ಹಿಂದಿರುಗಿ ಹೋಗಿದ್ದಾರೆ ಎನ್ನುವುದು ಇಲ್ಲಿನ ಜನರ ದೂರಾಗಿದೆ.
ಈ ಯೋಜನೆಯ ಕುರಿತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು ಶೀಘ್ರವಾಗಿ ಸಂಪೂರ್ಣ ಮಾಹಿತಿ ನೀಡಬೇಕು. ಮಾಹಿತಿ ನೀಡುವಲ್ಲಿ ಅಧಿಕಾರಿಗಳು ವಿಳಂಬ ನೀತಿ ಅನುಸರಣೆ ಮಾಡಿದರೆ ಹುಮನಾಬಾದ್ ಪಟ್ಟಣದಲ್ಲಿ ತಾಲೂಕ ಮಟ್ಟದ ಹೋರಾಟ ಮಾಡಬೇಕಾಗುತ್ತದೆ ಎಂದು
ಕಠಳ್ಳಿ ಗ್ರಾಮದಲ್ಲಿ ನಡೆಯುವ ಜೆಜೆಎಂ ಕಾಮಗಾರಿ ಕುರಿತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು ಯಾವುದೇ ಮಾಹಿತಿ ತಿಳಿಸಿಲ್ಲ. ಹೀಗಾಗಿ ಇದರ ಕುರಿತು ಕಾಮಗಾರಿ ಕೈಗೊಳ್ಳುತ್ತಿರುವ ಗುತ್ತಿಗೆದಾರ ಹಾಗೂ ಸಂಬಂದಪಟ್ಟ ಇಲಾಖೆ ಅಧಿಕಾರಿಗಳಿಗೆ ಸಂಪರ್ಕಿಸುವ ಮೂಲಕ ಮಾಹಿತಿ ಪಡೆದುಕೊಳ್ಳಿ.
ಮಧವರಾವ ದೇಶಪಾಂಡೆ
ಕಠಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ಜೆಜೆಎಂ ಯೋಜನೆ ಕಾಮಗಾರಿ ಕುರಿತು ಮಾಹಿತಿ ಅಧಿಕಾರಿಗಳು ಸ್ಪಷ್ಟ ಉತ್ತರ ನೀಡುತ್ತಿಲ್ಲ. ಇವರು ಹೀಗೆ ಹಾರೈಕೆ ಉತ್ತರ ನಿಡುತ್ತಿದ್ದರೆ ಮೇಲ್ನೋಟಕ್ಕೆ ಅನುಮಾನ ಕಂಡು ಬರುತ್ತಿವೆ.
ಚನ್ನರಡ್ಡಿ
ಕಠಳ್ಳಿ ಗ್ರಾಮದಲ್ಲಿ ಹಳೆಯ ಟ್ಯಾಂಕ್ ದುರಸ್ತಿ ಕಾರ್ಯ ಕೈಗೊಳ್ಳಲಾಗಿದೆ. ಬಣ್ಣ ಬಳೆಯುವ ಸಂದರ್ಭದಲ್ಲಿ ನೀರಿನ ಟ್ಯಾಂಕ್ ಮೇಲೆ ಅಳವಡಿಸಿಲಾದ ನಾಮ ಫಲಕದಲ್ಲಿ ಅನುದಾನ ಹಾಗೂ ಕಾಮಗಾರಿ ತಪ್ಪಗಿ ಬರೆಯಲಾಗಿದೆ. ಈ ತಪ್ಪನ್ನು ಸುಧಾರಿಸಿಕೊಂಡು ಹೊಸ ನಾಮಫಲಕ ಅಳವಡಿಸಲಾಗುವುದು.
ದತ್ತಾತ್ರೆ
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