ಮಡಿವಾಳೇಶ್ವರ ಮಠದ ಸ್ವಾಮೀಜಿ ನೇಣಿಗೆ ಶರಣು
ತಾಳಿಕೋಟೆ:ಮೇ.3: ತಾಲೂಕಿನ ತುಂಬಗಿ-ಸಾಸನೂರ ಶ್ರೀ ಮಡಿವಾಳೇಶ್ವರ ಹಿರೇಮಠದ ಶ್ರೀ ಶಂಕರಲಿಂಗ ದೇವರು(23) ಇವರು ಗುರುವಾರರಂದು ಬೆಳಿಗ್ಗೆ 8 ಗಂಟೆಯ ಸುಮಾರಿಗೆ ಸಾಸನೂರ ಮಠದ ಕೋಣೆಯಲ್ಲಿ ನೇಣು ಬೀಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸಾಸನೂರ-ತುಂಬಗಿ ಶ್ರೀ ಮಡಿವಾಳೇಶ್ವರ ಹಿರೇಮಠದ ಶ್ರೀ ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀಮಠದ ಉತ್ತರಾಧಿಕಾರಿಯನ್ನಾಗಿ ನೇಮಿಸುವ ಸಲುವಾಗಿ ಮರಿದೇವರನ್ನಾಗಿ ಶ್ರೀ ಶಂಕರಲಿಂಗ ದೇವರನ್ನು ನೇಮಕ ಮಾಡಿಕೊಂಡಿದ್ದರು.
ಆತ್ಮಹತ್ಯೆ ಮಾಡಿಕೊಂಡಿರುವ ಶ್ರೀ ಶಂಕರಲಿಂಗ ದೇವರು ಕಳೆದ 4 ತಿಂಗಳ ಹಿಂದೆ ಹುಣಶ್ಯಾಳ ಹತ್ತಿರ ಕಾರು ಅಪಘಾತದಲ್ಲಿ ಕಿಡ್ನಿಗೆ ಪಟ್ಟು ಬಿದ್ದಿದ್ದರಿಂದ ವಿಜಯಪುರದ ಶ್ರೀ ಭಾಗ್ಯವಂತಿ ಆಸ್ಪತ್ರೆಯಲ್ಲಿ ಕಿಡ್ನಿಗೆ ಕಿಟ್ ಹಾಕಿಸಿಕೊಂಡು ಬಂದು ಶ್ರೀಮಠದ ವತಿಯಿಂದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾ ಸಾಗಿದ್ದರು ಇತ್ತೀಚಗೆ ಕಳೆದ 15 ದಿನಗಳ ಹಿಂದೆ ಸದರಿ ಹಾಕಿಸಿಕೊಂಡ ಕಿಟ್‍ನಿಂದ ತ್ರಾಸ್ ಆಗುತ್ತಿದೆ ಎಂದು ಅದೇ ಆಸ್ಪತ್ರೆಗೆ ತೆರಳಿ ತೆಗೆಸಿಕೊಂಡು ಬಂದಿದ್ದರು. ಆದರೂ ಕೂಡಾ ಕಿಡ್ನಿ ನೋವು ಕೆಲವು ಸಮಯಕಾಲ ಕಾಣಿಸಿಕೊಳ್ಳುತ್ತಿತ್ತು ಎನ್ನಲಾಗಿದ್ದು ಈ ಕುರಿತು ಶ್ರೀಮಠದ ಹಿರಿಯ ಶ್ರೀಗಳಾದ ಶ್ರೀ ಮಹಾಂತಲಿಂಗ ಶಿವಾಚಾರ್ಯರು ಮತ್ತೇ ಆಸ್ಪತ್ರೆಗೆ ಹೋಗಿ ಬರಲು ಸಜ್ಜಾದಾಗ ಕಡಿಮೆಯಾಗುತ್ತದೆ ಒಂದು ವಾರ ನೋಡೋಣವೆಂದು ಹೇಳಿದ್ದರಿಂದ ಆಸ್ಪತ್ರೆಗೆ ಹೋಗಿದಿಲ್ಲಾ ಇಂದು ಬೆಳಿಗ್ಗೆ 6 ಗಂಟೆಯಿಂದ 8 ಗಂಟೆಯವರೆಗೆ ಸಾಸನೂರ ಮಠದಲ್ಲಿ ಭಕ್ತರಿಗೆ ಬೆಟ್ಟಿಯಾಗಿದ್ದಾರೆ ನಂತರ ಶ್ರೀಮಠದ ಕೋಣೆಯೊಳಗೆ ಹೋದವರು ಶ್ರೀಮಠಕ್ಕೆ ಸಾಕಷ್ಟು ಭಕ್ತರು ಬಂದರೂ ಕೂಡಾ ಹೊರಗಡೆ ಬರದ್ದರಿಂದ 9-30 ಗಂಟೆಯ ಸುಮಾರಿಗೆ ಬಕ್ತರೇ ಹೋಗಿ ಕೋಣೆಯ ಕಿಡಕಿಯಲ್ಲಿ ನೋಡಿದಾಗ ಪ್ಯಾನಿಗೆ ಶೆಲ್ಲೆಯಿಂದ ನೇಣು ಹಾಕಿಕೊಂಡಿರುವದು ಬೆಳಕಿಗೆ ಬಂದಿದೆ. ನಂತರು ಭಕ್ತರು ಬಾಗಿಲು ಮುರಿದು ಶ್ರೀಗಳ ಪಾರ್ಥಿವ ಶರೀರ ಹೊರಗಡೆ ತಂದು ತುಂಬಗಿ ಗ್ರಾಮದಲ್ಲಿ ಮಠದಲ್ಲಿದ್ದ ಹಿರಿಯ ಶ್ರೀಗಳಿಗೆ ದೂರವಾಣಿಯ ಮೂಲಕ ತಿಳಿಸಿ ವೈಧ್ಯರಿಂದ ತಪಾಸಣೆ ನಡೆಸಿದಾಗ ಮೃತಪಟ್ಟಿರುವದು ದೃಢ ಪಟ್ಟಿದೆ.
