ಕೆ.ಎಸ್.ಆರ್.ಟಿ.ಸಿ ಕಾರ್ಮಿಕರ ಪತ್ತಿನ ಸಹಕಾರ ಸಂಘದ ಉತ್ತಮ ಲಾಭ ಅಧ್ಯಕ್ಷ ಜಿ.ಎನ್.ಲೋಕೇಶ್
ಸಂಜೆವಾಣಿ ವಾರ್ತೆ
ಕೆ.ಆರ್.ನಗರ, ಸೆ.22:– ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕಾರ್ಮಿಕರ ಪತ್ತಿನ ಸಹಕಾರ ಸಂಘ ಪ್ರಸಕ್ತ ಸಾಲಿನಲ್ಲಿ 22ಲಕ್ಷ ರೂ. ಗಳ ಲಾಭಗಳಿಸಿದ್ದು, ಆಡಳಿತ ಮಂಡಳಿಯ ಸರ್ವ ಸದಸ್ಯರ ಸಹಕಾರದಿಂದ ಮುಂದಿನ ದಿನಗಳಲ್ಲಿ ಮತ್ತಷ್ಟು ಲಾಭ ದೊಂದಿಗೆ ಸದಸ್ಯರಿಗೆ ಸಾಲ-ಸೌಲಭ್ಯ ಕಲ್ಪಿಸುವ ಮೂಲಕ ಅವರ ನೆರವಿಗೆ ಧಾವಿಸಲಿದೆ ಎಂದು ಸಂಘದ ಅಧ್ಯಕ್ಷ ಜಿ.ಎನ್.ಲೋಕೇಶ್ ಸ್ಪಷ್ಟ ಪಡಿಸಿದರು.
ಪಟ್ಟಣದ ಬಸವೇಶ್ವರ ಬಡಾವಣೆಯ ಗಿರಿಜಮ್ಮ ಬಳೆ ಬಸವರಾಜಪ್ಪ ಧರ್ಮಶಾಲೆ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕಾರ್ಮಿಕರ ಪತ್ತಿನ ಸಹಕಾರ ಸಂಘದ 2023-24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಲೆಕ್ಕ ಪತ್ರ ಮಂಡಿಸಿ ಮಾತನಾಡಿದ ಅಧ್ಯಕ್ಷರು ಸಂಘದಲ್ಲಿ 1500 ಸದಸ್ಯರಿಂದ 1.01ಕೋಟಿ ರೂಪಾಯಿಗಳ ಷೇರು ಬಂಡವಾಳದ ಜೊತೆಗೆ ಆರ್.ಡಿ. ಫಂಡಿಂಗ್ ಸುಮಾರು 4 ಮುಕ್ಕಾಲು ಕೋಟಿ ಹಣ ಸಂಘವು ಹೊಂದಲಾಗಿದೆ ಎಂದು ವಿವರಿಸಿದರು.
ಮುಂದಿನ ದಿನಗಳಲ್ಲಿ ಸದಸ್ಯರಿಗೆ ಹೆಚ್ಚಿನ ಸಾಲ ನೀಡುವುದರ ಜತೆಗೆ ಠೇವಣಿ ಸಂಗ್ರಹಿಸಿ ಉತ್ತಮ ಲಾಭಗಳಿಸಲು ಆಡಳಿತ ಮಂಡಳಿಯಲ್ಲಿ ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದರು.
