ಕಡ್ಡಾಯವಾಗಿ ಉತ್ತಮ ವ್ಯಕ್ತಿಗೆ ಮತದಾನ ಮಾಡಿ: ದೊಡ್ಡಪ್ಪಗೌಡ ನರಬೋಳ
ಯಡ್ರಾಮಿ:ಮೇ.3:ಕಡ್ಡಾಯವಾಗಿ ಉತ್ತಮ ದೇಶದ ಹಿತವನ್ನು ಕಾಯುವ ವ್ಯಕ್ತಿಗೆ ಮತದಾನ ಮಾಡಬೇಕು ಎಂದು ದೊಡ್ಡಪ್ಪಗೌಡ ಪಾಟೀಲ ನರಬೋಳ ಮಾಜಿ ಜೇವರ್ಗಿ ಶಾಸಕರು ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಬಸವೇಶ್ವರ ಕಲಾ ಬಳಗದ ವತಿಯಿಂದ ಆಯೋಜನೆ ಮಾಡಿದ ಸತಿ ಸಿಲವಂತಿ ನಾಟಕ ಉದ್ಘಾಟನೆ ಮಾಡಿ ಮಾತನಾಡುತ್ತ.ಯಡ್ರಾಮಿ ಪಟ್ಟಣ ನಾಟಕದ ಪ್ರಸಿದ್ಧಿ ಪಟ್ಟಣ.ನಾಟಕ ಆಡುವುದು ಅಲ್ಲದೆ ನಾಟಕ ಕೂಡ ರಚನೆ ಮಾಡುವ ಶಕ್ತಿ ಈ ನಾಡಿನ ಜನರಲ್ಲಿ ಇದೆ.
ಈ ಕಾಲದಲ್ಲಿ ಪ್ರತಿವರ್ಷ ನಮ್ಮ ರಾಜಕೀಯ ನಾಟಕಗಳು ಚಾಲು ಆಗುತ್ತವೆ ತಾವೂ ತಮ್ಮ ದೇಶದ ಹಿತವನ್ನು ಕಾಪಾಡುವ ವ್ಯಕ್ತಿಗಳಿಗೆ ಮತದಾನ ಮಾಡಿ ತಮ್ಮ ಕರ್ತವ್ಯ ಮತ್ತು ಹಕ್ಕು ಚಲಾಯಿಸಬೇಕು ಎಂದು ಹೇಳಿದರು.
ಪೂಜ್ಯ ಡಾ.ರುದ್ರಮುನಿ ಶಿವಾಚಾರ್ಯರು ಕಡಕೋಳ ಮಹಾಮಠ ಅವರು ಮಾತಾನಾಡಿ.ಯಡ್ರಾಮಿ ಪಟ್ಟಣ ನಾಟಕದ ಕಣಿ ಎಂದು ಹೇಳಿದರು ತಪ್ಪಾಗಲಾರದು.ಯಡ್ರಾಮಿ ತಾಲೂಕು ಹಲವಾರು ನಾಟಕಗಾರರನ್ನು ಸಾಹಿತಿಗಳನ್ನು ನೀಡಿದ ನೆಲವಾಗಿದ್ದು.
ಹಿಂತಹ ತಾಲೂಕಿನಲ್ಲಿ ಮುಂದಿನ ದಿನಮಾನದಲ್ಲಿಯೂ ಕೂಡ ನಾಟಕಗಳು ಉಳಿಸಿಕೊಂಡು. ತಾಲೂಕು ಮತ್ತು ಗ್ರಾಮದ ಜನರಿಗೆ ಸಾಮಾಜಿಕ ಜಾಗೃತಿ ಮೂಡಿಸುವ ಕಾರ್ಯಕ್ರಮ ಆಗಬೇಕು ಎಂದು ನುಡಿದರು.
ಈ ಸಂದರ್ಭದಲ್ಲಿ ಪೂಜ್ಯ ಡಾ.ರುದ್ರಮುನಿ ಕಡಕೋಳ ಮಹಾಮಠ, ಮಾಜಿ ಶಾಸಕರದ ದೊಡ್ಡಪ್ಪಗೌಡ ಪಾಟೀಲ ನರಬೋಳ, ಗೋಲ್ಲಾಳಪ್ಪಗೌಡ ಮಾಗಣಗೇರಿ ಜೆಡಿಎಸ್ ಮುಖಂಡರು,ರಮೇಶ ಬಾಬು ವಕಿಲರು,ಗಂಡಪ್ಪ ಸಾಹು ಕುಳಗೇರಿ,ಲಿಂಗನಗೌಡ ಪಾಟೀಲ,ಗೀರೇಪ್ಪಗೌಡ ಪಾಟೀಲ,ಬಸವರಾಜ ಪಾಟೀಲ ಸಾಲಿಮಠ ಗುತ್ತಿಗೇದ್ದಾರರು, ಮಾಲಿಂಗಪ್ಪಗೌಡ ಬಡ್ಡಪ್ಪಗೋಳ, ಅಜಮೀರ ಪಟೇಲ್ ಚಿಂಚೋಳ್ಳಿ ,ಕಾಸಿನಾಥ ತಾಳಿಕೋಟಿ, ಬಸಲಿಂಗಪ್ಪ ಅಂಕಲಕೋಟಿ ,ಈರಣ್ಣ ಬಜಂತ್ರಿ,ಶಪೀ ಉಲ್ಲಾ ದಖನಿ,ಅಮರನಾಥ ಕುಳಗೇರಿ ಇತರರು ಉಪಸ್ಥಿತರಿದ್ದರು.