ಈಗಾಗಲೇ ಸಾಸನೂರ-ತುಂಬಗಿ ಮಠಕ್ಕೆ ಆತ್ಮಹತ್ಯೆಗೆ ಶರಣಾಗಿರುವ ಶ್ರೀ ಶಂಕರಲಿಂಗ ದೇವರನ್ನು ಉತ್ತರಾಧಿಕಾರಿಯನ್ನಾಗಿ ಮಾಡಲು ಮತ್ತು ಶ್ರೀ ಮಠದಲ್ಲಿ 63 ಶರಣರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಅಕ್ಟೋಬರ್ ತಿಂಗಳಲ್ಲಿ ಆಯೋಜಿಸಲು ಎಲ್ಲ ರೀತಿಯ ತಯಾರಿ ಮಾಡಿಕೊಳ್ಳುವ ಕಾರ್ಯ ನಡೆದಿತ್ತು ಆದರೆ ಶ್ರೀಮಠಕ್ಕೆ ದೇವರನ್ನಾಗಿ ನೇಮಿಸಿಕೊಂಡಿದ್ದ ಶ್ರೀ ಶಂಕರಲಿಂಗ ದೇವರು ನೇಣಿಗೆ ಶರಣಾಗಿರುವದು ದೊಡ್ಡ ಅಘಾತವನ್ನುಂಟು ಮಾಡಿದೆ ಎಂದು ಶ್ರೀಮಠದ ಶ್ರೀ ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಪತ್ರಿಕೆಗೆ ತಿಳಿಸಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ಶ್ರೀ ಶಂಕರಲಿಂಗ ದೇವರು ಶ್ರೀಮಠದ ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ತಮ್ಮನಾದ ದಿ.ಚಿದಾನಂದ ಅವರ ಎರಡನೇ ಮಗನಾಗಿದ್ದು 2 ಜನ ಸಹೋದರನ್ನೋಳಗೊಂಡು ಓರ್ವ ಸಹೋದರಿ ಇದ್ದಾರೆ.
ಶ್ರೀ ಶಂಕರಲಿಂಗ ದೇವರು ಅಗಲಿಕೆಯ ಸುದ್ದಿ ಅರೀತ ದೇವರ ಹಿಪ್ಪರಗಿ ಮತಕ್ಷೇತ್ರದ ಶಾಸಕ ರಾಜುಗೌಡ ಪಾಟೀಲ(ಕು.ಸಾಲವಾಡಗಿ), ಮಾಜಿ ಶಾಸಕ ಸೋಮನಗೌಡ ಪಾಟೀಲ(ಸಾಸನೂರ), ಡಾ.ಪ್ರಭುಗೌಡ ಲಿಂಗದಳ್ಳಿ, ಆನಂದ ದೊಡಮನಿ, ಒಳಗೊಂಡು ಅನೇಕ ರಾಜಕೀಯ ಮುಖಂಡರುಗಳು, ತಾಳಿಕೋಟೆ, ಸಿಂದಗಿ, ದೇವರಹಿಪ್ಪರಗಿ, ಬ.ಬಾಗೇವಾಡಿ, ಮುದ್ದೇಬಿಹಾಳ, ತಾಲೂಕಿನ ವಿವಿಧ ಮಠಗಳ ಮಠಾಧೀಶರು, ಸಾವಿರಾರು ಭಕ್ತ ವೃಂದದವರು ಶ್ರೀಮಠಕ್ಕೆ ಆಗಮಿಸಿದ ಶ್ರೀಗಳ ಅಂತಿಮದರ್ಶನ ಪಡೆದುಕೊಂಡರು.
ಸಾಯಂಕಾಲ 6 ಗಂಟೆಗೆ ಸಾಸನೂರಿನ ಶ್ರೀಮಡಿವಾಳೇಶ್ವರ ಮಠದಲ್ಲಿಯೇ ಶ್ರೀ ಶಂಕರಲಿಂಗ ದೆವರ ಅಂತ್ಯಸಂಸ್ಕಾರವನ್ನು ನೇರವೇರಿಸಲಾಯಿತು.
ಶ್ರೀ ಶಂಕರಲಿಂಗ ದೇವರ ಆತ್ಮಹತ್ಯೆಗೆ ಸಂಬಂದಿಸಿ ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲಾ.