ಕೇರಿಂಗ್ ಸೋಲ್ಸ್ ಸಂಸ್ಥೆ ವತಿಯಿಂದ ಜಿಲ್ಲಾಸ್ಪತ್ರೆಯಲ್ಲಿ ವಿಶ್ವ ಕಾರ್ಮಿಕ ದಿನಾಚರಣೆ
ವಿಜಯಪುರ,ಮೇ.3:ಕೇರಿಂಗ್ ಸೋಲ್ಸ್ ಸಂಸ್ಥೆ ವತಿಯಿಂದ ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ವಿಶ್ವ ಕಾರ್ಮಿಕ ದಿನಾಚರಣೆಯನ್ನು ಆಚರಿಸಲಾಯಿತು.
ಸ್ಥಳೀಯ ಸಂಸ್ಥೆ ಕೇರಿಂಗ್ ಸೋಲ್ಸ್ ಇಂಡಿಯಾ ಚಾರಿಟೇಬಲ್ ಟ್ರಸ್ಟ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾSÀ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಕಾರ್ಮಿಕ ದಿನಾಚರಣೆಯಲ್ಲಿ ಗ್ರೂಪ್ ಸಿ ಹಾಗೂ ಗ್ರೂಪ್ ಡಿ ಸಿಬ್ಬಂದಿಗಳಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಡಾ. ಅಫಾಕ ಅಹ್ಮದ ಮಾತನಾಡಿ, ಎಲ್ಲಾ ಕಡೆ ಸ್ವಚ್ಛತೆ, ಸುರಕ್ಷೆ, ಸುತ್ತಮುತ್ತಲಿನ ಪರಿಸರವನ್ನು ದಣಿವರಿಯದೆ ನಿರ್ವಹಿಸುವವರು ಈ ಗ್ರೂಪ್ ಸಿ ಹಾಗೂ ಗ್ರೂಪ್ ಡಿ ಸಿಬ್ಬಂದಿಗಳು ಎಂದು ಹೊಗಳಿದರು.
ಇದೇ ಸಂದರ್ಭದಲ್ಲಿ ಅತಿಥಿಗಳಾಗಿ ಭಾಗವಹಿಸಿದ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಶಿವಾನಂದ ಮಸ್ತಿಹಾಳ ಮಾತನಾಡಿ, ಗ್ರೂಪ್ ಡಿ ಸಿಬ್ಬಂದಿ ಇಲ್ಲದೇ ಆಸ್ಪತ್ರೆ ನಡೆಸಲು ಸಾಧ್ಯವಿಲ್ಲ. ಅವರ ಕಾರ್ಯ ಮತ್ತು ಕಾಳಜಿಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.
ಶೂಶ್ರೂಷಕರು, ತಂತ್ರಜ್ಞರು, ಆಡಳಿತ ಸಿಬ್ಬಂದಿ ಮತ್ತು ಇತರ ನುರಿತ ಕೆಲಸಗಾರರನ್ನು ಒಳಗೊಂಡಿರುವ ಸಹಾನುಭೂತಿಯ ಗ್ರೂಪ್ ಸಿ ನೌಕರರು ರೋಗಿಗಳ ಆರೈಕೆಯನ್ನು, ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತಾರೆ. ನಾಗರಿಕರಿಗೆ ಗುಣಮಟ್ಟದ ಸೌಲಭ್ಯಗಳನ್ನು ತಲುಪಿಸುವಲ್ಲಿ ಅವರ ಸಮರ್ಪಣೆ ಮತ್ತು ಪರಿಣಿತಿ ಅತ್ಯಗತ್ಯ ಎಂದರು.
ಇದೇ ವೇಳೆ ಕೆಎಂಡಿಸಿ ಜಿಲ್ಲಾ ನಿರ್ವಾಹಕ ಎಮ್. ಎ. ಶೇಖ ಹಾಗೂ ಬಿಸಿಎಂ ಇಲಾಖೆಯ ಅಧೀಕ್ಷಕ ವಿಜಯಕುಮಾರ ಮುದ್ದೇಬಿಹಾಳ ಹೇಳಿದರು. ಕೇರಿಂಗ್ ಸೋಲ್ಸ್ ಸಂಸ್ಥೆಯ ಅಧ್ಯಕ್ಷ ಆಸಿಫ್ ದೊಡ್ಡಮನಿ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನೆರವೇರಿತು.
ಕೇರಿಂಗ್ ಸೋಲ್ಸ್ ಉಪಾಧ್ಯಕ್ಷÀ ಎಂ. ಎಂ. ದೊಡ್ಡಮನಿ, ಸದಸ್ಯರಾದ ಬಂದೇನವಾಜ ಲೋಣಿ, ವಿನಾಯಕ ಕುಮಟೆ, ನಿಯಾಜ ಬಾಗವಾನ, ಶಫಿಯುಲ್ಲಾ ಸಂಗಾಪೂರ, ಅಸ್ಲಂ ಕರಜಗಿ, ರೋಹಿತ ಗುತ್ತಿಕೊಂಡ, ಜುನೇದ ಇನಾಮದಾರ, ಹಜರತ ಬಿಲಾಲ, ಸಮೀರ ಸಿಪಾಯಿ, ಇರ್ಫಾನ ಸಾರವಾಡ, ಅಹ್ತೆಶಾಮ, ಉಮೇರ ಸೌದಾಗರ, ಮುಬಶ್ಶಿರ್ ಮಹಾಬರಿ ಹಾಗೂ ಮುಂತಾದ ಸಿಬ್ಬಂದಿಗಳು ಉಪಸ್ಥಿತರಿದ್ದರು.