ಈಗಾಗಲೇ ಸಂಘದ ಕಚೇರಿಯಲ್ಲಿ ಈ ಸ್ವಾಪಿಂಗ್ ಸೌಲಭ್ಯವಿದ್ದು ಸದಸ್ಯರು ಹಾಗೂ ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಿ ಎಂದರಲ್ಲದೇ ಮರಣನಿಧಿ ಯೋಜನೆಯನ್ನು ಸದಸ್ಯರ ಹಾಗೂ ಅವರ ಕುಟುಂಬಗಳಿಗೆ ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ನೆರವಾಗುವ ದೃಷ್ಟಿ ಯಿಂದ ಸದಸ್ಯರು ಮರಣ ಹೊಂದಿದಲ್ಲಿ ಅವರ ಕುಟುಂಬದ ನಾಮಿನಿಗೆ 1ಲಕ್ಷ ರೂಪಾಯಿಗಳನ್ನು ನೀಡಲಾಗುವುದು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಸಂಘದ ಸದಸ್ಯರುಗಳ ಎಸ್‍ಎಸ್‍ಎಲ್‍ಸಿ, ದ್ವಿತೀಯ ಪಿಯುಸಿ ಹಾಗೂ ಪದವಿ ಪರೀಕ್ಷೆಯಲ್ಲಿ ಶೇ85ಕ್ಕಿಂತ ಹೆಚ್ಚು ಅಂಕಗಳಿಸಿದ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಹಾಗೂ ಸಾರಿಗೆ ಸಂಸ್ಥೆ ಯಲ್ಲಿ ಸುಧೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಸದಸ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕಾರ್ಮಿಕರ ಪತ್ತಿನ ಸಹಕಾರ ಸಂಘದ ಬೈಲ ಪ್ರಕಾರ ಸುಸ್ತಿದಾರರಿಗೆ ಸಭೆಗೆ ಅವಕಾಶ ವಿರುವುದಿಲ್ಲ ಆದರೆ 4 ಮಂದಿ ಕೆ.ವಿ.ನಂದೀಶ್, ಪುನೀತ್‍ಕುಮಾರ್, ಜಲೇಂದ್ರ ಮತ್ತು ಮಂಜುನಾಥ್ ಸುಸ್ತಿದಾರರಾಗಿದ್ದು ಜೊತೆಗೆ ಸಂಘದ ಸದಸ್ಯರಲ್ಲದವರು ಸಭೆಗೆ ಬಂದು ಇಲ್ಲಸಲ್ಲದ ಆರೋಪ ಗೈದು ವಾರ್ಷಿಕ ಮಹಾಸಭೆಗೆ ಗೊಂದಲ ಸೃಷ್ಟಿಸಿದರು ನಂತರ ಪೆÇಲೀಸರ ಸಹಕಾರ ದೊಂದಿಗೆ ಸಭೆಯು ಗೊಂದಲ ನಿವಾರಣೆಯ ಮೂಲಕ ಯಶಸ್ವಿಯಾಗಿ ಸಭೆ ಜರುಗಿಸಲಾಯಿತು ಎಂದು ತಿಳಿಸಿದರು.
ಈ ವಾರ್ಷಿಕ ಮಹಾ ಸಭೆಯಲ್ಲಿ ವ್ಯವಸ್ಥಾಪಕ ಮಹೇಶ್, ಪಾರುಪತ್ತೆಗಾರ ಆಲೀಂ ಉಲ್ಲಾಖಾನ್ ಸಂಘದ ಗೌರವಾಧ್ಯಕ್ಷ ಕೆ.ಎಸ್. ಗಣೇಶ್, ಉಪಾಧ್ಯಕ್ಷೆ ಎಂ.ಎನ್.ಅರುಣ, ನಿರ್ದೇಶಕರಾದ ಆರ್.ಕೃಷ್ಣಗೌಡ, ಡಿ.ಶಿವಣ್ಣ, ಡಿ.ಶಿವಪ್ರಕಾಶ್, ಕೆ.ಎನ್.ಪ್ರಸನ್ನಕುಮಾರ್, ಜಿ.ಎಲ್.ಅಕ್ಷಯ್, ಬಿ.ಕೆ.ರವಿ, ಆರ್.ಎನ್.ಫಾಲಾಕ್ಷ, ಮುಖ್ಯಕಾರ್ಯ ನಿರ್ವಾಹಣಾಧಿಕಾ ಎ.ಎನ್.ಮಂಜುನಾಥ್, ಸಿಬ್ಬಂದಿ ಎನ್.ಹೇಮಲತಾ, ಕೆ.ಎಸ್.ಶೃತಿ ಸೇರಿದಂತೆ ಸದಸ್ಯರುಗಳು ಹಾಜರಿದ್ದರು.