ಪುಣ್ಯವಂತರ ಸ್ಮರಣೆಯಿಂದ ಆದರ್ಶ ಸಮಾಜ ನಿರ್ಮಾಣ : ಜಯಶ್ರೀಮಾತಾ
ಕಲಬುರಗಿ:ಮೇ.3: ಪುಣ್ಯವಂತರ ಸ್ಮರಣೆ ಮಾಡಿ ಅವರ ಉತ್ತಮ ಕಾರ್ಯಗಳನ್ನು ನೆನೆದರೆ ಆದರ್ಶ ಸಮಾಜ ನಿರ್ಮಾಣವಾಗಲುಸಾಧ್ಯ ಎಂದು ಬಲಭೀಮೇಶ್ವರ ಆಶ್ರಮದ ತಪಸ್ವಿ ಜಯಶ್ರೀ ಮಾತಾಜೀ ಹೇಳಿದರು.
ಅವರು ಚಿತ್ತಾಪುರ ತಾಲೂಕಿನ ದಂಡೋತಿ ಗ್ರಾಮದಲ್ಲಿ ನಡೆದ ಕಾಯಕಯೋಗಿ ಗದಿಗಯ್ಯ ಮಹಾ ಸ್ವಾಮಿಗಳು ಭೃಂಗಿಮಠ ಅವರ 16 ನೇ ಪುಣ್ಯ ಸ್ಮರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ವಿವಿಧ ಸಾಧಕರಿಗೆ ಸನ್ಮಾನ ಹಾಗೂ ಬಹುಭಾಷಾ ಕವಿಗೋಷ್ಠಿಯನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ಉತ್ತಮ ಮತ್ತು ಕೆಟ್ಟ ಎರಡು ಸಂಸ್ಕøತಿ ಇರುತ್ತವೆ ಉತ್ತಮದ್ದನ್ನು ಆಯ್ಕೆ ಮಾಡಿದರೆ ಉತ್ತಮ ಫಲವೇ ಸಿಗುತ್ತವೆ ಪೂಜ್ಯ ಗದಿಗಯ್ಯ ಸ್ವಾಮಿಗಳ ಅತ್ಯುತ್ತಮ ವಿಚಾರವನ್ನು ಸಮಾಜದಲ್ಲಿ ಬಿತ್ತಿದ ಮಹಾತ್ಮರಾಗಿದ್ದರು.ಅವರ ನಡೆ ನುಡಿ ,ಅವರು ಭಕ್ತರಿಗೆ ನೀಡಿದ ವಿಶ್ವಾಸ ನಂಬಿಕೆ ಮಾದರೀಯವಾಗಿದೆ, ಅವರೊಬ್ಬ ನಿಸ್ವಾರ್ಥದಿಂದ ಭಕ್ತರಿಗೆ ಅತ್ಯುತ್ತಮ ಸಂಸ್ಕಾರ ಭೋಧಿಸಿದ ಗುರುವಾಗಿದ್ದರು ಎಂದರು
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅಂತರಾಷ್ಟ್ರೀಯ ಉರ್ದು ಕವಿ ಸೈಯದ್ ಜಾಹೀರ್ ಆಹ್ಮದ ಫನ ಅವರು ಮಾತನಾಡಿ ಜಾತಿ,ಕುಲ ಎಂದು ಹೊಡೆದಾಡುತ್ತಿರವ ಇಂದಿನ ದಿನಮಾನದಲ್ಲಿ ಎಲ್ಲರಿಗೂ ಸಮಾನವಾಗಿ ಗೌರವದಿಂದ ಕಾಣುತ್ತಲೇ ಧರ್ಮದಿಂದ ನುಡಿದಂತೆ ನಡೆದು ತೋರಿಸಿದ ಸರ್ವಜನಾಂಗದ ಒಳಿತು ಬಯಸಿದ ಮಹಾತ್ಮ ಪೂಜ್ಯ ಗದಿಗಯ್ಯಮುತ್ಯಾ ಅವರು ಆಗಿದ್ದರು ಇಂತಹವರ ಪುಣ್ಯ ಸ್ಮರಣೆಯಿಂದ ಸಮಾಜದಲ್ಲಿ ಪರಸ್ಪರ ಉರಿಯುತ್ತಿರುವ ಧಗೆ ನಂದಿಸಿ ಶಾಂತಿ ಸ್ಥಾಪಿಸಲು ಸಾಧ್ಯವಾಗುತ್ತದೆ ಎಂದ ಅವರು ಶಿವಮೊಗ್ಗದಿಂದ ದಂಡೋತಿಯವರೆಗೆ ಬರಲು ಗದಿಗಯ್ಯ ಸ್ವಾಮೀಜೀ ಅವರ ಭಾವೈಖ್ಯತೆ ನಮಗೆ ಪ್ರೇರಣೆ ಎಂದರು.
ಸನ್ಮಾನ ಸ್ವೀಕರಿಸಿ ಬಿ ಹೆಚ್ ನಿರಗುಡಿ, ಡಾ:ಚಂದು ಜಾಧವ ,ರಾಜು ಹಿರೇಮಠ ಮುಂತಾದವರುಮಾತನಾಡಿದರು.
ಕಾಂಬಳೇಶ್ವರ ಮಠದ ಷ.ಬ್ರ.ಸೋಮಶೇಖರ ಶಿವಾಚಾರ್ಯರು ಸಾನಿಧ್ಯವಹಿಸಿದ್ದರು.
ಮಲ್ಲಿಕಾರ್ಜುನ ಭೃಂಗಿಮಠ ಸ್ವಾಗತಿಸಿದರು.
ರೇವಣಸಿದ್ದಯ್ಯನವರು ಪ್ರಸ್ತಾವಿಕ ಮಾತುಗಳನ್ನಾಡಿದರು.
ಈ ಸಂಧರ್ಬದಲ್ಲಿ ಸಾಧಕರಾದ ಶಿವಾನಿ,ಚೈತ್ರಪವಿತ್ರ, ರಾಣಿ ರಾಜು ಹಿರೇಮಠ, ವೀರಯ್ಯ ಸ್ವಾಮಿ ಗುರವಿನ ಅಕ್ಕಮಹಾದೇವಿ ಅಣವೀರಯ್ತ ಮಠಪತಿ,ಮುಂತಾದವರನ್ನು ಸನ್ಮಾನಿಸಿ ಗೌರವಿಸಲಾಯಿತು.ಕಾವೇರಿಮಾತಾ ಕುರಳ್ಳಿ ಅವರು ಸಮ್ಮುಖವಹಿಸಿದ್ದರು.