ತೆಂಗಿನ ಎಳೆ ನೀರಿನಿಂದ ಲಚ್ಯಾಣ ಶ್ರೀ ಶಂಕರಲಿಂಗೇಶ್ವರ ಮಹಾರಥ ಶುದ್ಧೀಕರಣ
ವಿಜಯಪುರ,ಮೇ.3: ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಈಚೆಗೆ ನಡೆದ ಶ್ರೀ ಶಂಕರಲಿಂಗೇಶ್ವರ ಮಹಾರಥೋತ್ಸವದಲ್ಲಿ ಪಾಲ್ಗೊಳ್ಳಲು ಭಕ್ತರು ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ನಿರೀಕ್ಷೆಗೂ ಮೀರಿ ಆಗಮಿಸಿದ ಹಿನ್ನಲೆ ಜನದಟ್ಟಣೆ ಉಂಟಾಗಿ ಕಾಲ್ತುಳಿತಕ್ಕೆ ಒಳಗಾಗಿ ರಥದ ಚಕ್ರಕ್ಕೆ ಸಿಲುಕಿದ ಸ್ಥಳಿಯ ಮೂವರು ಭಕ್ತರು ಮೃತಪಟ್ಟ ಹಿನ್ನಲೆ ಗುರುವಾರದಂದು 2501 ಎಳೆಯ ತೆಂಗಿನ ಕಾಯಿ ನೀರಿನಿಂದ ರಥವನ್ನು ಶುದ್ಧೀಕರಿಸಲಾಯಿತು.
ಈ ನಿಮಿತ್ತ ಪ್ರಾರಂಭದಲ್ಲಿ ಬಂಥನಾಳದ ಶ್ರೀ ಡಾ. ವೃಷಭಲಿಂಗೇಶ್ವರ ಮಹಾಶಿವಯೋಗಿಗಳು, ಅಗರಖೇಡÀ ವಿರಕ್ತಮಠದ ಶ್ರೀ ಪ್ರಭುಲಿಂಗ ಸ್ವಾಮೀಜಿ, ಆಳೂರಿನ ಶ್ರೀ ಶಂಕರಾನಂದ ಸ್ವಾಮೀಜಿ, ಶಿರವಾಳದ ಶ್ರೀ ಸೋಮಲಿಂಗ ಸ್ವಾಮೀಜಿ, ಸೊಲ್ಲಾಪುರದ ಶ್ರೀ ಜಯಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ವಿಘ್ನೇಶ್ವರ ಪೂಜೆ, ರಥಕ್ಕೆ ಮಹಾರುದ್ರಾಭಿಷೇಕ, ಸ್ವಸ್ತಿ ಪುಣ್ಯವಾಚನ, ಹೋಮ ಹವನ ಕಾರ್ಯಕ್ರಮ ಶಾಸ್ತ್ರೋಕವಾಗಿ ನೆರವೇರಿತು.
ತೆಲಂಗಾಣ ರಾಜ್ಯದ ಗುರ್ಜಾಲದ ಅಭಿಷೇಕ ಹಿರೇಮಠ, ಯಾದಗಿರಿ ಜಿಲ್ಲೆಯ ರಟ್ನಡಗಿ ಸಿದ್ದಯ್ಯ ಸ್ವಾಮೀಜಿ, ಜಾಲಾಪುರದ ವೀರಭದ್ರಯ್ಯ ಸ್ವಾಮೀಜಿ ನಿರಂತರ 4 ಗಂಟೆಯ ವರೆಗೆ ವೇದ ಘೋಷ, ಸಂಸ್ಕøತದಲ್ಲಿ ಮಂತ್ರ ಪಠಿಸಿದರು. ಸ್ಥಳೀಯ ವೇ. ಈರಯ್ಯ ಹಿರೇಮಠ ದಂಪತಿ ಪೂಜೆ ಸಲ್ಲಿಸಿದರು.
ಬಳಿಕ ರಥದ ಮೇಲಿನ ಬಂಥನಾಳದ ಲಿಂಗೈಕ್ಯ ಶ್ರೀ ಶಂಕರಲಿಂಗೇಶ್ವರ ಹಾಗೂ ಲಿಂ. ಶ್ರೀ ಸಂಗನಬಸವೇಶ್ವರ ಮಹಾಶಿವಯೋಗಿಗಳ ಮೂರ್ತಿಗೆ ಅಭಿಷೇಕ ನೆರವೇರಿಸಿದ ಬಳಿಕ ಸ್ಥಳೀಯ ಸುತ್ತಲ ಗ್ರಾಮದ ಭಕ್ತರು ಕೊಡ ಮಾಡಿದ ಒಟ್ಟು 2501 ಎಳೆಯ ಟೆಂಗಿನ ಕಾಯಿ ನೀರಿನಿಂದ ಇಡೀ ರಥವನ್ನು ಪೂಜ್ಯರ, ನೆರೆದ ಸಹಸ್ರಾರು ಭಕ್ತರÀ ಸಮ್ಮುಖದಲ್ಲಿ ಮಂತ್ರಘೋಷದೊಂದಿಗೆ ಸಂಪೂರ್ಣ ಶುದ್ಧೀಕರಿಸಲಾಯಿತು.
ಬಳಿಕ ಶ್ರದ್ದಾ, ಭಕ್ತಿಯಿಂದ ರುದ್ರ ಹೋಮ, ಗಣಹೋಮ, ಮಹಾಮೃತ್ಯುಂಜಯ ಹೋಮ, ಜಯಾದಿ ಹೋಮ, ಹವನ ಕಾರ್ಯಕ್ರಮ ರಥ ಶುದ್ಧೀಕರಣ ಕಾರ್ಯ ಸಂಪನ್ನಗೊಂಡಿತು. ಅದೇ ದಿನ ಸಂಜೆ ಗ್ರಾಮದ ಸಂಪ್ರದಾಯದಂತೆ ಉತ್ಸವದ ನಿಮಿತ್ತ ರಥಕ್ಕೆ ಅಳವಡಿಸಲಾದ ಕಳಶದ ಅವರೋಹಣ ಕಾರ್ಯ ಸರ್ವ ಭಕ್ತರ ಸಮ್ಮುಖದಲ್ಲಿ ನಡೆಯಿತು.