ಸಾಂಸ್ಕøತಿಕ ಕಾರ್ಯಕ್ರಮಕ್ಕೆ ಶ್ರೀಗಳಿಂದ ಚಾಲನೆ
ಸೇಡಂ,ಮೇ,03:ಆರಾಧ್ಯ ದೈವ ಶ್ರೀ ಕೊತ್ತಲ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ದೇವಾಲಯದ ಆವರಣದಲ್ಲಿ ಶ್ರಾವಣಿ ಭರತನಾಟ್ಯ ಟ್ರಸ್ಟ್ ಸೇಡಂ ವತಿಯಿಂದ ಹೆಜ್ಜೆಗೊಂದು ಗೆಜ್ಜೆಪೂಜೆ( ಸಂಜೆ 5 ರಿಂದ 8 ಗಂಟೆವರೆಗೆ) ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪರಮ ಪೂಜ್ಯ ಶ್ರೀ ಶಿವಶಂಕರೇಶ್ವರ ಶಿವಾಚಾರ್ಯ ಸ್ವಾಮಿಗಳು ಹಾಗೂ ಪೂಜ್ಯ ಶ್ರೀ ಸದಾಶಿವ ಸ್ವಾಮಿಗಳು ಚಾಲನೆ ನೀಡಿ ಮಾತನಾಡಿದರು.ಈ ವೇಳೆಯಲ್ಲಿ ಪ್ರಭಾಕರ್ ಜೋಶಿ, ಮಾಹಿಪಾಲರೆಡ್ಡಿ ಮುನ್ನೂರ
ಬೆಂಗಳೂರಿನ ಭರತನಾಟ್ಯ ಕಲಾವಿದರಾದ ಗುರುರಾಜ್ ಎಂ.ಎ, ಶ್ರಾವಣಿ ಭರತನಾಟ್ಯ ಕಲಾವಿದರ ಸಂಘ ಅಧ್ಯಕ್ಷರಾದ,ಶ್ರೀಮತಿ ಶೃತಿ ಶಾಂತವೀರಯ್ಯ ಚರಂತ್ರಿಮಠ , ಶ್ರೀಮತಿ ಸುಜಾತ ಇಲ್ಲಾಳ, ಶ್ರೀಮತಿ ಮಲ್ಲಮ್ಮ ಕಲಾವಿದರು ವೇದಿಕೆಯ ಮೇಲೆ ಇದ್ದರು. ಕಾರ್ಯಕ್ರಮದ ಮುಂಭಾಗದಲ್ಲಿ ಶಿವಯೋಗಿ ಸಕ್ಪಲ್, ಮಕ್ಕಳು ಪಾಲಕರು ಉಪಸ್ಥಿತರಿದ್ದರು.
ನಿರೂಪಣೆ ಶ್ರೀಮತಿ ಜ್ಯೋತಿ ಲಿಂಗಮಪಲ್ಲಿ ನಡೆಸಿಕೊಟ್ಟರು, ಸ್ವಾಗತ ಶ್ರೀಮತಿ ಶಿಲ್ಪಾ ಕೊಳ್ಳಿ ಕೋರಿದರು,ಶ್ರೀಮತಿ ನಾಗರತ್ನ ವಂದಿಸಿದರು.