ಕೆಲಸಕ್ಕೆ ಕಾಯಕ ಹೆಸರಿಟ್ಟ ಮಾನವತಾವಾದಿ ಬಸವಣ್ಣ: ಡಾ. ಸಂಗಮೇಶ ಮೇತ್ರಿ
ವಿಜಯಪುರ,ಮೇ.3 :ವಿಶ್ವಗುರು ಬಸವಣ್ಣನವರು ದುಡಿಯುವ ಕೈಗಳಿಗೆ ಮೌಲ್ಯ ನೀಡಿದರು. ಕೆಲಸಕ್ಕೆ ಕಾಯಕ ಎಂದು ಕರೆದು ಕಾರ್ಮಿಕರಿಗೆ ಗೌರವ ತಂದುಕೊಟ್ಟ ಮಹಾ ಮಾನವತಾವಾದಿ ಬಸವಣ್ಣನವರು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷ ಡಾ. ಸಂಗಮೇಶ ಮೇತ್ರಿ ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲಾ, ತಾಲೂಕ, ನಗರ ಘಟಕ ಕನ್ನಡ ಸಾಹಿತ್ಯ ಪರಿಷತ್ತಿನ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ವಿಶ್ವ ಕಾಯಕ ದಿನಾಚರಣೆಯಲ್ಲಿ ಮಾತನಾಡಿ, ಕಾಯಕವೇ ಕೈಲಾಸ ಘೋಷಣೆಯನ್ನು ಹನ್ನೆರಡನೆಯ ಶತಮಾನದಲ್ಲಿ ವಚನಕಾರರು ಸಮಾಜಕ್ಕೆ ಕಾಯಕ ಮಹತ್ವ ತಿಳಿಸಿದ್ದಾರೆ. ಜೀವನದುದ್ದಕ್ಕೂ ತನ್ನ ಕುಟುಂಬದ ಬೆನ್ನಲಬಾಗಿ ದೇಶದ ಆರ್ಥಿಕತೆಗೆ ಭದ್ರ ಬುನಾದಿ ಹಾಡಿದ್ದಾರೆ ಎಂದರು.
ಕಸಾಪ ಗೌರವ ಕಾರ್ಯದರ್ಶಿ ಡಾ. ಮಾಧವ ಗುಡಿ ಮಾತನಾಡಿ, ಈ ದೇಶದ ಶಕ್ತಿ ಕಾರ್ಮಿಕರು. ಯಾವ ಕಾಯಕವೂ ಚಿಕ್ಕದಲ್ಲ, ಕಾರ್ಮಿಕರು ಬೆವರ ಹನಿ ಸುರಿಸಿ ಬದುಕನ್ನು ಕಟ್ಟಿಕೊಂಡವರು. ವಿಶ್ವದಾದ್ಯಂತ ಕಾರ್ಮಿಕರ ದಿನಾಚರಣೆ ಆಚರಿಸಿ ಗೌರವ ಸಲ್ಲಿಸುತ್ತಿದ್ದಾರೆ. ಕಾರ್ಮಿಕರ ಬದುಕು ಹೋರಾಟದ ಬದುಕಾಗಿದೆ, ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ, ಸರಕಾರಗಳು ಕಾರ್ಮಿಕರಿಗೆ ನಾಗರಿಕ ಸೌಲಭ್ಯಗಳನ್ನು ನೀಡುವಲ್ಲಿ ವಿಫಲವಾಗಿವೆ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಚÀ ಹಾಸಿಂಪೀರ ವಾಲೀಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಮೇಲೆ ಅಲ್ಲಿಸಾಬ ಖಡಕೆ, ಹನಮಂತ ಕುರಿ, ದಾದಾಪೀರ ತಾಳಿಕೋಟಿ, ಸುಖದೇವ ಯಕ್ಕುಂಡಿ, ಯುವರಾಜ ಚೊಳಕೆ ಉಪಸ್ಥಿತರಿದ್ದರು.
ಶೋಭಾ ಬಡಿಗೇರ, ಜಿ.ಎಸ್. ಬಳ್ಳೂರ, ಲತಾ ಗುಂಡಿ, ಗಂಗಮ್ಮ ರಡ್ಡಿ, ಶಾಂತಾ ವಿಭೂತಿ, ರಾಜು ಅಂಗಡಿ, ಶಶಿಕಲಾ ನಾಯ್ಕೋಡಿ, ಅಪ್ಪು ಇಂಡಿ, ಪ್ರಭು ಅಳ್ಳಗಿ ಅರ್ಜುನ ಶಿರೂರ, ಶಿವಣ್ಣ ಹದಿಮೂರ, ರಾಜಶೇಖರ ಕುಂಬಾರ, ಸಾಯಬಣ್ಣ ಮಾದರ, ಅಣ್ಣುಗೌಡ ಬಿರಾದಾರ, ಸಾವಿತ್ರಿ ತಳವಾರ, ಅಸ್ಲಂ ಮುಲ್ಲಾ, ಸುಖದೇವಿ ಅಲಬಾಳಮಠ, ಸುನಂದಾ ಶಿಗೀಹಳ್ಳಿ ಮುಂತಾದವರು ಉಪಸ್ಥಿತರಿದ್ದರು.