ಕಾಯಕವನ್ನು ದೈವತ್ವಕ್ಕೇರಿಸಿದ ಶರಣರು: ಪ್ರೊ. ಲಕ್ಷ್ಮೀ ಮೋರೆ
ವಿಜಯಪುರ,ಮೇ.3 :ಅಮೆರಿಕದಲ್ಲಿ ಕಾರ್ಮಿಕರ ದುಡಿಮೆಯ ಸಮಯವನ್ನು ಕಡಿತಗೊಳಿಸಲು ಆರಂಭಗೊಂಡ ಕಾರ್ಮಿಕ ಚಳವಳಿ ಸಮಾಜವನ್ನು ಹುಟ್ಟು ಹಾಕಲು ಕಾರಣವಾಯಿತು. ಆದರೆ ಬಸವಾದಿ ಶರಣರು ಅನುಷ್ಠಾನಕ್ಕೆ ತಂದ ಕಾಯಕ ಸಿದ್ದಾಂತವು ಜಗತ್ತಿನ ಆರ್ಥಿಕ ಪ್ರಗತಿಗೆ ವರದಾನವಾಯಿತು. ಶರಣರು ಕಾಯಕವನ್ನು ದೈವತ್ವಕ್ಕೇರಿಸಿದರು. ವರ್ಣ, ಜಾತಿ, ವರ್ಗ, ಲಿಂಗ, ಭೇದಗಳನ್ನು ನಿರಸನಗೊಳಿಸಿ ಎಲ್ಲರಿಗೂ ಕಾಯಕ ಮಾಡಲು ಹಚ್ಚಿದ ಶ್ರೇಯಸ್ಸು ಶರಣರಿಗೆ ಸಲ್ಲುತ್ತದೆ. ಎಂದು ಪ್ರೊ. ಲಕ್ಷ್ಮೀ ಮೋರೆ ಹೇಳಿದರು.
ವೀರಶೈವ ಮಹಾಸಭೆಯ ಲಿಂಗಾಯತ ಭವನದಲ್ಲಿ ಹಮ್ಮಿಕೊಂಡಿದ್ದ ಕಾಯಕ ದಿನ ಹಾಗೂ ದತ್ತಿ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಮಾತನಾಡಿದರು.
ಶರಣ ಸಾಹಿತ್ಯ ಪರಿಷತ್ತಿನ ಲಿಂ. ಬಸಪ್ಪ ಸಾಲಕ್ಕಿ ಮತ್ತು ಲಿಂ. ಸಿದ್ರಾಮಪ್ಪ ಹೊಟಗಿ ಅವರ ಸ್ಮರಣಾರ್ಥ ನಡೆದ ದತ್ತಿ ಕಾರ್ಯಕ್ರಮ ಸಮಾರಂಭದ ಅಧ್ಯಕ್ಷತೆಯನ್ನು ವಿ.ಸಿ. ನಾಗಠಾಣ ವಹಿಸಿದ್ದರು.
ಅತಿಥಿಗಳಾಗಿ ಮಾತನಾಡಿದ ಡಾ. ಬನುದೇವಿ ಸಂಕಣ್ಣವರ, ಕಾಯಕ ತತ್ವವು ಕನ್ನಡ ನಾಡು ಜಗತ್ತಿಗೆ ನೀಡಿದ ಅಮೂಲ್ಯ ಕೊಡುಗೆಯಾಗಿದೆ. ಎಂದು ಹೇಳಿದರು.
ಪ್ರತಿ ವರ್ಷದಂತೆ ಈ ಸಲವೂ ಕೆಳಹಂತದ ಕರ್ಮಚಾರಿಗಳಾದ ಸುಭಾಸ ಮೋರೆ, ವಸಂತ ಕಾಂಬಳೆ, ಶಾಮ ಗೊಲ್ಲರ, ಸರೋಜಾ ಮೋರೆ ಮತ್ತು ಶಾಂತಾ ರಜಪೂತ ಅವರನ್ನು ಪ್ರಸಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು.
ಜಂಬುನಾಥ ಕಂಚ್ಯಾಣಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ಡಾ. ಉಷಾದೇವಿ ಹಿರೇಮಠ ಮತ್ತು ಗಂಗಾಧರ ಸಾಲಕ್ಕಿ ಉಪಸ್ಥಿತರಿದ್ದರು.
ರಾಜಶೇಖರ ಉಮರಾಣಿ ಸ್ವಾಗತಿಸಿದರು. ಈರಣ್ಣ ತೊಂಡಿಕಟ್ಟಿ ನಿರೂಪಿಸಿದರು. ಡಾ. ವಿ.ಡಿ. ಐಹೊಳ್ಳಿ ವಂದಿಸಿದರು.
ಯುವರಾಜ ಚೊಳಕೆ ಶಿವದಾಸಿಮಯ್ಯ ಸ್ಮರಣಾರ್ಥ ರೂ. 25,000ಗಳ ದತ್ತಿಯನ್ನು ನೀಡಿದರು. ಸಮಾರಂಭದಲ್ಲಿ ಬಿ.ಎಚ್. ಬಾದರಬಂಡಿ, ಎಸ್.ಜಿ. ನಾಡಗೌಡರ, ಎಂ.ಎಂ. ಅವರಾದಿ ಎಸ್.ವಾಯ್. ಗದಗ, ಪರಶುರಾಮ ಪೋಳ, ವಿ.ಎಸ್. ತೇಲಿ, ಮ.ಗು. ಯಾದವಾಡ, ಶಾರದಾ ಕೊಪ್ಪ, ಎಸ್.ಬಿ. ದೊಡಮನಿ, ಎಸ್.ಎಸ್. ಕೊಕಟನೂರ ಮುಂತಾದವರು ಉಪಸ್ಥಿತರಿದ್ದರು.