`ಕ್ಷಮಾವಳಿಯಿಂದ ಜೀವನ ವಿಧಾನದಲ್ಲಿ ಸಾಮರಸ್ಯ’
ಅಮ್ಮಿನಭಾವಿ,ಸೆ22: ಜೈನ ಧರ್ಮ ಸಿದ್ಧಾಂತದ ಆಚರಣೆಗಳಲ್ಲಿ ಒಂದಾದ ದಶಲಕ್ಷಣ ಪರ್ವದ 10 ದಿನಗಳ ಅನುಷ್ಠಾನ ಮತ್ತು ಧರ್ಮ ಚಿಂತನೆಯ ಕೊನೆಯ ಘಟ್ಟವಾಗಿ ಆಚರಿಸುವ ಕ್ಷಮಾವಳಿಯಿಂದ ಮನುಕುಲದ ಬಿರುಕುಗೊಂಡ ಸಂಬಂಧಗಳು ಬೆಸೆದು ಜೀವನ ವಿಧಾನದಲ್ಲಿ ಸಾಮರಸ್ಯ ಅಂಕುರಿಸುತ್ತದೆ ಎಂದು ಅಮ್ಮಿನಬಾವಿ-ವರೂರು ಜೈನಮಠಗಳ ಯತಿಗಳಾದ ಸ್ವಸ್ತಿಶ್ರೀ ಧರ್ಮಸೇನ ಭಟ್ಟಾರಕ ಸ್ವಾಮೀಜಿ ನುಡಿದರು.
ಸನ್ಮಾನ : ಪಮ್ಮಣ್ಣ ಧಾರವಾಡ, ಮಹಾವೀರ ಅಣ್ಣಿಗೇರಿ, ವಿದ್ಯಾರ್ಥಿಗಳಾದ ಅನುಷಾ ಕಿತ್ತೂರ ಹಾಗೂ ಸಮ್ಯಕ್ತಾ ಅಣ್ಣಿಗೇರಿ, ನಿತ್ಯವೂ ಪ್ರಸಾದ ಸಿದ್ಧಪಡಿಸಿದ ಸದಾನಂದ ಪಾಟೀಲ ಅವರನ್ನು ಸನ್ಮಾನಿಸಲಾಯಿತು. ನೇಮಿನಾಥ ದಿಗಂಬರ ಜೈನ್ ಟ್ರಸ್ಟ್ ಅಧ್ಯಕ್ಷ ಟಿ.ಎಂ. ದೇಸಾಯಿ, ತ್ರಿಶಲಾಮಾತಾ ಮಹಿಳಾ ಮಂಡಳದ ಅಧ್ಯಕ್ಷೆ ಶಶಿಕಲಾ ದೇಸಾಯಿ, ಭೀಮಶಿ ಜಗಾಪೂರ, ಸಮ್ಮೇದ್ ಲೋಕೂರ, ಮಂಜುನಾಥ ಗುಡ್ಡದಮನಿ, ಬಾಳು ಧಾರವಾಡ, ಪ್ರಸನ್ನ ದೇಸಾಯಿ, ಭರತೇಶ ದೇಸಾಯಿ, ತವನಪ್ಪ ಲೋಕೂರ ನೇಮಿಚಂದ್ರ ನವಲೂರ ಇದ್ದರು.