ಸಹ ಕಾರ್ಯದರ್ಶಿಯಾಗಿ ನೇಮಕ
ಚನ್ನಮ್ಮನ ಕಿತ್ತೂರು,ಸೆ22: ತಾಲೂಕಿನ ಬಚ್ಚನಕೇರಿ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಶಿಕ್ಷಕಿ ಶ್ರೀಮತಿ ವೀಣಾ ಶಶಿಧರ ಹಿರೇಮಠ ಇವರನ್ನು ಕರ್ನಾಟಕ ರಾಜ್ಯ ಎನ್‍ಪಿಎಸ್ ನೌಕರರ ಸಂಘದ ರಾಜ್ಯ ಸಹ ಕಾರ್ಯದರ್ಶಿಯನ್ನಾಗಿ ರಾಜ್ಯಾಧ್ಯಕ್ಷ ನಾಡಗೌಡ ಎಂಎ ನೇಮಕ ಮಾಡಿದ್ದಾರೆಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಆರ್.ಎಮ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.